ಮೊದಲೇ ಫಾರ್ಮ್ ನಲ್ಲಿ ಇಲ್ಲ, ಹೀಗಿರುವಾಗ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಶಾಕ್. ಈಗ್ಯಾಕೆ ಆಯಿತು, ಇದೆಲ್ಲ ಎಂದ ಫ್ಯಾನ್ಸ್??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಆಂಗ್ಲರ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಗೆದ್ದುಕೊಂಡಿದ್ದು ಆಗಲೇ ಪ್ರಾರಂಭವಾಗಿರುವ ಏಕದಿನ ಸರಣಿಯಲ್ಲೂ ಕೂಡ ಮೊದಲ ಪಂದ್ಯವನ್ನೇ 10 ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ವನ್ನು ಸಾಬೀತು ಪಡಿಸಿದೆ ಎಂದು ಹೇಳಬಹುದಾಗಿದೆ. ಆದರೆ ವಿರಾಟ್ ಕೊಹ್ಲಿ ರವರ ಅಭಿಮಾನಿಗಳಿಗೆ ಮಾತ್ರ ಚಿಂತೆ ಇನ್ನು ತಪ್ಪಿಲ್ಲ. ಮುಂದಿನ ಟಿ ಟ್ವೆಂಟಿ ವಿಶ್ವಕಪ್ ದೃಷ್ಟಿಯಲ್ಲಿ ಅವರು ಫಾರ್ಮಿಗೆ ಮರಳಿ ಬರುವುದು ಅತ್ಯಗತ್ಯವಾಗಿದೆ.

ಆದರೆ ವಿರಾಟ್ ಕೊಹ್ಲಿ ರವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಪ್ರಾರಂಭಿಸಿ ಟಿ ಟ್ವೆಂಟಿ ಸರಣಿಯಲ್ಲಿ ಕೂಡ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿರುವುದು ನಿಜಕ್ಕೂ ಶೋಚನೀಯವಾಗಿದೆ. ಇದೇ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ತೆಗೆದು ಹಾಕಿ ಚೆನ್ನಾಗಿ ಪ್ರದರ್ಶನ ನೀಡಿದರೆ ಮಾತ್ರ ಅವರನ್ನು ತಂಡದಲ್ಲಿ ಪುನಃ ಸೇರಿಸಿಕೊಳ್ಳಿ ಎಂದು ಹಿರಿಯ ಆಟಗಾರರು ಹೇಳಿಕೆ ನೀಡಿದ್ದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಮೂರನೆ ಟಿ ಟ್ವೆಂಟಿ ಪಂದ್ಯಾಟದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರು ತೊಡೆ ಸಂದು ಇಂಜುರಿಯನ್ನು ಮಾಡಿಕೊಂಡಿದ್ದರು ಇದೇ ಹಿನ್ನಲೆಯಲ್ಲಿ ಅವರನ್ನು ಮೊದಲ ಏಕದಿನ ಪಂದ್ಯಾಟದಿಂದ ಹೊರಗಿಟ್ಟು ಶ್ರೇಯಸ್ ಅಯ್ಯರ್ ರವರನ್ನು ಆಡಿಸಲಾಗಿತ್ತು.

vk 6 | ಮೊದಲೇ ಫಾರ್ಮ್ ನಲ್ಲಿ ಇಲ್ಲ, ಹೀಗಿರುವಾಗ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಶಾಕ್. ಈಗ್ಯಾಕೆ ಆಯಿತು, ಇದೆಲ್ಲ ಎಂದ ಫ್ಯಾನ್ಸ್??
ಮೊದಲೇ ಫಾರ್ಮ್ ನಲ್ಲಿ ಇಲ್ಲ, ಹೀಗಿರುವಾಗ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಶಾಕ್. ಈಗ್ಯಾಕೆ ಆಯಿತು, ಇದೆಲ್ಲ ಎಂದ ಫ್ಯಾನ್ಸ್?? 2

ಆದರೆ ಈಗ ಎರಡನೇ ಏಕದಿನ ಪಂದ್ಯದಿಂದಲೂ ಕೂಡ ಅವರು ಹೊರಗುಳಿದುಕೊಳ್ಳಲಿದ್ದಾರೆ. ಹೀಗೆ ನಡೆದರೆ ಮುಂದಿನ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವ ಸಾಧ್ಯತೆ ಅನುಮಾನ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಮುಂದಿನ ವಿಂಡೀಸ್ ಟಿಟ್ವೆಂಟಿ ಸರಣಿಗೆ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಏಕದಿನ ಸರಣಿಗೆ ಇನ್ನೂ ಕೂಡ ತಂಡವನ್ನು ಅನೌನ್ಸ್ ಮಾಡಿಲ್ಲ. ಹೀಗಾಗಿ ವಿರಾಟ್ ಕೊಹ್ಲಿ ಡ್ರಾಪ್ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

Comments are closed.