Biggboss Kannada: ಆರ್ಯವರ್ಧನ್ ಔಟ್ ಆದ ತಕ್ಷಣ ಲೈವ್ ಗೆ ಬಂದು ಬೇರೆ ಸ್ಪರ್ದಿಗೆ ಸಪೋರ್ಟ್. ಯಾರಿಗೆ ಗೊತ್ತೇ?? ಸುನಾಮಿ ಎಬ್ಬಿಸಿದ ಗುರೂಜಿ.
Biggboss Kannada: ಇಂದು ಕಲರ್ಸ್ ಕನ್ನಡದಲ್ಲಿ (Colors Kannada) ಕೊನೆಯ ಘಟ್ಟ ತಲುಪಿರುವ ಬಿಗ್ ಬಾಸ್ ಸೀಸನ್ 9 (Bigg Boss Kannada Season 9) ಕಾರ್ಯಕ್ರಮ ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಲು ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಕೊನೆಯ ಹಂತದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಸ್ಪರ್ಧಿಗಳ ಜೊತೆಗೆ ವೀಕ್ಷಕರನ್ನು ಕುತೂಹಲಕ್ಕೆ ದೂಡಿತ್ತು. ಇದ್ದ ಕೆಲವೇ ಸ್ಪರ್ಧಿಗಳಲ್ಲಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಮನೆಯಿಂದ ಆಚೆ ನಡೆಯುವ ನತದೃಷ್ಟ ಸ್ಪರ್ಧಿ ಯಾರು ಎನ್ನುವುದು ಅಭಿಮಾನಿಗಳಿಗೆ, ವೀಕ್ಷಕರಿಗೆ ಕುತೂಹಲ ಮೂಡಿಸಿತ್ತು. ಇದಲ್ಲದೆ ಇಷ್ಟು ದಿನಗಳ ಕಾಲ ಮನೆಯಲ್ಲಿದ್ದು ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಹೋಗುವುದು ನಿಜಕ್ಕೂ ಸ್ಪರ್ಧಿಗಳಿಗೆ ದುಃಖದ ವಿಷಯವೇ ಸರಿ. ಈ ಎಲ್ಲಾ ಸರ್ಕಸ್ ನಂತರ ಇದೀಗ ಮಧ್ಯರಾತ್ರಿಯಲ್ಲಿ ಏಕಾಏಕಿ ಆರ್ಯವರ್ಧನ್ (Aryavardhan) ಗುರೂಜಿ ಮನೆಯಿಂದ ಔಟ್ ಆಗಿದ್ದಾರೆ. ಮನೆಯಿಂದ ಹೊರಬಂದ ತಕ್ಷಣವೇ ಮತ್ತೊಬ್ಬ ಸ್ಪರ್ಧಿಯನ್ನು ಅವರು ಸಪೋರ್ಟ್ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.
ಮಿಡ್ ವೀಕ್ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ. ಅಲ್ಲದೆ ಅವರು ಎಲಿಮಿನೇಷನ್ ಆಗುತ್ತಿರುವ ವಿಷಯ ಗೊತ್ತಾದಾಗ ಮನೆಯಿಂದ ಹೊರ ಬರುವಾಗ ಅವರು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಆರ್ಯವರ್ಧನ್ ಗುರೂಜಿಯವರ ಅಭಿಮಾನಿಗಳಿಗೂ ಸಹ ಇದು ನೋವು ತರಿಸಿತು ಎಂದರೆ ತಪ್ಪಾಗಲಾರದು. ಇಷ್ಟು ದಿನ ಇದ್ದು ಕೊನೆಯ ಹಂತದಲ್ಲಿ ಅವರು ಮನೆಯಿಂದ ಔಟ್ ಆದಾಗ ಹೊರಬರುವ ಸಮಯದಲ್ಲಿ ಮಗುವಿನ ಹಾಗೆ ಕಣ್ಣೀರು ಸುರಿಸಿ ಹೊರಬಂದಿದ್ದರು. ಇದೀಗ ಅವರು ಎಲಿಮಿನೇಟ್ ಆದ ನಂತರ ಲೈವ್ ಬಂದು ಮತ್ತೊಬ್ಬ ಸ್ಪರ್ಧಿಯನ್ನು ಸಪೋರ್ಟ್ ಮಾಡಿದ್ದಾರೆ. ಹೌದು ಅವರು ಬೆಂಬಲಿಸಿರುವ ಸ್ಪರ್ಧಿ ಬೇರಾರು ಅಲ್ಲ ರೂಪೇಶ್ ಶೆಟ್ಟಿ. ಎಲ್ಲರೂ ಆರ್ಯವರ್ಧನ್ ರೂಪೇಶ್ ಶೆಟ್ಟಿಯನ್ನು (Roopesh Shetty) ಸಾಮಾನ್ಯವಾಗಿ ಬೆಂಬಲಿಸುವುದಿಲ್ಲ ಎಂದುಕೊಂಡಿದ್ದರು. ಇದೀಗ ಲೈವ್ ಬಂದು ಆರ್ಯವರ್ಧನ್ ಗುರೂಜಿ ರೂಪೇಶ್ ಶೆಟ್ಟಿ ಅವರನ್ನು ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನು ಓದಿ..Kannada News: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಶಿವಣ್ಣ: ಅಪ್ಪು ಹಾಗೂ ದರ್ಶನ್ ಫ್ಯಾನ್ಸ್ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??
