Cricket News: ಚೆನ್ನಾಗಿ ಆಡಿದರೂ ಕೂಡ ರಾಜಕೀಯದಿಂದ ತಂಡದಿಂದ ಹೊರಹೋದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ಶಿಖರ್ ಹೇಳಿದ್ದೇನು ಗೊತ್ತೇ??
Cricket News: ಇದೇ ಜನವರಿ ಮೂರರಿಂದ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ (India vs Srilanka) ಟಿ 20 ಮತ್ತು ಏಕದಿನ ಮಾದರಿಯ ತಲಾ ಮೂರು ಪಂದ್ಯಗಳನ್ನು ಆಡಲಿದೆ. ಈ ಪದ್ಯಕ್ಕಾಗಿ ಈಗಾಗಲೇ ಆಯ್ಕೆ ಸಮಿತಿ ಆಟಗಾರರನ್ನು ಅಂತಿಮಗೊಳಿಸಿದ್ದು, ತಂಡಗಳು ಕೊನೆಯ ಹಂತದ ತಯಾರಿಯಲ್ಲಿ ನಿರತವಾಗಿದೆ. ಆದರೆ ಶಿಖರ್ ಧವನ್ (Shikhar Dhawan) ಅವರು ಇಲ್ಲದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಅವರು ತಮ್ಮ ಮೊದಲ ರಾಜಕೀಯ ಪ್ರಯತ್ನದಲ್ಲಿಯೂ ಕೂಡ ಅಂದುಕೊಂಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ. ಇತ್ತ ಕಡೆ ಟೀಮ್ ಇಂಡಿಯಾದ (Team India) ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕೂಡ ಪಡೆಯಲು ಸಾಧ್ಯವಾಗಿಲ್ಲ. ಈ ವಿಷಯವಾಗಿ ಶಿಖರ್ ಧವನ್ ಬಹಳ ಬೇಸರ ಮಾಡಿಕೊಂಡಂತಿದೆ, ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಶಿಖರ್ ಧವನ್ ಕಳೆದ ಹಲವಾರು ಪಂದ್ಯಗಳಲ್ಲಿ ಅಖಾಡಕ್ಕೆ ಇಳಿದು ಆಡಲು ಸಾಧ್ಯವಾಗಿಯೇ ಇಲ್ಲ. ಸಾಕಷ್ಟು ಏಕದಿನ, ಟಿ 20 ಮಾದರಿಯ ಪಂದ್ಯಗಳಲ್ಲಿ ಅವರು ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಅವರು ನಿರೀಕ್ಷಿತ ಮಟ್ಟದ ಗೆಲುವು ಕಾಣಲು ಸಾಧ್ಯವಾಗಿಲ್ಲ. ಹೀಗಾಗಿ ಆಯ್ಕೆ ಸಮಿತಿ ಅವರನ್ನು ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ-20 ಸರಣಿ ಪಂದ್ಯಗಳಿಂದ ಕೈಬಿಟ್ಟಿದೆ ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. 2023 ವಿಶ್ವಕಪ್ ವರ್ಷವಾಗಿದೆ, ಅಂದರೆ ಭಾರತವೇ ಮುಂದಿನ ಬಾರಿಯ ವಿಶ್ವಕಪ್ ಪಂದ್ಯದ ಆತಿಥ್ಯ ವಹಿಸಿಕೊಳ್ಳುತ್ತಿದೆ. ಭಾರತದ ತವರಿನ ನೆಲದಲ್ಲಿಯೇ ಮುಂದಿನ ವಿಶ್ವಕಪ್ ನಡೆಯಲಿದ್ದು ಈ ಪಂದ್ಯದಲ್ಲಿ ಅವಕಾಶ ಪಡೆಯಲು ಶಿಖರ ಧವನ್ ಅತ್ಯುತ್ತಮವಾದ ಪ್ರದರ್ಶನವನ್ನು ತೋರಿಸಲೇಬೇಕಾದ ಅನಿವಾರ್ಯತೆ ಇದೆ. ಇದನ್ನು ಓದಿ..Cricket News: ಇರಲಾರದೆ ಇರುವೆ ಬಿಟ್ಕೊಂಡ ರಾಹುಲ್: ಫಾರ್ಮ್ ಕಳೆದುಕೊಂಡಿದ್ದೀರಾ ಎಂದಿದ್ದಕ್ಕೆ ರಾಹುಲ್ ನೀಡಿದ ಬೇಜವಾಬ್ದಾರಿ ಉತ್ತರ ಏನು ಗೊತ್ತೇ??
ಇನ್ನೂ ಶಿಖರ್ ಧವನ್ ಈ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ತಾವು ನೆಟ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಅಭ್ಯಾಸ ಪಂದ್ಯದ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅಭಿಮಾನಿಗಳು ಶಿಖರ್ ಧವನ್ ಅವರ ಹುಮ್ಮಸ್ಸು ನೋಡಿ ಖುಷಿಪಟ್ಟಿದ್ದಾರೆ. ನೀವು ಅಖಾಡದಲ್ಲಿ ಇದೇ ರೀತಿ ಉತ್ಸಾಹದಿಂದ ಆಡಿ ತಂಡದ ಗೆಲುವಿಗೆ ಕಾರಣರಾಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ನೆಟ್ ಪ್ರಾಕ್ಟೀಸ್ ವಿಡಿಯೋ ಹಂಚಿಕೊಂಡಿರುವ ಶಿಖರ ಧವನ್ ಕ್ಯಾಪ್ಷನ್ ಅಲ್ಲಿ ಇದು ಗೆಲುವು ಮತ್ತು ಸೋಲುಗಳ ಬಗ್ಗೆ ಅಲ್ಲ, ಇದು ಧೈರ್ಯದ ಬಗ್ಗೆ ಮಾತನಾಡಬೇಕಾದ ಸಮಯ. ಕಷ್ಟಪಟ್ಟು ಕೆಲಸ ಮಾಡುತ್ತಿರಿ ಮತ್ತು ದೇವರು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತಾನೆ” ಎಂದು ಬರೆದು ಕೊಂಡಿದ್ದಾರೆ. ಇದನ್ನು ಓದಿ.. Cricket News: ಭಾರತದ ಭವಿಷ್ಯದ ನಾಯಕನನ್ನು ಹೆಸರಿಸಿದ ಕುಮಾರ್ ಸಂಗಕ್ಕರ: ಈತನೇ ಉತ್ತಮ ನಾಯಕ ಎಂದದ್ದು ಯಾರಿಗೆ ಗೊತ್ತೇ??
Comments are closed.