Biggboss Kannada: ಗೆಲ್ಲಬೇಕಾದ ಸ್ಪರ್ದಿಯೇ ಮನೆಯಿಂದ ಔಟ್: ಪ್ರೇಕ್ಷಕರ ಅಸಮಾಧಾನದ ನಡುವೆಯೂ ಪ್ರಶಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತೇ??

Biggboss Kannada: ಬಿಗ್ ಬಾಸ್ (BBK9) ಸೀಸನ್ ಒಂಬತ್ತು ಈಗಾಗಲೇ 70 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ನಡೆಯುತ್ತಿದೆ. ವಾರದಿಂದ ವಾರಕ್ಕೆ ಆಟದ ರೋಚಕತೆ ಇನ್ನಷ್ಟು ದುಪ್ಪಟ್ಟಾಗುತ್ತಿದೆ ಎಂದೇ ಹೇಳಬಹುದು. ಕಿಚ್ಚ ಸುದೀಪ್ (Kiccha Sudeep) ನಡೆಸಿಕೊಡುವ ಕನ್ನಡದ ಬಹುದೊಡ್ಡ ಮಟ್ಟದ ರಿಯಾಲಿಟಿ ಶೋ ಇದಾಗಿದೆ. ಪ್ರತಿ ವಾರಾಂತ್ಯ ಎಲಿಮಿನೇಷನ್ ಪ್ರಕ್ರಿಯೆ ಮೂಲಕ ಒಬ್ಬ ಆಟಗಾರರನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ. ಜನರಿಂದ ಅತಿ ಕಡಿಮೆ ವೋಟ್ ಪಡೆದ ಸ್ಪರ್ಧೆಯನ್ನು ಎಲಿಮಿನೇಟ್ ಮಾಡಲಾಗುತ್ತದೆ. ಇದರಂತೆ ನೆನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ 70 ದಿನಗಳ ಕಾಲ ಮನೆಯಲ್ಲಿದ್ದು ಇದೀಗ ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ನಡೆದಿದ್ದಾರೆ. ಇನ್ನು ಇಷ್ಟು ದಿನಗಳ ಕಾಲ ಮನೆಯಲ್ಲಿ ಇದ್ದುದ್ದಕ್ಕಾಗಿ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ? ಆ ಕುರಿತ ಮಾಹಿತಿ ಇಲ್ಲಿದೆ.

ಪ್ರಶಾಂತ್ (Prashanth Sambargi) ಅವರು ಈ ಹಿಂದಿನ ಸೀಸನ್ ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅತ್ಯುತ್ತಮವಾಗಿ ಆಡುತ್ತಿದ್ದ ಅವರು ಆನಂತರ ಈ ಸೀಸನ್ ನಲ್ಲಿ ಪ್ರವೀಣರ ವಿಭಾಗದಲ್ಲಿ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. “ಈ ಬಾರಿ ನನಗೆ ಮತ್ತೊಂದು ಅವಕಾಶ ಸಿಕ್ಕಿದೆ. ಈ ಸಲ ನಾನು ಫಸ್ಟ್ ರಾಂಕ್ ಬರುತ್ತೇನೆ. ಹೆಚ್ಚು ಕೋಪಿಸಿಕೊಳ್ಳುವುದಿಲ್ಲ, ಎಲ್ಲರೊಂದಿಗೆ ಸ್ನೇಹದಿಂದ ಇರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ” ಎಂದು ಕಿಚ್ಚ ಸುದೀಪ್ ಮುಂದೆ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲು ಹೇಳಿದ್ದರು. ಆ ಮೂಲಕ ಈ ಬಾರಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದರು. ಆದರೆ ಈ ವಾರ 8 ಮಂದಿ ನಾಮಿನೇಟ್ ಆಗಿದ್ದರು. ಆ ಪೈಕಿ ಪ್ರಶಾಂತ್ ಕಡಿಮೆ ವೋಟ್ ಪಡೆದ ಕಾರಣದಿಂದ ಮನೆಯಿಂದ ಹೊರ ನಡೆದಿದ್ದಾರೆ. ನೆನ್ನೆ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಿತು. ಸ್ಪರ್ಧಿಗಳ ಪೈಕಿ ಒಬ್ಬೊಬ್ಬರನ್ನೇ ಸೇವ್ ಮಾಡುತ್ತಾ ಬರಲಾಯಿತು. ಈ ವೇಳೆ ಜನರಿಂದ ಹೆಚ್ಚು ವೋಟ್ ಪಡೆಯಲು ವಿಫಲರಾಗಿರುವ ಪ್ರಶಾಂತ್ ಸಾಂಬರಗಿ ಮನೆಯಿಂದ ಹೊರ ನಡೆದಿದ್ದಾರೆ. ಇದನ್ನು ಓದಿ..Lakshana: ಲಕ್ಷಣದಲ್ಲಿ ಭರ್ಜರಿ ಟ್ವಿಸ್ಟ್: ಇನ್ನೇನು ಡೆವಿಲ್ ಸಿಕ್ಕಿಬಿದ್ದಳು ಎನ್ನುವಷ್ಟರಲ್ಲಿ ಬಚಾವ್ ಆಗಿದ್ದು ಹೇಗೆ ಗೊತ್ತೇ??