“ರೂಪೇಶ್ ಶೆಟ್ಟಿ ತುಂಬಾ ಒಳ್ಳೆಯ ಹುಡುಗ. ಆತ ಚೆನ್ನಾಗಿ ಆಡಿದ್ದಾನೆ. ಅವನು ನನ್ನ ಮಗನಿದ್ದಂತೆ, ಅವನಿಗೆ ದಯವಿಟ್ಟು ಸಪೋರ್ಟ್ ಮಾಡಿ” ಎಂದು ಕಣ್ಣೀರು ಹಾಕಿದ್ದಾರೆ. “ನನಗೆ ಈ ವಾರ ಮನೆಯಿಂದ ಹೊರಗೆ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು. ಆದರೂ ಕೂಡ ಇಷ್ಟು ದಿನಗಳ ನಂತರ ಮನೆಯಿಂದ ಆಚೆ ಬಂದದ್ದು ನೋವುಂಟು ಮಾಡಿದ್ದು, ಹಾಗಾಗಿ ಕಣ್ಣೀರು ಹಾಕಿದೆ” ಎಂದು ಅವರು ಹೇಳಿದ್ದಾರೆ. ಇದಲ್ಲದೆ ರೂಪೇಶ್ ಶೆಟ್ಟಿಗೆ ಎಲ್ಲರೂ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಎಲ್ಲರಿಗೂ ರೂಪೇಶ್ ಶೆಟ್ಟಿ ಗೆಲ್ಲುತ್ತಾರ ಇಲ್ಲವಾ ಎಂದು ಅಭಿಮಾನಿಗಳಿಗೆ ಆತಂಕ ವ್ಯಕ್ತವಾಗಿತ್ತು. ಇದೀಗ ಆರ್ಯವರ್ಧನ್ ಗುರೂಜಿಯವರು ಆಶ್ಚರ್ಯವಾಗುವಂತೆ ರೂಪೇಶ್ ಗೆ ಸಪೋರ್ಟ್ ಮಾಡಿರುವುದರಿಂದಾಗಿ ಅವರು ಖಂಡಿತವಾಗಿಯೂ ಈ ಸೀಸನ್ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ರೂಪೇಶ್ ಶೆಟ್ಟಿ ಅಭಿಮಾನಿಗಳ ಜೊತೆಗೆ ಇದೀಗ ಆರ್ಯವರ್ಧನ್ ಗುರೂಜಿಯವರ ಅಭಿಮಾನಿಗಳು ಸೇರಿಕೊಂಡರೆ ರೂಪೇಶ್ ಶೆಟ್ಟಿ ಗೆಲ್ಲುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ರವರನ್ನು ಮೀರಿಸುವಂತಹ ಕನ್ನಡತಿ ತೆಲುಗಿನಲ್ಲಿ ಮಿಂಚಿಂಗ್. ಯಾರು ಗೊತ್ತೇ ಆ ದೇವಲೋಕದ ಅಪ್ಸರೆ??
Comments are closed.