Cricket News: ಭಾರತದ ಭವಿಷ್ಯದ ನಾಯಕನನ್ನು ಹೆಸರಿಸಿದ ಕುಮಾರ್ ಸಂಗಕ್ಕರ: ಈತನೇ ಉತ್ತಮ ನಾಯಕ ಎಂದದ್ದು ಯಾರಿಗೆ ಗೊತ್ತೇ??

Cricket News: ಬಿಸಿಸಿಐ (BCCI) ಇತ್ತೀಚಿಗೆ ಎಲ್ಲಾ ಮೂರು ಮಾದರಿಯ ಕ್ರಿಕೆಟ್ಗಳಿಗೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿದೆ ಎಂದು ವರದಿಯಾಗಿತ್ತು. ಟಿ ಟ್ವೆಂಟಿ, ಟೆಸ್ಟ್, ಏಕದಿನ ಈ ಮೂರು ಮಾದರಿಗಳಲ್ಲಿ ಪ್ರತ್ಯೆಕ ನಾಯಕರನ್ನು ಆರಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಸುದ್ದಿಯಾಗಿತ್ತು. ನಿರಂತರವಾಗಿ ಟೀಮ್ ಇಂಡಿಯಾ ವೈಫಲ್ಯ ಕಾಣುತ್ತಿರುವುದರ ಜೊತೆಗೆ ಅಂದುಕೊಂಡ ನಿರೀಕ್ಷಿತ ಮಟ್ಟದಲ್ಲಿಯೂ ಕೂಡ ಪ್ರದರ್ಶನ ತೋರುವಲ್ಲಿ ವಿಫಲವಾಗುತ್ತಿದೆ. ಹೀಗಾಗಿಯೇ ಬಿಸಿಸಿಐ ಇಂತಹದೊಂದು ಆಲೋಚನೆಯಲ್ಲಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಶ್ರೀಲಂಕದ ಮಾಜಿ ಕ್ರಿಕೆಟ್ ಆಟಗಾರ ಕುಮಾರ್ ಸಂಗಕ್ಕರ (Kumar Sangakkara) ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಬಲ್ಲ ನಾಯಕನಾಗುವ ಸಾಮರ್ಥ್ಯ ಯಾರಿಗಿದೆ ಎನ್ನುವುದರ ಕುರಿತಾಗಿ ಮಾತನಾಡಿದ್ದಾರೆ. ಈ ಆಟಗಾರನಿಗೆ ತಂಡದ ನಾಯಕನಾಗಲು ಎಲ್ಲಾ ಅರ್ಹತೆ ಇದೆ, ಈತ ತಂಡದ ನಾಯಕನಾದರೆ ತಂಡ ಸೋಲುವ ಮಾತೇ ಇಲ್ಲ ಎಂದು ಹೇಳುವ ಮೂಲಕ ಟೀಮ್ ಇಂಡಿಯಾಗೆ (Team India) ಹೊಸ ಭರವಸೆಯ ನಾಯಕನ ಹೆಸರನ್ನು ಸೂಚಿಸಿದ್ದಾರೆ.

ಇತ್ತೀಚಿನ ವಿದ್ಯಮಾನಗಳ ಪ್ರಕಾರ ಬಿಸಿಸಿಐ ಎಲ್ಲ ಮೂರು ಮಾದರಿಯ ಕ್ರಿಕೆಟ್ ಗೆ ಪ್ರತ್ಯೆಕ ಸಮರ್ಥ ನಾಯಕನ ಆಯ್ಕೆ ಮಾಡುವ ಆಲೋಚನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಶ್ರೀಲಂಕದ ಮಾಜಿ ಆಟಗಾರ ಕುಮಾರ್ ಸಂಗಕ್ಕರ ಟೀಮ್ ಇಂಡಿಯಾದ ಭವಿಷ್ಯದ ನಾಯಕನ ಹೆಸರನ್ನು ಸೂಚಿಸುವ ಮೂಲಕ ಈ ಹಿಂದೆ ಇದ್ದ ನಾಯಕನ ಆಯ್ಕೆಯ ಕುರಿತ ಚರ್ಚೆ ಇದೀಗ ಮತ್ತೆ ಮುನ್ನಡೆಗೆ ಬಂದಿದೆ. ಶ್ರೀಲಂಕದ ದಿಗ್ಗಜ ಕ್ರಿಕೆಟಿಗ ಎಂದೇ ಹೆಸರಾದ ಅವರು ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ಟೀಮ್ ಇಂಡಿಯಾದ ಟಿ 20 ಮಾದರಿಯ ಕ್ರಿಕೆಟ್ ನಾಯಕನಾಗಲು ಎಲ್ಲಾ ಅರ್ಹತೆಗಳಿವೆ ಎಂದು ಹೇಳುವ ಮೂಲಕ ಸಂಚನ ಸೃಷ್ಟಿಸಿದ್ದಾರೆ. ತಮ್ಮ ಮೊದಲ ಪ್ರಯತ್ನದೊಂದಿಗೆ ಐಪಿಎಲ್ (IPL) ಗುಜರಾತ್ ಟೈಟನ್ಸ್ (Gujarat Titans) ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು ಮಾತ್ರವಲ್ಲದೆ ಚಾಂಪಿಯನ್ ಆಗುವ ಮೂಲಕ ಹಾರ್ದಿಕ ಪಾಂಡ್ಯ ತಮ್ಮ ಸಾಮರ್ಥ್ಯ ಏನು ಎನ್ನುವುದನ್ನು ಸಾಬೀತುಪಡಿಸಿದ್ದರು. ಇದನ್ನು ಓದಿ..Cricket News: ಭಾರತ ತಂಡದಿಂದ ಹೊರ ಬೀಳುವ ಆತಂಕದಲ್ಲಿ ಇದ್ದ ರಾಹುಲ್ ಗೆ ಮತ್ತೊಂದು ಕಹಿ ಸುದ್ದಿ. ಮುಗಿಯಿತೇ ಸ್ಟಾರ್ ಆಟಗಾರನ ಭವಿಷ್ಯ?? ಏನಾಗಿದೆ ಗೊತ್ತೇ??

