Cricket news: ಭಾರತಕ್ಕೆ ಇದ್ದಾರೆ 3 ಭವಿಷ್ಯದ ನಾಯಕರು: ರೋಹಿತ್ ನಿವೃತ್ತಿ ತೆಗೆದುಕೊಂಡರೆ, ಇವರೇ ನೋಡಿ ಮಹಾನಾಯಕರು. ಇವರಲ್ಲಿ ಯಾರು ಬೆಸ್ಟ್?

Cricket News: 2022ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ (T20 World Cup) ಗೆಲ್ಲಬೇಕು ಎನ್ನುವ ಕನಸು ಸೆಮಿಫೈನಲ್ಸ್ ನಲ್ಲಿ ಸೋಲುವ ಮೂಲಕ ಕೊನೆಯಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರು ಇದೆ ಮೊದಲ ಬಾರಿಗೆ ಐಸಿಸಿ ಟೂರ್ನಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದರು. ಆದರೆ ಗೆಲ್ಲುವಲ್ಲಿ ವಿಫಲರಾದರು. ಮುಂದಿನ ವಿಶ್ವಕಪ್ ನಡೆಯಲು ಇನ್ನು ಎರಡು ವರ್ಷಗಳ ಸಮಯ ಇದೆ. ಈಗಾಗಲೇ ರೋಹಿತ್ ಶರ್ಮಾ ಅವರಿಗೆ 35 ವರ್ಷ ಆಗಿರುವುದರಿಂದ ಮುಂದಿನ ವಿಶ್ವಕಪ್ ವೇಳೆಗೆ ಅವರು ನಾಯಕನಾಗಿ ತಂಡವನ್ನು ಮುನ್ನಡೆಸುವುದು ಕಷ್ಟದ ಮಾತಾಗಿದ್ದು, ರೋಹಿತ್ ಅವರು ಕ್ಯಾಪ್ಟನ್ ಸ್ಥಾನದಿಂದ ಕೆಳಗೆ ಇಳಿಯುವುದಾದರೆ, ಇನ್ನು ಮೂರು ಆಟಗಾರರು ಕ್ಯಾಪ್ಟನ್ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆ ಮೂವರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ಕೆ.ಎಲ್.ರಾಹುಲ್ (K L Rahul) :- ಇವರನ್ನು ಭಾರತ ತಂಡದ ರನ್ ಬ್ಯಾಂಕ್ ಎಂದೇ ಕರೆಯಲಾಗುತ್ತದೆ. ಕೆ.ಎಲ್.ರಾಹುಲ್ ಅವರು ಈಗ ಭಾರತ ತಂಡದ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇದುವರೆಗೂ ಭಾರತದ ಪರವಾಗಿ 72 ಟಿ20 ಪಂದ್ಯಗಳನ್ನಾಡಿದ್ದು, 139 ರ ಸ್ಟ್ರೈಕ್ ರೇಟ್ ನಲ್ಲಿ 2265 ರನ್ಸ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಕೂಡ ಉತ್ತಮ ಸಾಧನೆ ಹೊಂದಿದ್ದಾರೆ ರಾಹುಲ್, 109 ಪಂದ್ಯಗಳಲ್ಲಿ 3889 ರನ್ಸ್ ಭಾರಿಸಿದ್ದಾರೆ. ಐಪಿಎಲ್ (IPL) ನಲ್ಲಿ ಪಂಜಾಬ್ ಸೂಪರ್ ಕಿಂಗ್ಸ್ (Punjab Super Kings) ತಂಡದ ಕ್ಯಾಪ್ಟನ್ ಆಗಿದ್ದ ಕೆ.ಎಲ್.ರಾಹುಲ್ ಅವರು ಪ್ರಸ್ತುತ ಲಕ್ನೌ ಸೂಪರ್ ಜೈನ್ಟ್ಸ್ (Lucknow Super Giants) ತಂಡದ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಇವರು ಭಾರತ ತಂಡವನ್ನು ಉತ್ತಮವಾಗಿ ಮುಂದುವರೆಸಬಲ್ಲರು. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಮಂದಿಗೆ ಶಾಕ್ ! 2ನೇ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ ಯಾರು ಗೊತ್ತೇ??

