Kannada News: ಈಗಾಗಲೇ ಸೋಲುವ ದಾರಿಯಲ್ಲಿರುವ ಶಾರುಖ್ ಗೆ ಮತ್ತೊಂದು ಬಿಗ್ ಶಾಕ್: ಚಿತ್ರ ಕಮರಿ ಹೋಯಿತೇ? ಏನಾಗಿದೆ ಗೊತ್ತೇ??

Kannada News: ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan) ಚಿತ್ರ ಇದೇ ಜನವರಿ 25ರಂದು ತೆರೆ ಕಾಣಲಿದೆ ಎಂದು ಈಗಾಗಲೇ ದಿನಾಂಕವನ್ನು ಘೋಷಿಸಿಯಾಗಿದೆ. ಆದರೆ ಇದರ ಮಧ್ಯೆ ಈ ಚಿತ್ರಕ್ಕೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ಇಷ್ಟು ದಿನಗಳ ಕಾಲ ಬೇಷರಂ ಹಾಡಿನ ವಿಷಯವಾಗಿ ಹಿಂದು ಪರ ಸಂಘಟನೆಗಳ ವಿರೋಧವನ್ನು ಎದುರಿಸಿದ್ದ ಪಠಣ್ ಚಿತ್ರ ಈಗ ಮತ್ತೊಂದು ಸಂಕಷ್ಟಕ್ಕೆ ಗುರಿಯಾಗಿದೆ. ಈಗಾಗಲೇ ದೀಪಿಕಾ ನೆಟ್ಟಿಗರಿಂದ ಸಾಕಷ್ಟು ಟೀಕೆಗಳನ್ನು ಕೇಳಿದ್ದಾರೆ. ಇನ್ನು ಶಾರುಖ್ ಖಾನ್ ಕೆಲವು ವರ್ಷಗಳಿಂದ ನಿರಂತರವಾಗಿ ಸೋಲು ಕಾಣುತ್ತಿದ್ದಾರೆ. ಹೀಗಾಗಿ ಅವರಿಗೆ ಈ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತೆ ಮಾಡಿದೆ. ಆದರೆ ನಿರಂತರವಾಗಿ ಈ ಚಿತ್ರ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಮತ್ತೊಂದು ತಲೆನೋವನ್ನು ತಂದುಕೊಂಡಿದೆ.

ಬಹು ನಿರೀಕ್ಷಿತ ಪಠಾಣ್ ಚಿತ್ರ ಮುಂದಿನ ಜನವರಿ 25ಕ್ಕೆ ತೆರೆ ಕಾಣಲು ಈಗಾಗಲೇ ದಿನಾಂಕ ನಿಗದಿಯಾಗಿತ್ತು. ಇನ್ನು ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಕಳಿಸಲಾಗಿತ್ತು. ಈ ವೇಳೆ ಸೆನ್ಸಾರ್ ಮಂಡಳಿ ಪಠಾಣ್ ಚಿತ್ರದ ಬಗ್ಗೆ ತಕರಾರು ತೆಗೆದಿದೆ. ಚಿತ್ರದಲ್ಲಿನ ಹಲವಾರು ದೃಶ್ಯಗಳು ಮತ್ತು ಹಾಡುಗಳ ಕುರಿತಾಗಿ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಇದೀಗ ಚಿತ್ರತಂಡಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಂದ ಹಾಗೆ ಚಿತ್ರತಂಡ ಸೆನ್ಸಾರ್ ಗಾಗಿ ಚಿತ್ರವನ್ನು ಕಳಿಸಿದೆ. ಈ ಸಂದರ್ಭ ಇಡೀ ಮಂಡಳಿ ಈ ಚಿತ್ರದ ಬಗ್ಗೆ ಅನೇಕ ತಕರಾರುಗಳನ್ನು ತೆಗೆದಿದೆ. ಚಿತ್ರದಲ್ಲಿ ಹಲವಾರು ಅಶ್ಲೀಲ ಅಥವಾ ಅನಗತ್ಯವಾದ ಬೋಲ್ಡ್ ದೃಶ್ಯಗಳು ಇದ್ದಿರಬಹುದು ಎಂದು ಎಲ್ಲರೂ ಅಭಿಪ್ರಾಯ ಪಡುತ್ತಿದ್ದಾರೆ. ಇದಲ್ಲದೆ ಚಿತ್ರದ ಬೇಷರಂ (Besharam) ಹಾಡಿನ ಬಗ್ಗೆಯೂ ಈ ಮೊದಲೇ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಈ ಹಾಡಿನಲ್ಲಿ ದೀಪಿಕಾ ಈ ಹಿಂದಿಗಿಂತಲೂ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದನ್ನು ಓದಿ..Biggboss Kannada:ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರ ಹೇಗಿದೆ ಗೊತ್ತೇ?? ಅದೇಗೆ ದಿವ್ಯ ರವರು ಗುರೂಜಿ ಗಿಂತ ಹೆಚ್ಚು ಮತ ಪಡೆದಿದ್ದಾರೆ ಗೊತ್ತೇ? ಕೊನೆಗೂ ಬಯಲಾಯ್ತು ಸತ್ಯ.

kannada news pathan | Kannada News: ಈಗಾಗಲೇ ಸೋಲುವ ದಾರಿಯಲ್ಲಿರುವ ಶಾರುಖ್ ಗೆ ಮತ್ತೊಂದು ಬಿಗ್ ಶಾಕ್: ಚಿತ್ರ ಕಮರಿ ಹೋಯಿತೇ? ಏನಾಗಿದೆ ಗೊತ್ತೇ??
Kannada News: ಈಗಾಗಲೇ ಸೋಲುವ ದಾರಿಯಲ್ಲಿರುವ ಶಾರುಖ್ ಗೆ ಮತ್ತೊಂದು ಬಿಗ್ ಶಾಕ್: ಚಿತ್ರ ಕಮರಿ ಹೋಯಿತೇ? ಏನಾಗಿದೆ ಗೊತ್ತೇ?? 2

