Biggboss Kannada:ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರ ಹೇಗಿದೆ ಗೊತ್ತೇ?? ಅದೇಗೆ ದಿವ್ಯ ರವರು ಗುರೂಜಿ ಗಿಂತ ಹೆಚ್ಚು ಮತ ಪಡೆದಿದ್ದಾರೆ ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.
Biggboss Kannada: ಸಾಕಷ್ಟು ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಸೀಸನ್ 9ರ (BBK9) ಕೊನೆಯ ಹಂತದ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಗುರೂಜಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದಾರೆ. ಆದರೆ ಈ ಒಂದು ಎಲಿಮಿನೇಷನ್ ಪ್ರಕ್ರಿಯೆಯ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಮೂಡಿದ್ದು, ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿದೆ. ದಿವ್ಯ ಉರುಡುಗ ಅವರಿಗಿಂತ ಆರ್ಯವರ್ಧನ್ ಗುರೂಜಿ (Aryavardhan) ಕಡಿಮೆ ಮತಗಳನ್ನು ಪಡೆಯಲು ಹೇಗೆ ಸಾಧ್ಯ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದಲ್ಲದೆ ದಿವ್ಯ ಅವರನ್ನು ಉಳಿಸಲೇಬೇಕೆಂದು ಆರ್ಯವರ್ಧನ್ ಅವರನ್ನು ಬೇಕೆಂದೇ ಮನೆಯಿಂದ ಎಲಿಮಿನೇಟ್ ಮಾಡಲಾಗಿದೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ. ಆದರೆ ನಿಜಕ್ಕೂ ಆರ್ಯವರ್ಧನ್ ಗುರೂಜಿ ಮನೆಯಿಂದ ಎಲಿಮಿನೇಟ್ ಆಗಲು ಏನು ಕಾರಣಗಳಿದ್ದವು, ಅಲ್ಲದೆ ದಿವ್ಯ ಉರುಡುಗ ಸೇಫ್ ಆಗಿದ್ದು ಹೇಗೆ ಎನ್ನುವುದರ ಕುರಿತ ಸ್ಪಷ್ಟ ವಿವರಣೆ ಇಲ್ಲಿದೆ.
ಅಂತಿಮವಾಗಿ ನೆನ್ನೆ ನಡೆದ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಗುರುಜಿ ಕೊನೆಗೂ ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ಹೊರ ನಡೆದಿದ್ದಾರೆ. ಬಿಗ್ ಬಾಸ್ ಈ ಮೊದಲೇ ಮಂಗಳವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂದು ಘೋಷಿಸಿತ್ತು. ಅದರಂತೆ ಸ್ಪರ್ಧಿಗಳಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂದು ಅವರವರಿಗೆ ಆತಂಕ ಸೃಷ್ಟಿಯಾಗಿತ್ತು. ಬಿಗ್ ಬಾಸ್ (Bigg Boss) ಲಿಫ್ಟ್ ಮಾದರಿಯ ಒಂದು ವ್ಯವಸ್ಥೆ ಮಾಡಿತ್ತು, ಇದರಲ್ಲಿ ನಿಂತುಕೊಂಡು ಒಂದು ವೇಳೆ ಲಿಫ್ಟ್ ಕೆಳಗೆ ಹೋದರೆ ಅವರೇ ಎಲಿಮಿನೇಟ್ ಆಗುವ ಸ್ಪರ್ಧಿ ಎನ್ನುವುದು ಬಿಗ್ ಬಾಸ್ ಉದ್ದೇಶವಾಗಿತ್ತು. ಅದರಂತೆ ಎಲ್ಲಾ ಸ್ಪರ್ಧಿಗಳನ್ನು ಹೀಗೆ ಮಾಡಲಾಯಿತು. ಈಗಾಗಲೇ ಒಂದು ಬಾರಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದು ಮತ್ತೆ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ದೀಪಿಕಾ ದಾಸ್ (Deepika Das) ಸೇರಿದಂತೆ ಎಲ್ಲ ಸ್ಪರ್ಧಿಗಳು ಸೇವ್ ಆದರು. ಇದಲ್ಲದೆ ದಿವ್ಯ ಉರುಡುಗ (Divya Uruduga) ಅವರಿಗೆ ತಾನು ಸೇವ್ ಆಗುತ್ತೇನೆ ಎನ್ನುವ ವಿಶ್ವಾಸವೇ ಇರಲಿಲ್ಲ. ತಾನು ಖಂಡಿತ ಎಲಿಮಿನೇಟ್ ಆಗುತ್ತೇನೆ ಎಂದುಕೊಂಡಿದ್ದ ದಿವ್ಯ ಎಲ್ಲರಿಗೂ ಎಲಿಮಿನೇಟ್ ಆಗುವ ಮೊದಲೇ ಬಾಯ್ ಹೇಳಿ ಲಿಫ್ಟ್ ಪ್ರವೇಶಿಸಿದರು. ಇದನ್ನು ಓದಿ..Biggboss Kannada: ಆರ್ಯವರ್ಧನ್ ಔಟ್ ಆದ ತಕ್ಷಣ ಲೈವ್ ಗೆ ಬಂದು ಬೇರೆ ಸ್ಪರ್ದಿಗೆ ಸಪೋರ್ಟ್. ಯಾರಿಗೆ ಗೊತ್ತೇ?? ಸುನಾಮಿ ಎಬ್ಬಿಸಿದ ಗುರೂಜಿ.
