Biggboss Kannada: ಅನುಪಮಾ ಗೌಡ ಗೆ ಶಾಕ್ ನೀಡಿದ ಪ್ರೇಕ್ಷಕರು, ಆದರೆ ಬಿಗ್ ಬಾಸ್ ಸಂಭಾವನೆ ರೂಪದಲ್ಲಿ ಕೈ ಹಿಡಿದಿದ್ದು ಹೇಗೆ ಗೊತ್ತೇ? ಎಷ್ಟು ಕೊಟ್ಟಿದೆ ಗೊತ್ತೇ?

Biggboss Kannada: ಬಿಗ್ ಬಾಸ್ ಸೀಸನ್ 9 ಇನ್ನೇನು ಕೊನೆಯ ವಾರಗಳಿಗೆ ಸಮೀಪಿಸುತ್ತಿದೆ ಎಂದು ಹೇಳಬಹುದು. ಪ್ರತಿವಾರವೂ ಒಬ್ಬೊಬ್ಬರು ಸ್ಪರ್ಧಿಯನ್ನು ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಹೊರಹಾಕಲಾಗುತ್ತದೆ. ಅದರಂತೆ ಈ ವಾರ ಮನೆಯಿಂದ ನಟಿ ಅನುಪಮಾ ಗೌಡ ಔಟ್ ಆಗಿದ್ದಾರೆ. ನೆನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಿಚ್ಚ ಸುದೀಪ್ ಅನುಪಮಾ ಗೌಡ ಅವರು ಎಲಿಮಿನೇಟ್ ಆಗುತ್ತಿದ್ದಾರೆ ಎಂದು ತಿಳಿಸಿದರು. ಹೀಗಿದ್ದು ಕೂಡ ಅನುಪಮಾ ಗೌಡ ಅವರನ್ನು ಫಿನಾಲೆ ಕಂಟೆಸ್ಟೆಂಟ್ ಎಂದೇ ಭಾವಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಅವರು ಇದೀಗ ಮನೆಯಿಂದ ಹೊರ ನಡೆದಿದ್ದಾರೆ. ಇಷ್ಟಕ್ಕೂ ಅನುಪಮಾ ಗೌಡ ಇಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಇದ್ದುದ್ದಕ್ಕಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ನಟಿ ಅನುಪಮಾ ಗೌಡ ಕಿರುತೆರೆಯಲ್ಲಿ ನಟಿ ಹಾಗೂ ನಿರೂಪಕಿಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಮೊದಲಿಗೆ ಅಕ್ಕ ಧಾರವಾಹಿಯ ಮೂಲಕ ಪರಿಚಯಗೊಂಡ ಅನುಪಮಾ ತಮ್ಮ ಅದ್ಭುತ ನಟನೆಯ ಮೂಲಕ ಮನೆ ಮಾತಾದರು. ಈ ಧಾರಾವಾಹಿ ಮುಗಿಯುತ್ತಿದ್ದಂತೆಯೇ ಅವರಿಗೆ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆಗಲು ಕೂಡ ಸ್ಪರ್ಧಿಯಾಗಿ ಕನ್ನಡಿಗರ ಮನಗೆದ್ದರು. ಆನಂತರ ಅವರು ಹಲವಾರು ರಿಯಾಲಿಟಿ ಶೋಗಳ ನಿರೂಪಕಿಯಾಗಿ ಗುರುತಿಸಿಕೊಂಡರು. ದಿನದಿಂದ ದಿನಕ್ಕೆ ನಿರೂಪಣೆಯಲ್ಲಿ ಅವರಿಗೆ ಪ್ರಸಿದ್ಧಿ ಸಿಗತೊಡಗಿತ್ತು. ಕಲರ್ಸ್ ಕನ್ನಡದ ಹಲವಾರು ಕಾರ್ಯಕ್ರಮಗಳಿಗೆ ಅವರು ನಿರೂಪಣೆ ಮಾಡಿದ್ದಾರೆ. ಅನುಬಂಧದಂತಹ ಪ್ರಶಸ್ತಿ ಕಾರ್ಯಕ್ರಮದಲ್ಲಿಯೂ ಅವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಪ್ರವೀಣರ ವಿಭಾಗದಲ್ಲಿ ಅನುಪಮಾ ಪ್ರವೇಶಿಸಿದ್ದರು. ಅಕ್ಕ ಧಾರವಾಹಿ ಖ್ಯಾತಿಯ ಅನುಪಮಾ ಆನಂತರ ಮಜಾ ಭಾರತ, ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳ ನಿರೂಪಣೆ ಮಾಡಿದ್ದಾರೆ. ಇದನ್ನು ಓದಿ..Biggboss Kannada: ಬಿಗ್ ಬಾಸ್ ನಲ್ಲಿ ಆರ್ಯವರ್ಧನ್ ವಿರುದ್ಧ ಹೊಸ ನಾಟಕ ಆರಂಭಿಸಿದ ಅಮೂಲ್ಯ: ಆರ್ಯ ವರ್ಧನ್ ಫ್ಯಾನ್ಸ್ ಫುಲ್ ಗರಂ. ಯಾಕೆ ಗೊತ್ತೆ?

