Biggboss Kannada: ಪಾಪ ಗೆಲ್ಲುವ ಸಮಯದಲ್ಲಿ ರೂಪೇಶ್ ರಾಜಣ್ಣಗೆ ಇವೆಲ್ಲ ಬೇಕಿತ್ತಾ?? ಎಲ್ಲರ ಮುಂದೇನೆ ರಾಜಣ್ಣ ಪತ್ನಿ ಮರ್ಯಾದೆ ತೆಗೆದದ್ದು ಹೇಗೆ ಗೊತ್ತೇ??

Biggboss Kannada: ಭರ್ಜರಿಯಾಗಿ ಶುರುವಾಗಿದ್ದ ಬಿಗ್ ಬಾಸ್ ಸೀಸನ್ 9 (Biggboss Kannada Season 9) ಗ್ರಾಂಡ್ ಫಿನಾಲೆ ಹಂತಕ್ಕೆ ತಲುಪಿದೆ. ನೆನ್ನೆಯಿಂದ ಗ್ರಾಂಡ್ ಫಿನಾಲೆ ನಡೆಯುತ್ತಿದೆ. ಈ ಬಾರಿ ನವೀನರ ವಿಭಾಗದಿಂದ ರೂಪೇಶ್ ರಾಜಣ್ಣ (Roopesh Rajanna) ಸಹ ಸ್ಪರ್ಧೆಯಾಗಿ ಪಾಲ್ಗೊಂಡಿದ್ದರು. ಇದೀಗ ಗ್ರಾಂಡ್ ಫಿನಾಲೆಗೆ ತಲುಪಿರುವ ಕಾರ್ಯಕ್ರಮದಲ್ಲಿ ಒಟ್ಟಾರೆಯಾಗಿ 18 ವರ್ಷ ಸ್ಪರ್ಧಿಗಳ ಪೈಕಿ ಇದೀಗ ಐದು ಸ್ಪರ್ಧಿಗಳು ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದಾರೆ. ಇವರಲ್ಲಿ ರೂಪೇಶ್ ರಾಜಣ್ಣ ಮಾತ್ರ ನವೀನರ ವಿಭಾಗದಿಂದ ಗ್ರಾಂಡ್ ಫಿನಾಲೆಗೆ ತಲುಪಿರುವ ಏಕ ಮಾತ್ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಜನರು ರೂಪೇಶ್ ರಾಜಣ್ಣ ಹೆಚ್ಚು ದಿನಗಳು ಇರುವುದಿಲ್ಲ ಎಂದೇ ಅಭಿಪ್ರಾಯಪಟ್ಟಿದ್ದರು. ಆದರೆ ನವೀನರ ವಿಭಾಗದಿಂದ ಇಲ್ಲಿವರೆಗೆ ಬಂದು ಇತಿಹಾಸ ಸೃಷ್ಟಿಸಿದ್ದಾರೆ.

ರೂಪೇಶ್ ರಾಜಣ್ಣ ಕನ್ನಡದ ವಿಷಯ ಬಂದಾಗ ಹೊರಗಡೆ ಸಾಮಾಜಿಕವಾಗಿ ಕನ್ನಡ ಪರ ಹೋರಾಟಗಾರರಾಗಿ ಅವರು ಗುರುತಿಸಿಕೊಂಡಿದ್ದಾರೆ. ಕನ್ನಡದ ಯಾವುದೇ ಹೋರಾಟ, ವಿಷಯ, ಚರ್ಚೆಗಳು ಬಂದಾಗ ಅವರು ಸದಾ ಮುಂದೆ ಇರುತ್ತಾರೆ. ಈ ಮೂಲಕ ಕನ್ನಡದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ವ್ಯಕ್ತಿ ರೂಪೇಶ್ ರಾಜಣ್ಣ. ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸಹ ಕನ್ನಡದ ವಿಷಯವಾಗಿ ಅವರು ಸಾಕಷ್ಟು ಬಾರಿ ಜಗಳದ ಮಟ್ಟಕ್ಕೂ ಇಳಿದಿದ್ದಾರೆ. ಅಲ್ಲದೆ ಕನ್ನಡದ ವಿಷಯವಾಗಿ ಅವರು ಅಭಿಮಾನವನ್ನು ಸಹ ಹೊಂದಿದ್ದಾರೆ. ಇದಲ್ಲದೆ ಸಾಕಷ್ಟು ಪ್ರತಿಭೆ ಹೊಂದಿರುವ ರೂಪೇಶ್ ರಾಜಣ್ಣ ಹಾಡುವುದರಲ್ಲಿ ಮನರಂಜನೆ ಮಾಡುವುದರಲ್ಲಿಯೂ ಪ್ರವೀಣರಾಗಿದ್ದಾರೆ. ಇದನ್ನು ಓದಿ..Kannada News: ಶುರುವಾಯಿತು ಆರ್ಯವರ್ಧನ್ ಆಟ; ಸುದೀಪ್ ಸಂಪೂರ್ಣ ಜಾತಕ ನನ್ನ ಬಳಿ ಇದೆ ಎಂದ ಆರ್ಯವರ್ಧನ್; ಹೇಳಿದ್ದೇನು ಗೊತ್ತೇ?