cricket news team india upcoming captain | Cricket news: ಭಾರತಕ್ಕೆ ಇದ್ದಾರೆ 3 ಭವಿಷ್ಯದ ನಾಯಕರು: ರೋಹಿತ್ ನಿವೃತ್ತಿ ತೆಗೆದುಕೊಂಡರೆ, ಇವರೇ ನೋಡಿ ಮಹಾನಾಯಕರು. ಇವರಲ್ಲಿ ಯಾರು ಬೆಸ್ಟ್?
Cricket news: ಭಾರತಕ್ಕೆ ಇದ್ದಾರೆ 3 ಭವಿಷ್ಯದ ನಾಯಕರು: ರೋಹಿತ್ ನಿವೃತ್ತಿ ತೆಗೆದುಕೊಂಡರೆ, ಇವರೇ ನೋಡಿ ಮಹಾನಾಯಕರು. ಇವರಲ್ಲಿ ಯಾರು ಬೆಸ್ಟ್? 2

ಹಾರ್ದಿಕ್ ಪಾಂಡ್ಯ (Hardik Pandya) :- ಇವರು ಭಾರತ ತಂಡದ ಅತ್ಯುತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. ಪಾಂಡ್ಯ ಅವರು ಭಾರತದ ಪರವಾಗಿ ಆಡಿರುವ 79 ಟಿ20 ಪಂದ್ಯಗಳಲ್ಲಿ 1117 ರನ್ಸ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 146. ಇನ್ನು ಬೌಲಿಂಗ್ ನಲ್ಲಿ 8.3 ಎಕಾನಮಿ ಹೊಂದಿದ್ದಾರೆ. ಐಪಿಎಲ್ ನಲ್ಲಿ ಈ ವರ್ಷ ಮೊದಲ ಬಾರಿಗೆ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿ ಮೊದಲ ಸೀಸನ್ ನಲ್ಲೇ ತಮ್ಮ ತಂಡ ಗೆಲ್ಲುವ ಹಾಗೆ ಮಾಡಿದರು. ಐಪಿಎಲ್ ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 487 ರನ್ಸ್ ಗಳಿಸಿದರು. ಪ್ರಸ್ತುತ ನಡೆಯುತ್ತಿರುವ ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zea Land) ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದಾರೆ. ರೋಹಿತ್ ಶರ್ಮಾ ಅವರ ಬದಲಾಗಿ ಇವರು ಕೂಡ ಉತ್ತಮವಾದ ಆಯ್ಕೆಯಾಗುತ್ತಾರೆ.

ರಿಷಬ್ ಪಂತ್ (Rishab Pant) :- ಇವರು ಭಾರತ ತಂಡದ ಗೇಮ್ ಚೇಂಜಿಂಗ್ ಪ್ಲೇಯರ್ಸ್ ಗಳಲ್ಲಿ ಒಬ್ಬರು. ಟೆಸ್ಟ್ ಮತ್ತು ಓಡಿಐಗಳಲ್ಲಿ ಆತ್ಯುತ್ತಮ ಪ್ರದರ್ಶನಗಳನ್ನು ನೀಡಿರುವ ರಿಷಬ್ ಪಂತ್ ಅವರು, ಟಿ20 ಫಾರ್ಮೇಟ್ ನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿಲ್ಲದೆ ಇದ್ದರು ಸಹ, ಇವರು ಇಂಪ್ರೂವ್ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ. ರಿಷಬ್ ಪಂತ್ ಅವರು ಇದುವರೆಗೂ ಭಾರತ ತಂಡದ ಪರವಾಗಿ 64 ಟಿ20 ಪಂದ್ಯಗಳನ್ನಾಡಿದ್ದು, ಅದರಲ್ಲಿ 127.12 ಸ್ಟ್ರೈಕ್ ರೇಟ್ ನಲ್ಲಿ, 970 ರನ್ಸ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎರಡು ಸಾರಿ ನಾಯಕನಾಗಿ ಮುನ್ನಡೆಸಿದ್ದಾರೆ. 2022ರ ಜುಲೈ ನಲ್ಲಿ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ಸೀರೀಸ್ ನ ಕ್ಯಾಪ್ಟನ್ ಆಗಿ ಸಹ ಆಯ್ಕೆಯಾಗಿದ್ದರು. ರೋಹಿತ್ ಅವರ ಸ್ಥಾನವನ್ನು ತುಂಬಲು ಇವರು ಕೂಡ ಉತ್ತಮವಾದ ಆಯ್ಕೆಯಾಗಿದ್ದಾರೆ. ಇದನ್ನು ಓದಿ..Biggboss Kannada: ನಿಜವಾಗ್ಲೂ ವೈಲ್ಡ್ ಕಾರ್ಡ್ ಮೂಲಕ ದೀಪಿಕಾ ರವರನ್ನೇ ಕರೆಸಲು ಕಾರಣವೇನು ಗೊತ್ತೇ?? ಬಿಗ್ ಬಾಸ್ ಮಾಡಿದ ತಪ್ಪೇನು ಗೊತ್ತೇ??

Comments are closed.