ಕನ್ನಡದ ಕಿರುತೆರೆಯ ಟಾಪ್ ನಟಿಯರಲ್ಲಿ ಒಬ್ಬರಾದ ಭವ್ಯ ಗೌಡ ರವರ ತಂಗಿ ಕೂಡ ಯಾವ ಹೀರೊಯಿನ್ ಗು ಕಡಿಮೆ ಇಲ್ಲ, ಹೇಗಿದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ಟಿಕ್ ಟಾಕ್ ಹಾಗೂ ಶಾರ್ಟ್ ವಿಡಿಯೋ ಫಾರ್ಮ್ಯಾಟ್ಗಳು ಹಲವಾರು ಪ್ರತಿಭೆಗಳನ್ನು ಕನ್ನಡ ಕಿರುತೆರೆ ಹಾಗೂ ಚಿತ್ರರಂಗಕ್ಕೆ ಕರೆತಂದಿವೆ. ಅಂಥವರಲ್ಲಿ ಒಬ್ಬ ಪ್ರತಿಭೆಯ ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಗೀತಾ ಧಾರಾವಾಹಿಯ ಭವ್ಯ ಗೌಡರವರ ಕುರಿತಂತೆ. ಭವ್ಯ ಗೌಡರವರು ಮೊದಲು ಜನಪ್ರಿಯರಾಗಿದ್ದು ಟಿಕ್ ಟಾಕ್ ನಲ್ಲಿ. ಟಿಕ್ ಟಾಕ್ ನಲ್ಲಿ ಅವರ ವೀಡಿಯೋಗಳನ್ನು ನೋಡಿ ಕೆಲವರು ಟ್ರೋಲ್ ಮಾಡಿದ್ದರು ಕೂಡ ಅವರ ಜನಪ್ರಿಯತೆಯನ್ನು ಹೆಚ್ಚುವಂತೆ ಮಾಡಿತು.

ಈ ಕಾರಣದಿಂದಾಗಿ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದು ಗೀತಾ ದಾರವಾಹಿ ಅವರ ಕೈಸೇರಿತ್ತು. ಗೀತ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭವಾದ ಮೇಲೆ ಜನರಿಗೆ ಅವರ ಅಭಿಪ್ರಾಯಗಳು ಬದಲಾಗತೊಡಗಿದವು. ಕರ್ನಾಟಕದ ಕಿರುತೆರೆ ಪ್ರೇಕ್ಷಕರು ಭವ್ಯ ಗೌಡ ನಟನೆಯ ಗೀತಾ ಧಾರವಾಹಿಯನ್ನು ಚಾಚೂತಪ್ಪದೆ ನೋಡಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಭವ್ಯ ಗೌಡ ನಟನೆಯ ಗೀತಾ ದಾರವಾಹಿ ಉತ್ತಮ ಟಿಆರ್ ಪಿಯನ್ನು ಪಡೆಯಲು ಪ್ರಾರಂಭಿಸಿತು. ಅದಕ್ಕೆ ಮುಖ್ಯ ಕಾರಣ ಭವ್ಯ ಗೌಡರವರ ಅದ್ಭುತ ನಟನೆ ಕೂಡ ಕಾರಣವಾಗಿತ್ತು.

ಇನ್ನು ಇತ್ತೀಚಿನ ದಿನಗಳಲ್ಲಿ ಭವ್ಯ ಗೌಡ ರವರಿಗೆ ಕೇವಲ ಧಾರವಾಹಿ ಮಾತ್ರವಲ್ಲದೆ ಸಿನಿಮಾರಂಗದಿಂದ ಕೂಡ ಹಲವಾರು ಅವಕಾಶಗಳು ಕರೆಗಳು ಬರುತ್ತಿವೆ. ಇನ್ನು ಭವ್ಯ ಗೌಡ ರವರಿಗೆ ದಿವ್ಯ ಗೌಡ ಎಂಬ ತಂಗಿ ಕೂಡ ಇದ್ದಾರೆ. ದಿವ್ಯ ಗೌಡರವರು ಕೂಡ ಅಕ್ಕನಂತೆ ಟಿಕ್ ಟಾಕ್ ಮಾದರಿಯ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ. ಇನ್ನು ನೀವು ಭವ್ಯ ಗೌಡ ರವರೊಂದಿಗೆ ಹಲವಾರು tik.tok ಮಾದರಿಯ ವಿಡಿಯೋಗಳಲ್ಲಿ ದಿವ್ಯಾಗೌಡ ರವರನ್ನು ನೋಡಿರಬಹುದು. ಇವರು ಇನ್ನು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಸಿನಿಮಾ ಅಥವಾ ದಾರವಾಹಿ ಕ್ಷೇತ್ರಕ್ಕೆ ಬಂದರು ಬರಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.