ಮೊದಲ ಬಾರಿಗೆ ಈ ಬಾರಿಯ ಬಿಗ್ ಬಾಸ್ ಕುರಿತು ಮಹತ್ವದ ಅಪ್ಡೇಟ್ ಕೊಟ್ಟ ಪರಮೇಶ್ವರ್ ಗುಂಡ್ಕಲ್. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಕನ್ನಡ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದಾಗಿ ಕಿರುತೆರೆಯ ರಿಯಾಲಿಟಿ ಶೋ ಪ್ರಿಯರಿಗೆ ಮೊದಲಿನಿಂದಲೂ ಕೂಡ ಚಿಂತೆಯಾಗಿತ್ತು ಆದರೆ ಆ ಕುತೂಹಲಕ್ಕೆ ಈಗ ಸರಿಯಾದ ಉತ್ತರ ದೊರೆತಿದೆ. ಹೌದು ಗೆಳೆಯರೇ ಈ ಬಾರಿಯ ಬಿಗ್ ಬಾಸ್ ಪ್ರಾರಂಭ ಆಗುತ್ತಿರುವುದು ಆಗಸ್ಟ್ ತಿಂಗಳಲ್ಲಿ. ಆದರೆ ಈ ಬಾರಿ ಎರಡೆರಡು ಬಿಗ್ಬಾಸ್ ಪ್ರಸಾರವನ್ನು ಕಾಣಲಿದೆ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ಹಿಂದಿಯಲ್ಲಿ ಯಶಸ್ವಿಯಾಗಿರುವ ಮಿನಿ ಬಿಗ್ ಬಾಸ್ ಕನ್ನಡದಲ್ಲಿ ಕೂಡ ಈ ಬಾರಿ ಪರಿಚಯವಾಗಲಿದೆ ಎಂಬುದಾಗಿ ತಿಳಿದುಬಂದಿದೆ.

ಇನ್ನೂ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಗಳು ಈ 42ದಿನಗಳ ಮಿನಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಕಾರ್ಯಕ್ರಮವನ್ನು ಕೂಡ ಕಿಚ್ಚ ಸುದೀಪ್ ಅವರವರ ನಿರೂಪಕನಾಗಿ ನಡೆಸಿಕೊಡಲಿದ್ದಾರೆ. ಇದಾದ ನಂತರವೇ ಪ್ರಮುಖ ಬಿಗ್ ಬಾಸ್ ಕನ್ನಡ ಸೀಸನ್ 9 ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ ಎಂಬ ಸುಳಿವು ಕಲರ್ಸ್ ಕನ್ನಡ ವಾಹಿನಿಯಿಂದ ಸಿಕ್ಕಿದೆ. ಇನ್ನು ಕಾರ್ಯಕ್ರಮದ ಆರಂಭಕ್ಕೂ ಮುನ್ನವೇ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ರವರು ಈ ಕುರಿತಂತೆ ಅಪ್ಡೇಟ್ ನೀಡಿದ್ದಾರೆ.

bbk 1 | ಮೊದಲ ಬಾರಿಗೆ ಈ ಬಾರಿಯ ಬಿಗ್ ಬಾಸ್ ಕುರಿತು ಮಹತ್ವದ ಅಪ್ಡೇಟ್ ಕೊಟ್ಟ ಪರಮೇಶ್ವರ್ ಗುಂಡ್ಕಲ್. ಏನಂತೆ ಗೊತ್ತೇ??
ಮೊದಲ ಬಾರಿಗೆ ಈ ಬಾರಿಯ ಬಿಗ್ ಬಾಸ್ ಕುರಿತು ಮಹತ್ವದ ಅಪ್ಡೇಟ್ ಕೊಟ್ಟ ಪರಮೇಶ್ವರ್ ಗುಂಡ್ಕಲ್. ಏನಂತೆ ಗೊತ್ತೇ?? 2

42ದಿನಗಳ ಮಿನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ಬಿಗ್ ಬಾಸ್ ಮನೆಯ ಫೋಟೋ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪರಮೇಶ್ವರ್ ಗುಂಡ್ಕಲ್ ಅವರು ಅತಿಶೀಘ್ರದಲ್ಲೇ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಮಿನಿ ಬಿಗ್ ಬಾಸ್ ನಂತರ ಮುಖ್ಯ ಬಿಗ್ ಬಾಸ್ ಗಾಗಿ ಕೂಡ ಮನೆಯನ್ನು ಮತ್ತೆ ಮರುವಿನ್ಯಾಸ ಮಾಡಲಾಗುವುದು ಎಂಬುದಾಗಿ ಕೂಡ ತಿಳಿದುಬಂದಿದೆ. ಇನ್ನು ಮಿನಿ ಬಿಗ್ ಬಾಸ್ ವೂಟ್ ಆಪ್ಲಿಕೇಷನ್ ನಲ್ಲಿ ಪ್ರಸಾರವನ್ನು ಕಾಣಬಹುದು ಎಂಬ ಮಾತು ಕೂಡ ಓಡಾಡುತ್ತಿದೆ. ಈ ಬಾರಿಯ ಬಿಗ್ ಬಾಸ್ ನ ಹೊಸ ಸ್ವರೂಪದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Comments are closed.