ತಾನು ಖಂಡಿತ ಎಲಿಮಿನೇಟ್ ಆಗುತ್ತೇನೆ ಎಂದುಕೊಂಡಿದ್ದ ದಿವ್ಯ ಉರುಡುಗ ಸೇಫ್ ಆಗಿದ್ದಾರೆ. ಇನ್ನು ಆರ್ಯವರ್ಧನ್ ಗುರೂಜಿ ಎಲಿಮಿನೇಟ್ ಆಗಿದ್ದಾರೆ. ದಿವ್ಯ ಕಳೆದ ಸೀಸನ್ ಫೈನಲ್ ಪ್ರವೇಶಿಸಿದ್ದರು. ಹಾಗಾಗಿ ಅವರಿಗೆ ಹೆಚ್ಚಿನ ಅಭಿಮಾನಿ ಬಳಗವಿದೆ. ಅಲ್ಲದೆ ಅರವಿಂದ್ ಅವರ ಅಭಿಮಾನಿಗಳು ಸಹ ದಿವ್ಯ ಅವರಿಗೆ ಅಭಿಮಾನಿಗಳಾಗಿದ್ದಾರೆ. ಇನ್ನೂ ಆರ್ಯವರ್ಧನ್ ಗುರೂಜಿ ಸಾಕಷ್ಟು ಕಾರಣಗಳಿಗೆ ವೀಕ್ಷಕರಿಗೆ ಬೇಸರ, ಕಿರಿಕಿರಿ ಉಂಟು ಮಾಡಿದ್ದಾರೆ. ಅಲ್ಲದೆ ಅವರು ಡಬಲ್ ಗೇಮ್ ಮಾಡುತ್ತಾರೆ ಎಂದು ವೀಕ್ಷಕರು ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಕೆಲವೊಮ್ಮೆ ರೂಪೇಶ್ ಶೆಟ್ಟಿ ನನ್ನ ಮಗನಿದ್ದಂತೆ, ಅವನು ಗೆದ್ದರೆ ಸಾಕು ಎಂದು ಹೇಳಿದ ಆರ್ಯವರ್ಧನ್ ಗುರೂಜಿ ಆನಂತರ ನಾನೇ ಕಪ್ ಗೆಲ್ಲಬೇಕು ಎಂದು ಹೇಳಿದ್ದರು. ಈ ರೀತಿ ಅವರು ಡಬಲ್ ಗೇಮ್ ಮಾಡಿದ ಸಾಕಷ್ಟು ಉದಾಹರಣೆಗಳಿವೆ ಹೀಗಾಗಿ ಅವರಿಗೆ ಕಡಿಮೆ ವೋಟ್ ಗಳು ಬಿದ್ದಿವೆ ಎಂದು ಕೆಲವರ ಅಭಿಪ್ರಾಯವಾಗಿದೆ. ಈ ಮೂಲಕ ಆರ್ಯವರ್ಧನ್ ಗುರೂಜಿ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದನ್ನು ಓದಿ.. Kannada News: ಚಿಕ್ಕ ವಯಸ್ಸಿನ ಮೋಜಿಗೆ ಬಿದ್ದ ಆಂಟಿ: ಅಡ್ಡ ಇರುವ ಗಂಡನನ್ನು ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ?? ಇಂಗು ಇರ್ತಾರ??
Comments are closed.