Kannada News: ಚಿಕ್ಕ ವಯಸ್ಸಿನ ಮೋಜಿಗೆ ಬಿದ್ದ ಆಂಟಿ: ಅಡ್ಡ ಇರುವ ಗಂಡನನ್ನು ಕೊನೆಗೆ ಏನು ಮಾಡಿದ್ದಾಳೆ ಗೊತ್ತೇ?? ಇಂಗು ಇರ್ತಾರ??
Kannada News: 35 ವರ್ಷದ ಮಹಿಳೆಯೊಬ್ಬಳು 25 ವರ್ಷದ ಯುವಕನ ಜೊತೆಗೆ ಅನೈತಿಕ ಸಂಬಂಧ ಇರಿಸಿಕೊಂಡು ಗಂಡನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮೂವರು ಮಕ್ಕಳು, ಗಂಡ ಎಂದು ತನ್ನ ಸಂಸಾರವನ್ನು ನೋಡಿಕೊಂಡು ಚೆನ್ನಾಗಿ ಬದುಕಬೇಕಿದ್ದ ಮಹಿಳೆಯೊಬ್ಬಳು ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದ ಪೋಲಿ ಯುವಕನೊಬ್ಬನ ಹಿಂದೆ ಬಿದ್ದು ಪ್ರೀತಿ, ಪ್ರೇಮ ಕಾಮದ ಹೆಸರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಗಂಡನನ್ನು ನಿದ್ರೆಗೆ ಜಾರಿಸಿ ಆತನನ್ನು ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪ್ರಜ್ಞೆ ತಪ್ಪಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ. ರಾಜೇಶ್ವರಿ ಎನ್ನುವ ಮಹಿಳೆ ರವಿ ಎನ್ನುವ ತನ್ನ ಪ್ರಿಯಕರನ ಜೊತೆಗೆ ಸೇರಿಕೊಂಡು ಕೊಲೆ ಮಾಡಿದ್ದಾರೆ.
ಅಲ್ಲದೆ ರವಿಯ ಸ್ನೇಹಿತನೊಬ್ಬನು ಈ ಕೃತ್ಯಕ್ಕೆ ಸೇರಿಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಅಚ್ಚರಿ ಎಂದರೆ ಈಗಾಗಲೇ ರಾಜೇಶ್ವರಿ ಎರಡು ಮೂರು ಬಾರಿ ರವಿಯ ಜೊತೆಗೆ ಮನೆಯಲ್ಲಿರುವ ಚಿನ್ನಾಭರಣ ಹಾಗೂ ದುಡ್ಡನ್ನು ತೆಗೆದುಕೊಂಡು ಓಡಿ ಹೋಗಿದ್ದಳು. ತಿಂಗಳುಗಟ್ಟಲೆ ರವಿಯ ಜೊತೆಗೆ ಇದ್ದು ಮತ್ತೆ ಮನೆಗೆ ವಾಪಸ್ ಆಗಿದ್ದಳಂತೆ. ಇಸ್ಟಾದರೂ ಸಹ ನನಗೆ ಪತ್ನಿ ಬೇಕು ಎನ್ನುವ ಕಾರಣ ಹೇಳಿ ನೀತಿಗೆಟ್ಟ ಹೆಂಡತಿಯನ್ನು ಮನೆಯಲ್ಲಿ ಇರಿಸಿಕೊಳ್ಳಲು ಪತಿ ಒಪ್ಪಿಕೊಂಡಿದ್ದ. ಇಷ್ಟೆಲ್ಲ ನಡೆದ ನಂತರ ಗಂಡನನ್ನು ಪೂರ್ತಿ ಮುಗಿಸಿಯೇ ಬಿಡಬೇಕು ಎಂದು ಸ್ಕೆಚ್ ಹಾಕಿದ್ದ ರಾಜೇಶ್ವರಿ ಆತನಿಗೆ ಚಿಕನ್ ಸಾಂಬಾರ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವನು ಪ್ರಜ್ಞೆ ಹೋಗುವಂತೆ ಮಾಡಿದ್ದಾಳೆ. ಆನಂತರ ಪ್ರಿಯಕರ ಮತ್ತು ಅವನ ಸ್ನೇಹಿತನ ಜೊತೆಗೂಡಿ ಕೊಲೆ ಮಾಡಿಬಿಟ್ಟಿದ್ದಾಳೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಿಕನ್ ಸಾಂಬಾರಿಗೆ ನಿದ್ರೆ ಮಾತ್ರೆ ಬೆರೆಸಿ ಗಂಡನಿಗೆ ಊಟ ಬಡಿಸಿದ್ದಾಳೆ.
ಗಂಡ ಸ್ವಲ್ಪ ಸಮಯದ ನಂತರ ಪ್ರಜ್ಞೆ ತಪ್ಪಿದ ಬಳಿಕ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆತ ಅವನ ಸ್ನೇಹಿತನ ಜೊತೆಗೂಡಿ ಈ ಕೊಲೆ ಯತ್ನಕ್ಕೆ ಕೈಜೋಡಿಸಿದ್ದಾರೆ. ರಾಜೇಶ್ವರಿ ಪತಿಯ ಕಾಲು ಹಿಡಿದರೆ ಆತನ ಪ್ರೇಯಕರ ರವಿ ಅವನ ಮೈಮೇಲೆ ಕುಳಿತು ಬಿಗಿಯಾಗಿ ಕೈ ಹಿಡಿದುಕೊಂಡಿದ್ದಾನೆ. ಇನ್ನು ರವಿಯ ಸ್ನೇಹಿತ ಕುತ್ತಿಗೆಗೆ ಸೀರೆ ಬಿಗಿದು ಕೊಲೆ ಮಾಡಿದ್ದಾರೆ ಎಂದು ತನಿಖೆ ನಂತರ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕೊಲೆ ಮಾಡಿದ ನಂತರ ಪ್ರಿಯಕರ ಮತ್ತು ಆತನ ಸ್ನೇಹಿತ ಪರಾರಿಯಾಗಿದ್ದಾರೆ. ಇನ್ನು ರಾಜೇಶ್ವರಿ ಬೆಳಗಾಗುವುದರವರೆಗೂ ಕಾದು ನಂತರ ತನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರಿಗೂ ನಂಬಿಸುವ ಪ್ರಯತ್ನ ಮಾಡಿದ್ದಾಳೆ. ಆದರೆ ಆಕೆಯ ಮಾವ ಇವಳ ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದರಿಂದಾಗಿ ಅನುಮಾನ ಮೂಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆನಂತರ ಎಲ್ಲಾ ಸತ್ಯಾಸತ್ಯತೆ ಹೊರಗೆ ಬಂದಿದೆ. ಕೊಲೆ ಮಾಡಿದ ಆರೋಪಿಗಳು ಈಗ ಪೊಲೀಸರ ಅಥಿತಿಗಳಾಗಿ ಜೈಲು ಸೇರಿದ್ದಾರೆ.
Comments are closed.