biggboss kannada roopesh rajanna 2 | Biggboss Kannada: ಪಾಪ ಗೆಲ್ಲುವ ಸಮಯದಲ್ಲಿ ರೂಪೇಶ್ ರಾಜಣ್ಣಗೆ ಇವೆಲ್ಲ ಬೇಕಿತ್ತಾ?? ಎಲ್ಲರ ಮುಂದೇನೆ ರಾಜಣ್ಣ ಪತ್ನಿ ಮರ್ಯಾದೆ ತೆಗೆದದ್ದು ಹೇಗೆ ಗೊತ್ತೇ??
Biggboss Kannada: ಪಾಪ ಗೆಲ್ಲುವ ಸಮಯದಲ್ಲಿ ರೂಪೇಶ್ ರಾಜಣ್ಣಗೆ ಇವೆಲ್ಲ ಬೇಕಿತ್ತಾ?? ಎಲ್ಲರ ಮುಂದೇನೆ ರಾಜಣ್ಣ ಪತ್ನಿ ಮರ್ಯಾದೆ ತೆಗೆದದ್ದು ಹೇಗೆ ಗೊತ್ತೇ?? 2

ಇನ್ನು ಮೊನ್ನೆಯ ಸಂಚಿಕೆಯಲ್ಲಿ ರಾಜಣ್ಣ ಅವರಿಗೆ ಬಿಗ್ ಬಾಸ್ ಅವರ ಪತ್ನಿಯ ಜೊತೆಗೆ ದೂರವಾಣಿ ಕರೆಯ ಮೂಲಕ ಮಾತನಾಡುವ ಅವಕಾಶ ಕಲ್ಪಿಸಿತ್ತು. ರಾಜಣ್ಣ ಪತ್ನಿಯ ಜೊತೆಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಪಕ್ಕದಲ್ಲಿದ್ದ ದಿವ್ಯ (Divya Uruduga) ಅವರನ್ನು ರೇಗಿಸುವ ಉದ್ದೇಶದಿಂದ ದಿವ್ಯ ಅವರ ಜೋಕ್ ಗಳನ್ನು ನನ್ನ ಕೈಲಿ ಕೇಳಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಜಣ್ಣ ಗೇಲಿ ಮಾಡಿದ್ದಾರೆ. ಇದನ್ನು ಕೇಳಿರುವ ರಾಜಣ್ಣ ಅವರ ಪತ್ನಿ ದಿವ್ಯ ಅವರ ಜೋಕ್ ಬೇಕಿದ್ರೆ ಸಹಿಸಿಕೊಳ್ಳಬಹುದು. ಆದರೆ ನಿಮ್ಮ ಜೋಕ್ ಕೇಳಲು ಮಾತ್ರ ಆಗುವುದಿಲ್ಲ. ಅವರ ಜೋಕ್ ಬಹಳ ಚಿಕ್ಕದಾಗಿರುತ್ತದೆ, ಆದರೆ ನೀವು ತೀರಾ ಉದ್ದ ಜೋಕ್ ಮಾಡ್ತೀರ, ನಗು ಬರುವುದಿಲ್ಲ. ಸರಿಯಾಗಿ ಜೋಕ್ ಮಾಡುವುದನ್ನು ಕಲಿಯಿರಿ ಎಂದು ರಾಜಣ್ಣ ಪತ್ನಿ ಕಾಲೆಳೆದಿದ್ದಾರೆ. ಇದನ್ನು ಓದಿ..Kannada News: ಈಗಾಗಲೇ ಸೋಲುವ ದಾರಿಯಲ್ಲಿರುವ ಶಾರುಖ್ ಗೆ ಮತ್ತೊಂದು ಬಿಗ್ ಶಾಕ್: ಚಿತ್ರ ಕಮರಿ ಹೋಯಿತೇ? ಏನಾಗಿದೆ ಗೊತ್ತೇ??

Comments are closed.