cricket news sangakkara about future team ind captain | Cricket News: ಭಾರತದ ಭವಿಷ್ಯದ ನಾಯಕನನ್ನು ಹೆಸರಿಸಿದ ಕುಮಾರ್ ಸಂಗಕ್ಕರ: ಈತನೇ ಉತ್ತಮ ನಾಯಕ ಎಂದದ್ದು ಯಾರಿಗೆ ಗೊತ್ತೇ??
Cricket News: ಭಾರತದ ಭವಿಷ್ಯದ ನಾಯಕನನ್ನು ಹೆಸರಿಸಿದ ಕುಮಾರ್ ಸಂಗಕ್ಕರ: ಈತನೇ ಉತ್ತಮ ನಾಯಕ ಎಂದದ್ದು ಯಾರಿಗೆ ಗೊತ್ತೇ?? 2

ಈ ವಿಷಯವಾಗಿ ಮೆಚ್ಚುಗೆ ಸೂಚಿಸಿರುವ ಕುಮಾರ್ ಇದೇ ರೀತಿಯಾಗಿ ಟಿ ಟ್ವೆಂಟಿ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾದರೆ ಇದೇ ರೀತಿ ಗೆಲುವು ನಿಶ್ಚಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ20 ಮಾದರಿಯ ಮೂರು ಪಂದ್ಯಗಳ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ಹಾರ್ದಿಕ್ ಪಾಂಡ್ಯ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಇದೀಗ ಹಾರ್ದಿಕ್ ಪಾಂಡ್ಯ ಅವರನ್ನು ಟಿ ಟ್ವೆಂಟಿ ಮಾದರಿಯ ಎಲ್ಲ ಕ್ರಿಕೆಟ್ ಪಂದ್ಯಗಳಿಗೂ ಕೂಡ ನಾಯಕನನ್ನಾಗಿ ಆಯ್ಕೆ ಮಾಡುವುದು ಬಿಸಿಸಿಐ ಮಾಡಬಹುದಾದ ಅತ್ಯುತ್ತಮ ನಿರ್ಧಾರವೆಂದು ಕುಮಾರ್ ತಿಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟಗಾರ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ. ಅವರ ಅದ್ಭುತ ಪ್ರದರ್ಶನವನ್ನು ನಾವು ಐಪಿಎಲ್ ನಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ಅತ್ಯುತ್ತಮ ಪ್ರದರ್ಶನವನ್ನು ಅವರು ಟಿ ಟ್ವೆಂಟಿ ಪಂದ್ಯಗಳಲ್ಲಿ ತೋರಿಸಲಿದ್ದಾರೆ. ಹೀಗಾಗಿ ಅವರನ್ನು ತಂಡದ ನಾಯಕನನ್ನಾಗಿ ಮಾಡುವುದು ಅತ್ಯುತ್ತಮ ನಿರ್ಧಾರವಾಗಬಹುದು ಎಂದು ಅವರು ತಿಳಿಸಿದ್ದಾರೆ. ಅವರಿಗೆ ನಾಯಕತ್ವದ ಎಲ್ಲಾ ಗುಣಗಳು ಇರುವುದು ಅವರ ಪ್ಲಸ್ ಪಾಯಿಂಟ್. ಇದೀಗ ಅವರು ಶ್ರೀಲಂಕಾ ವಿರುದ್ಧದ ಮೂರು ಟಿ ಟ್ವೆಂಟಿ ಮಾದರಿಯ ಪಂದ್ಯಗಳಿಗೂ ಸಹ ನಾಯಕರಾಗಿ ಆಯ್ಕೆಯಾಗಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ರಣತಂತ್ರಗಳನ್ನು ಅವರು ಹೆಣೆಯಬೇಕಿದೆ. ಆ ಮೂಲಕ ತಂಡವನ್ನು ಮೇಲುಗೈಗೆ ತರಬೇಕಿದೆ. ನನ್ನ ಪ್ರಕಾರ ಹಾರ್ದಿಕ್ ಪಾಂಡ್ಯ ಅವರಿಗೆ ತಂಡದ ನಾಯಕನಾಗಲು ಇರಬೇಕಾದ ಎಲ್ಲಾ ಅರ್ಹತೆಗಳು ಇವೆ ಎಂದು ಕುಮಾರ್ ಸಂಗಕ್ಕರ ತಿಳಿಸಿದ್ದಾರೆ. ಇದನ್ನು ಓದಿ.. Cricket News: ಇರಲಾರದೆ ಇರುವೆ ಬಿಟ್ಕೊಂಡ ರಾಹುಲ್: ಫಾರ್ಮ್ ಕಳೆದುಕೊಂಡಿದ್ದೀರಾ ಎಂದಿದ್ದಕ್ಕೆ ರಾಹುಲ್ ನೀಡಿದ ಬೇಜವಾಬ್ದಾರಿ ಉತ್ತರ ಏನು ಗೊತ್ತೇ??

Comments are closed.