Kannada Astrology: ಮನೆಯ ಮಹಿಳೆಯರು ಅಪ್ಪಿ ತಪ್ಪಿಯೂ ಕೂಡ ಸ್ನಾನಕ್ಕೂ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಅದೃಷ್ಟ ಲಕ್ಷ್ಮಿ ಹೊರಟು ಹೋಗ್ತಾಳೆ.
Kannada Astrology: ಮನೆಯಲ್ಲಿ ಇರುವ ಮಹಿಳೆಯರು ದೇವರ ವಿಚಾರದಲ್ಲಿ ಸ್ವಲ್ಪ ಕಟ್ಟುನಿಟ್ಟಾಗಿ ಇರಬೇಕು, ಕೆಲವು ವಿಚಾರಗಳನ್ನು ಫಾಲೋ ಮಾಡಬೇಕು. ಅದು ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಮಹಿಳೆಯರು ಕೆಲವು ವಿಷಯಗಳನ್ನು ಪಾಲಿಸದೆ ಹೋದರೆ, ಅದರಿಂದ ಮನೆಗೆ, ಮನೆಯ ಅದೃಷ್ಟಕ್ಕೆ ತೊಂದರೆ ಆಗಬಹುದು. ಅದರಲ್ಲೂ ಸ್ನಾನ ಮಾಡುವುದಕ್ಕಿಂತ ಮೊದಲು ಮಹಿಳೆಯರು ಕೆಲವು ಕೆಲಸಗಳನ್ನು ಮಾಡಬಾರದು., ಅಂತಹ ಕೆಲಸಗಳನ್ನು ಮಾಡಿದರೆ, ಅದೃಷ್ಟ ಲಕ್ಷ್ಮಿ ಮನೆಬಿಟ್ಟು ಹೊರಟು ಹೋಗುತ್ತಾಳೆ. ಆ ವಿಚಾರಗಳು ಏನೇನು ಎಂದು ತಿಳಿದು, ನೀವು ಕೂಡ ಅವುಗಳನ್ನು ತಪ್ಪದೇ ಅನುಸರಿಸಿ..
*ತುಳಸಿ ಗಿಡವನ್ನು ಪವಿತ್ರವಾದ ಗಿಡ, ಲಕ್ಷ್ಮಿದೇವಿಗೆ ಬಹಳ ಪ್ರಿಯವಾದದ್ದು ಎಂದು ಹೇಳುತ್ತಾರೆ. ಹಾಗಾಗಿ ನೀವು ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು, ಅಷ್ಟೇ ಅಲ್ಲ, ತುಳಸಿ ಗಿಡಕ್ಕೆ ನೀರು ಹಾಕಬಾರದು. ಇದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಅಶುದ್ಧವಾಗಿ ತುಳಸಿ ಗಿಡವನ್ನು ಮುಟ್ಟಬಾರದು.
*ಸ್ನಾನ ಮಾಡದೆ ಅಡುಗೆ ಮನೆಗೆ ಪ್ರವೇಶ ಮಾಡಿ ಅಡುಗೆ ಮಾಡಬಾರದು. ಇದು ಲಕ್ಷ್ಮೀದೇವಿಗೆ ಕೋಪ ತರಿಸುತ್ತದೆ. ಸ್ನಾನ ಮಾಡಿದ ನಂತರವೇ ಅಡುಗೆ ಮಾಡಬೇಕು, ಒಂದು ವೇಳೆ ಹಾಗೆ ಮಾಡದೆ ಇದ್ದರೆ, ಅದು ಅನ್ನಪೂರ್ಣೇಶ್ವರಿ ದೇವಿಗೆ ಅವಮಾನ ಮಾಡಿದ ಹಾಗೆ, ಇದರಿಂದ ಲಕ್ಷ್ಮೀದೇವಿಗೂ ಕೋಪ ಬರುತ್ತದೆ. ಇದನ್ನು ಓದಿ..Kannada Astrology: ಈ ನಾಲ್ಕು ರಾಶಿಗಳು ಎಂದರೆ ಹನುಮಂತನಿಗೆ ಅಚ್ಚು ಮೆಚ್ಚು. ಕುದ್ದು ಅವನೇ ಕಾಯಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?

*ಸ್ನಾನ ಮಾಡದೆ ತಿಂಡಿಯನ್ನು ತಿನ್ನಬಾರದು. ದೇಹವನ್ನು ಶುಚಿಗೊಳಿಸದೆ ಇರುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜೊತೆಗೆ ಮನುಷ್ಯರು ಸೋಮಾರಿ ಆಗುವ ಹಾಗೆ ಮಾಡುತ್ತದೆ. ಸ್ನಾನ ಮಾಡಿದರೆ, ಹೊಸದಾದ ಚೈತನ್ಯ ಸಿಗುತ್ತದೆ, ಹಾಗೆಯೇ ಒಳ್ಳೆಯ ವಿಚಾರಗಳನ್ನು ಕೂಡ ಯೋಚನೆ ಮಾಡುತ್ತೀರಿ.
*ಕೆಲವು ಜನರು ಬೆಳಗ್ಗೆ ಎದ್ದ ತಕ್ಷಣ ಕೂದಲು ಬಾಚುತ್ತಾರೆ, ಇದು ಕೂಡ ಒಳ್ಳೆಯ ಅಭ್ಯಾಸ ಅಲ್ಲ, ಸ್ನಾನ ಮಾಡಿದ ನಂತರವೇ ಮಹಿಳೆಯರು ಕೂದಲು ಬಾಚುವುದು ಒಳ್ಳೆಯದು.
*ಸಂಪತ್ತು ಎಂದರೆ ಲಕ್ಷ್ಮೀದೇವಿ, ಹಾಗಾಗಿ ಹಣವನ್ನು ಸ್ನಾನ ಮಾಡದೆ ಮುಟ್ಟಬಾರದು, ಇದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ, ಇದರಿಂದ ಆ ವ್ಯಕ್ತಿ ಬಡತನಕ್ಕೆ ಒಳಗಾಗಬಹುದು. ಹಾಗಾಗಿ ಮಹಿಳೆಯರು ಸ್ನಾನ ಮಾಡದೆ ಹಣವನ್ನು ಮುಟ್ಟಬಾರದು. ಇದನ್ನು ಓದಿ.. annada Astrology: ನೀವು ಉಗುರು ಕತ್ತರಿಸುವಾಗ ಈ ದಿನ ಮಾಡಿ, ಸಾಲದಿಂದ ದೂರ ಆಗಿ, ನೀವೇ ಬೇರೆಯವರಿಗೆ ಸಾಲ ಕೊಡುವಷ್ಟು ಶ್ರೀಮಂತರಾಗುತ್ತೀರಿ.
Comments are closed.