Kannada News: ಶುರುವಾಯಿತು ಆರ್ಯವರ್ಧನ್ ಆಟ; ಸುದೀಪ್ ಸಂಪೂರ್ಣ ಜಾತಕ ನನ್ನ ಬಳಿ ಇದೆ ಎಂದ ಆರ್ಯವರ್ಧನ್; ಹೇಳಿದ್ದೇನು ಗೊತ್ತೇ?
Kannada News: ಆರ್ಯವರ್ಧನ್ (Aryavardhan) ಗುರೂಜಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದಿದ್ದಾರೆ. ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಆರ್ಯವರ್ಧನ್ ಗುರೂಜಿ ಆಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಜ್ಯೋತಿಷ್ಯ, ಜಾತಕ, ಭವಿಷ್ಯದ ವಿಷಯವಾಗಿ ಅವರಿಗೆ ಅಪಾರ ಅಭಿಮಾನಿಗಳು ಅಥವಾ ಭಕ್ತರೇ ಇದ್ದರು ಎಂದು ಹೇಳಬಹುದು. ಆನಂತರ ಅವರು ಬಿಗ್ ಬಾಸ್ ಓಟಿಟಿ ಸೀಸನ್ ಗೆ ಎಂಟ್ರಿ ಕೊಟ್ಟರು. ಅಲ್ಲಿ ಟಾಪ್ ಫೋರ್ ಸ್ಪರ್ಧಿಯಾಗಿ ಹೆಸರು ಮಾಡಿದ್ದಲ್ಲದೆ ಟಿವಿ ಸೀಸನ್ಗೆ ಕೂಡ ಲಗ್ಗೆ ಇಟ್ಟರು. ಆರ್ಯವರ್ಧನ್ ಹೆಚ್ಚು ದಿನ ಇರುವುದಿಲ್ಲ ಎಂದು ಟೀಕೆ ಮಾಡಿದ್ದ ಜನರಿಗೆ ಉತ್ತರವೆಂಬಂತೆ ಅವರು ಹೆಚ್ಚು ಕಡಿಮೆ ಕೊನೆಯ ವಾರದವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದರು. ಇನ್ನು ಮನೆಯಿಂದ ಹೊರ ಬಂದ ತಕ್ಷಣವೇ ಸುದೀಪ್ ಬಗ್ಗೆ ಸಂಚಲನ ಸೃಷ್ಟಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಸುದೀಪ್ (Sudeep) ಎಲ್ಲಾ ಜಾತಕ ನನ್ನ ಬಳಿ ಇದೆ ಎಂದು ವಿಡಿಯೋದಲ್ಲಿ ಅವರು ಹೇಳಿರುವುದು ಇದೀಗ ವೈರಲ್ ಆಗಿದೆ.
ಮನೆಯಿಂದ ಎಲಿಮಿನೇಟ್ ಆಗುವ ಸಮಯದಲ್ಲಿ ಅವರು ಮಗುವಿನಂತೆ ಬಿಕ್ಕಿ ಬಿಕ್ಕಿದರು. ಇಷ್ಟು ದಿನಗಳು ಈ ಮನೆಯಲ್ಲಿ ಇದ್ದೆ. ತುಂಬಾ ನಂಟಿದೆ ಎಂದು ಅವರು ಭಾವನಾತ್ಮಕವಾಗಿ ನೊಂದುಕೊಂಡಿದ್ದರು. ಗುರೂಜಿ ಅವರು ಮನೆಯಿಂದ ಹೊರಬಂದ ತಕ್ಷಣವೇ ವಿಡಿಯೋ ಮಾಡಿ ರೂಪೇಶ್ ಶೆಟ್ಟಿಗೆ ಎಲ್ಲರೂ ಬೆಂಬಲಿಸುವಂತೆ ಸೂಚಿಸಿದರು. ರೂಪೇಶ್ ಶೆಟ್ಟಿ (Roopesh Shetty) ತುಂಬಾ ಒಳ್ಳೆಯ ಆಟಗಾರ. ಅವನು ನನ್ನ ಮಗ ಇದ್ದಹಾಗೆ, ಅವನು ಚೆನ್ನಾಗಿ ಆಡುತ್ತಿದ್ದಾನೆ. ಹಾಗಾಗಿ ಎಲ್ಲರೂ ಅವನಿಗೆ ವೋಟ್ ಮಾಡಿ ಎಂದು ಕೋರಿಕೊಂಡಿದ್ದರು. ಈ ವಿಡಿಯೋ ಮೊನ್ನೆ ಮೊನ್ನೆ ಎಲ್ಲೆಡೆ ವೈರಲ್ ಆಗಿತ್ತು. ಗುರುಜಿ ರೂಪೇಶ್ ಗೆ ಬೆಂಬಲ ಸೂಚಿಸುವುದಿಲ್ಲ ಎಂದು ಎಲ್ಲಾ ಅಂದುಕೊಂಡಿದ್ದರು. ಆದರೆ ಅದಕ್ಕೆ ವಿರುದ್ಧವಂತೆ ಗುರೂಜಿ ಮಾತನಾಡಿದರು. ಇದೀಗ ವಿಡಿಯೋ ಮೂಲಕ ಗುರೂಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡಿ, ಬುಂದಿ ಮೊಸರನ್ನ ಮಾಡಿದ ಶ್ರೀಲೀಲಾ. ಯಶಸ್ಸು ಪಡೆಯುತ್ತಿದ್ದಂತೆ ಕೇಳಿದ ಸಂಭಾವನೆ ಕೇಳಿ, ನಿರ್ಮಾಪಕರು ಶಾಕ್. ಎಷ್ಟು ಗೊತ್ತೇ??
ಮತ್ತೆ ವಿಡಿಯೋ ಮಾಡಿ ಮಾತನಾಡಿರುವ ಗುರೂಜಿ “ನಾನು ಈ ಬಾರಿ ಖಂಡಿತ ಗೆಲ್ಲುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿತ್ತು, ನನ್ನ ಜ್ಯೋತಿಷ್ಯದ ಪ್ರಕಾರ ನಾಲ್ಕನೇ ನಂಬರ್ ನನಗೆ ಆಗಿ ಬರುವುದಿಲ್ಲ. ಹಾಗಾಗಿ ನಾನು ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟದ್ದು ತಪ್ಪಾಯಿತೇನೋ. ನಾನು ಹಾಗೆ ಮಾಡಬಾರದಿತ್ತು, ಆದರೆ ನಿಯಮದ ಪ್ರಕಾರ ನಾನು ಎಂಟ್ರಿ ಕೊಡಲೇಬೇಕಿತ್ತು ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಡಲೇಬೇಕಿತ್ತು, ಛೆ ಎಂದು ಅವರು ಹೇಳಿದ್ದಾರೆ. ಸುದೀಪ್ ಅವರಿಗೆ ಒಂಬತ್ತನೇ ನಂಬರ್ ಆಗಿ ಬರುವುದಿಲ್ಲ. ಹೀಗಾಗಿ ಅವರಿಗೆ 9 ನೇ ಸೀಸನ್ ಸರಿ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಲಕ್ಕಿ ನಂಬರ್ ಎರಡು. ಆದರೆ ಎರಡು ಮತ್ತು ನಾಲ್ಕನೇ ನಂಬರ್ ಗೂ ಆಗಿ ಬರುವುದಿಲ್ಲ ಮತ್ತು ಎರಡು ಹಾಗೂ ಒಂಬತ್ತನೇ ನಂಬರ್ ಗೂ ಆಗಿ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ. ಹೀಗೆ ಮಾತಿನ ಭರದಲ್ಲಿ ಸುದೀಪ್ ಅವರ ಎಲ್ಲಾ ಜಾತಕ ನನ್ನ ಬಳಿ ಇದೆ. ಅವರ ಭವಿಷ್ಯದ ಕುರಿತ ಎಲ್ಲಾ ಮಾಹಿತಿ ಇರುವ ಅವರ ಜಾತಕ ನನ್ನೊಬ್ಬನ ಬಳಿಯೇ ಇರುವುದು ಎಂದು ಅವರು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಓದಿ.. Kannada News: ಈಗಾಗಲೇ ಸೋಲುವ ದಾರಿಯಲ್ಲಿರುವ ಶಾರುಖ್ ಗೆ ಮತ್ತೊಂದು ಬಿಗ್ ಶಾಕ್: ಚಿತ್ರ ಕಮರಿ ಹೋಯಿತೇ? ಏನಾಗಿದೆ ಗೊತ್ತೇ??
Comments are closed.