biggboss kannada anupama | Biggboss Kannada: ಅನುಪಮಾ ಗೌಡ ಗೆ ಶಾಕ್ ನೀಡಿದ ಪ್ರೇಕ್ಷಕರು, ಆದರೆ ಬಿಗ್ ಬಾಸ್ ಸಂಭಾವನೆ ರೂಪದಲ್ಲಿ ಕೈ ಹಿಡಿದಿದ್ದು ಹೇಗೆ ಗೊತ್ತೇ? ಎಷ್ಟು ಕೊಟ್ಟಿದೆ ಗೊತ್ತೇ?
Biggboss Kannada: ಅನುಪಮಾ ಗೌಡ ಗೆ ಶಾಕ್ ನೀಡಿದ ಪ್ರೇಕ್ಷಕರು, ಆದರೆ ಬಿಗ್ ಬಾಸ್ ಸಂಭಾವನೆ ರೂಪದಲ್ಲಿ ಕೈ ಹಿಡಿದಿದ್ದು ಹೇಗೆ ಗೊತ್ತೇ? ಎಷ್ಟು ಕೊಟ್ಟಿದೆ ಗೊತ್ತೇ? 2

ಇವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಗೆ ಮತ್ತೆ ಹೋದ ನಂತರ ಇನ್ನಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂದು ಹೇಳಬಹುದು. ತುಂಬಾ ಬುದ್ಧಿವಂತೆ, ಹಾಗೆ ಚೆನ್ನಾಗಿ ಅನುಪಮಾ ಆಡುತ್ತಾರೆ ಎಂದೆ ಅಭಿಮಾನಿಗಳು ಹೇಳುತ್ತಾರೆ. ಆದರೆ ಅನುಪಮಾ ಫಿನಾಲೆವರೆಗೂ ಇರುತ್ತಾರೆ, ಇವರು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾವಿಸಲಾಗಿತ್ತು. ಆದರೆ ನೆನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅನುಪಮಾ ಕಡಿಮೆ ವೋಟ್ ಪಡೆಯುವ ಮೂಲಕ ಮನೆಯಿಂದ ಹೊರ ನಡೆದಿದ್ದಾರೆ. ಅಂದ ಹಾಗೆ ಬಿಗ್ ಬಾಸ್ ಅನುಪಮಾ ಅವರಿಗೆ ಇಷ್ಟು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ ಕೊಟ್ಟ ಸಂಭಾವನೆ ಎಷ್ಟೆಂದು ಕೇಳಿದರೆ ಆಶ್ಚರ್ಯ ಎನಿಸುತ್ತದೆ. ಒಂದು ವಾರಕ್ಕೆ ಅನುಪಮಾ ಗೌಡ ಅವರಿಗೆ ಒಂದು ಲಕ್ಷ ರೂಪಾಯಿ ಸಂಭಾವನೆ ಎಂದು ನಿಗದಿಪಡಿಸಲಾಗಿತ್ತು. ಅದರಂತೆ ಅನುಪಮಾ ಅವರು 13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ವಾರಕ್ಕೆ ಒಂದು ಲಕ್ಷ ಎಂದರೆ 13 ವಾರಗಳಿಗೆ ಅವರು ಬರೋಬ್ಬರಿ 13 ಲಕ್ಷ ರೂಪಾಯಿ ಮೊತ್ತವನ್ನು ಸಂಭಾವನೆ ರೂಪದಲ್ಲಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Lakshana: ಲಕ್ಷಣ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮೌರ್ಯ ಬದಲಾದದ್ದು ನಾಯಕನ? ಪ್ರೇಕ್ಷರಿಗೆ ಮತ್ತಷ್ಟು ಮನರಂಜನೆ ಫಿಕ್ಸ್

Comments are closed.