biggboss kannada prashanth sambargi samba | Biggboss Kannada: ಗೆಲ್ಲಬೇಕಾದ ಸ್ಪರ್ದಿಯೇ ಮನೆಯಿಂದ ಔಟ್: ಪ್ರೇಕ್ಷಕರ ಅಸಮಾಧಾನದ ನಡುವೆಯೂ ಪ್ರಶಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತೇ??
Biggboss Kannada: ಗೆಲ್ಲಬೇಕಾದ ಸ್ಪರ್ದಿಯೇ ಮನೆಯಿಂದ ಔಟ್: ಪ್ರೇಕ್ಷಕರ ಅಸಮಾಧಾನದ ನಡುವೆಯೂ ಪ್ರಶಾಂತ್ ಪಡೆದ ಸಂಭಾವನೆ ಎಷ್ಟು ಗೊತ್ತೇ?? 2

ಪ್ರಶಾಂತ್ ಅವರನ್ನು ಎಲಿಮಿನೇಟ್ ಮಾಡಿದಾಗ ಅವರು ಸಾಕಷ್ಟು ಭಾವುಕರಾಗಿದ್ದರು. ಅಲ್ಲದೆ ಕಿಚ್ಚ ಸುದೀಪ್ ಅವರ ಜೊತೆಗೆ ವೇದಿಕೆ ಮೇಲೆ ಮಾತನಾಡುವಾಗ ಬಿಕ್ಕಿ-ಬಿಕ್ಕಿ ಅತ್ತರು. ತಾನು ಎಲ್ಲಿ ಎಡವಿದೆ ಎನ್ನುವುದರ ಕುರಿತು ಮಾತನಾಡಿದರು. ಈಗ ಪ್ರಶಾಂತ್ ಅವರಿಗೆ ಬಿಗ್ ಬಾಸ್ ಜರ್ನಿ ಮುಗಿದಿದೆ. 70 ದಿನಗಳಿಗಿಂತ ಹೆಚ್ಚು ಕಾಲ ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕಾಗಿ ಅವರು ಪಡೆದ ಸಂಭಾವನೆ ಎಷ್ಟು ಎನ್ನುವುದು ಗೊತ್ತಾ. ಪ್ರಶಾಂತ್ ಪ್ರತಿ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವುದಕ್ಕಾಗಿ 40,000 ಸಂಭಾವನೆಯನ್ನು ನಿಗದಿಗೊಳಿಸಲಾಗಿತ್ತು. ಅದರಂತೆ ಅವರು 12 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅಂದರೆ ಅವರು ಒಟ್ಟಾರೆಯಾಗಿ ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದುದ್ದಕ್ಕಾಗಿ 4.8 ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ. ಅಂದರೆ ನಾಲ್ಕು ಲಕ್ಷದ ಎಂಭತ್ತು ಸಾವಿರ(4,80,000 ರೂಪಾಯಿ) ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ದಿಡೀರ್ ಎಂದು ಸಾಂಪ್ರದಾಯಿಕ ವೇಷ ಧರಿಸಿ, ಅಮಿರ್ ಖಾನ್ ಪೂಜೆ ಮಾಡಲು ಕಾರಣವೇನು ಗೊತ್ತೆ?? ಕೊನೆಗೂ ಸಿಕ್ತು ನೋಡಿ ಕಾರಣ.

Comments are closed.