News from ಕನ್ನಡಿಗರು

Biggboss Kannada: ನಿಜವಾಗ್ಲೂ ವೈಲ್ಡ್ ಕಾರ್ಡ್ ಮೂಲಕ ದೀಪಿಕಾ ರವರನ್ನೇ ಕರೆಸಲು ಕಾರಣವೇನು ಗೊತ್ತೇ?? ಬಿಗ್ ಬಾಸ್ ಮಾಡಿದ ತಪ್ಪೇನು ಗೊತ್ತೇ??

533

Biggboss Kannada: ಬಿಗ್ ಬಾಸ್ (Bigg Boss) ಮನೆಯಿಂದ ಕಳೆದ ಭಾನುವಾರ ದೀಪಿಕಾ ದಾಸ್ (Deepika Das) ಅವರು ಮನೆಯಿಂದ ಎಲಿಮಿನೇಟ್ ಆಗಿ ಹೋಗಿದ್ದರು. ದೀಪಿಕಾ ದಾಸ್ ಅವರ ಎಲಿಮಿನೇಶನ್ ಮನೆಯ ಹೊರಗಿರುವ ಸ್ಪರ್ಧಿಗಳಿಗೆ ಮಾತ್ರವಲ್ಲ, ಮನೆಯ ಒಳಗಿರುವ ಸ್ಪರ್ಧಿಗಳಿಗೆ ಸಹ ದೊಡ್ಡ ಶಾಕ್ ನೀಡಿತ್ತು. ಏಕೆಂದರೆ ದೀಪಿಕಾ ದಾಸ್ ಅವರು ಬಹಳ ಸ್ಟ್ರಾಂಗ್ ಆದ ಸ್ಪರ್ಧಿಯಾಗಿದ್ದರು. ಎಲ್ಲಾ ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಮನೆಯವರ ಜೊತೆಗೆ ಒಂದು ಗುಂಪಿನ ಹಾಗಿರದೆ, ತಮ್ಮದೇ ಆದ ಇಂಡಿವಿಶ್ಯುವಲ್ ಆಗಿ ಒಳ್ಳೆಯ ಆಟವಾಡುತ್ತಿದ್ದರು.

ಇಂತಹ ಸ್ಪರ್ಧಿ ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ನೆಟ್ಟಿಗರಿಗು ಶಾಕ್ ನೀಡಿತ್ತು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಎರಡೇ ದಿನಕ್ಕೆ ಮತ್ತೊಮ್ಮೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ವಾಪಸ್ ಬಂದರು, ಇದು ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳಿಗೆ ಮತ್ತು ಹೊರಗಿರುವ ವೀಕ್ಷಕರಿಗೆ ಇಬ್ಬರಿಗೂ ಸಹ ಬಹಳ ಸಂತೋಷ ತಂದಿತು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದು ಯಾಕೆ ಎಂದು ಹಲವರಿಗೆ ಪ್ರಶ್ನೆ ಮೂಡಿದೆ.. ಇದನ್ನು ಓದಿ.. Cricket News: ಪದೇ ಪದೇ ವಿಫಲವಾಗುತ್ತಿರುವ ಪಂತ್ ಬದಲು ಸಂಜು ಆಯ್ಕೆ ಮಾಡಬೇಕಿತ್ತು ಎಂದಿದ್ದಕ್ಕೆ ಪಾಂಡ್ಯ ಕೊಟ್ಟ ಉತ್ತರ ಏನು ಗೊತ್ತೇ? ಶಾಕ್ ಆದ ನೆಟ್ಟಿಗರು

ಆ ಪ್ರಶ್ನೆಗು ಉತ್ತರ ಸಿಕ್ಕಿದ್ದು, ದೀಪಿಕಾ ದಾಸ್ ಅವರು ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡಿ, ಫಿನಾಲೆವರೆಗು ಬಂದಿದ್ದರು. ಸೀಸನ್ 9ರಲ್ಲಿ ಪ್ರವೀಣರಾಗಿ ಬಂದು, ಅವರು ಆಟ ಆಡಿರುವ ರೀತಿ ಮತ್ತು, ತಮ್ಮ ಉತ್ತಮ ನಡವಳಿಕೆ ಮತ್ತು ಸ್ಟ್ರಾಂಗ್ ಪರ್ಸನಾಲಿಟಿ ಇಂದ, ಉತ್ತಮವಾದ ಭರವಸೆ ಮೂಡಿಸಿದ್ದರು. ಇದೆಲ್ಲವು ವೀಕ್ಷಕರಿಗೂ ಇಷ್ಟವಾಗಿತ್ತು. ಹಾಗಾಗಿ ದೀಪಿಕಾ ಅವರು ಎಲಿಮಿನೇಟ್ ಆದಾಗ ವೀಕ್ಷಕರು ರೊಚ್ಚಿಗೆದ್ದಿದ್ದರು. ಅವರು ಇಷ್ಟು ಬೇಗ ಎಲಿಮಿನೇಟ್ ಆಗುವ ಸ್ಪರ್ಧಿಯಲ್ಲ ಎಂದು ಎಲ್ಲರ ಅಭಿಪ್ರಾಯ ಆಗಿತ್ತು. ಅದಕ್ಕಾಗಿಯೇ ದೀಪಿಕಾ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆಸಲಾಗಿದೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಮಂದಿಗೆ ಶಾಕ್ ! 2ನೇ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ ಯಾರು ಗೊತ್ತೇ??

Leave A Reply

Your email address will not be published.