ಅವರ ತುಂಡು ಬಟ್ಟೆಯ ಬಗ್ಗೆಯೂ ಕೂಡ ಟೀಕೆಗಳು ಕೇಳಿಬಂದಿದ್ದವು. ಈ ಹಾಡನ್ನು ಕೂಡ ಸೆನ್ಸಾರ್ ಮಂಡಳಿ ಕತ್ತರಿ ಹಾಕುವಂತೆ ಸೂಚಿಸಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ಬೇಷರಂ ರಂಗ್ ಎನ್ನುವ ಹಾಡು ಬಿಡುಗಡೆಗೊಂಡಿತ್ತು. ಈ ಹಾಡು ಬಿಡುಗಡೆಗೊಂಡ ನಂತರ ಚಿತ್ರತಂಡ ಜೊತೆಗೆ ವಿಶೇಷವಾಗಿ ದೀಪಿಕಾ ಪಡುಕೋಣೆ ಅವರ ವಿರುದ್ಧ ಅನೇಕ ಟೀಕೆಗಳು ಕೇಳಿಬಂದಿದ್ದವು. ಈ ಹಿಂದಿನ ಚಿತ್ರಗಳಿಗೆ ಹಾಕಿಕೊಂಡಿದ್ದಕ್ಕಿಂತಲೂ ತೀರಾ ಕಡಿಮೆ ಬಟ್ಟೆ ಅಂದರೆ ಬಿಕಿನಿಯನ್ನು ಅವರು ಈ ಹಾಡಿಗಾಗಿ ತೊಟ್ಟಿದ್ದರು. ಸಾಕಷ್ಟು ಬೋಲ್ಡಾಗಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಅಲ್ಲದೆ ಹಾಡಿನ ಮಧ್ಯ ಕೆಲವು ದೃಶ್ಯಗಳಲ್ಲಿ ಅವರು ಕೇಸರಿ ಬಿಕಿನಿ ತೊಟ್ಟಿದರು. ಹೀಗಾಗಿ ಹಲವಾರು ಹಿಂದೂ ಸಂಘಟನೆಗಳು ಇದರ ವಿರುದ್ಧ ಪ್ರತಿಭಟನೆಯನ್ನು ಮಾಡಿದ್ದರು. ನಮ್ಮ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲೆಂದೇ ಈ ರೀತಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅದರಲ್ಲೂ ದೀಪಿಕಾ ಪಡುಕೋಣೆ ಬಗ್ಗೆ ಹಲವಾರು ಆರೋಪಗಳು ಕೇಳಿಬಂದಿದ್ದವು.

ಇನ್ನು ಈ ಆರೋಪ ತಣ್ಣಗಾಗುವ ಮೊದಲೇ ಸೆನ್ಸಾರ್ ಮಂಡಳಿ ಇದೀಗ ಚಿತ್ರ ತಂಡಕ್ಕೆ ಮತ್ತೊಂದು ತಲೆನೋವು ತಂದಿಟ್ಟಿದೆ. ಚಿತ್ರದ ಹಲವಾರು ವಿಷಯಗಳ ಕುರಿತಾಗಿ ತಕರಾರು ತೆಗೆದಿರುವ ಮಂಡಳಿ ಇಡೀ ಚಿತ್ರವನ್ನು ಮತ್ತೊಮ್ಮೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಸರಿಪಡಿಸಿ ಸೆನ್ಸಾರ್ಗೆ ಯೋಗ್ಯವಾಗುವ ರೀತಿ ಮತ್ತೆ ಸಲ್ಲಿಸಿ ಎಂದು ಸೂಚಿಸಿದೆ ಎಂದು ವರದಿಯಾಗಿದೆ. ಇದೀಗ ಚಿತ್ರತಂಡ ಮತ್ತೆ ಚಿತ್ರವನ್ನು ವೀಕ್ಷಣೆಗೆ ಯೋಗ್ಯವಾಗುವಂತೆ ಸ್ವತಃ ತಾವೇ ಮೊದಲು ಸೆನ್ಸಾರ್ ಮಾಡಿ ನಂತರ ಸೆನ್ಸಾರ್ ಮಂಡಳಿಗೆ ಕಳಿಸಬೇಕಾದ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡಿದೆ. ಒಂದು ವೇಳೆ ಸೆನ್ಸಾರ್ ಮಂಡಳಿ ಚಿತ್ರ ಮರು ಪರಿಶೀಲನೆ ನಂತರ ಸೆನ್ಸಾರ್ ನೀಡುವುದು ತಡವಾದರೆ ಚಿತ್ರ ಬಿಡುಗಡೆಯಾಗುವುದು ಸಹ ತಡವಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನು ಓದಿ.. Kannada News: ತೆಲುಗಿನಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡಿ, ಬುಂದಿ ಮೊಸರನ್ನ ಮಾಡಿದ ಶ್ರೀಲೀಲಾ. ಯಶಸ್ಸು ಪಡೆಯುತ್ತಿದ್ದಂತೆ ಕೇಳಿದ ಸಂಭಾವನೆ ಕೇಳಿ, ನಿರ್ಮಾಪಕರು ಶಾಕ್. ಎಷ್ಟು ಗೊತ್ತೇ??

Comments are closed.