Biggboss Kannada: ದಿಡೀರ್ ಎಂದು ಬಿಗ್ ಬಾಸ್ ಮನೆಗೆ ಮತ್ತೊಬ್ಬರು 2 ನೇ ವೈಲ್ಡ್ ಕಾರ್ಡ್ ಎಂಟ್ರಿ. ಏನಾಗಿದೆ ಗೊತ್ತೇ ಬಿಗ್ ಬಾಸ್ ನಲ್ಲಿ??
Biggboss Kannada: ಬಿಗ್ ಬಾಸ್ ಸೀಸನ್ 9 (BBK9) ಶುರುವಾಗಿ ಈಗಾಗಲೇ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಸಮಯವಾಗಿದೆ. ದಿನದಿಂದ ದಿನಕ್ಕೆ ಕಾರ್ಯಕ್ರಮ ಹೆಚ್ಚು ಕುತೂಹಲದಿಂದ ಕೂಡಿದೆ ಎಂದೇ ಹೇಳಬಹುದು. ಪ್ರತಿ ಸೀಸನ್ನಲ್ಲೂ ಸಾಮಾನ್ಯವಾಗಿ ವೈಲ್ಡ್ ಕಾರ್ಡ್ ಎಂಟ್ರಿ ಇರುತ್ತದೆ. ಅದರಂತೆ ಈ ಸೀಸನ್ ಅಲ್ಲೂ ಕೂಡ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎನ್ನುವುದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಆ ಕುತೂಹಲಕ್ಕೆ ತೆರೆ ಬಿದ್ದು ಎಲಿಮಿನೇಟ್ ಆಗಿದ್ದ ದೀಪಿಕಾ ದಾಸ್ (Deepika Das) ಅವರೇ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದರು. ಇದೀಗ ಈ ಸೀಸನ್ಗೆ ಎರಡನೇ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಎನ್ನುವುದು ಚರ್ಚೆಗೆ ಕಾರಣವಾಗುತ್ತಿದೆ. ಇಷ್ಟು ದಿನ ಇದ್ದ ಹೆಸರುಗಳ ಬದಲಿಗೆ ಈಗ ಮತ್ತೊಬ್ಬ ಆಟಗಾರನ ಹೆಸರು ಕೇಳಿ ಬರುತ್ತಿದೆ.
ಈ ಸೀಸನ್ ನ ಮೊದಲ ವೈಲ್ಡ್ ಕಾರ್ಡ್ ಎಂಟ್ರಿ ದೀಪಿಕಾ ದಾಸ್ ಅವರಿಗೆ ದೊರೆತಿದೆ. ಫಿನಾಲೆ ಕಂಟೆಸ್ಟೆಂಟ್ ಎಂದೇ ಬಿಂಬಿತವಾಗಿದ್ದ ದೀಪಿಕಾ ಮನೆಯಿಂದ ಎಲಿಮಿನೇಟ್ ಆಗಿದ್ದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು. ಆದರೆ ಮನೆಯಿಂದ ಹೊರ ನಡೆದು ಸುದೀಪ ಅವರ ಜೊತೆಗೆ ಮಾತನಾಡಿದ ನಂತರ ಎರಡೇ ದಿನದ ಅಂತರದಲ್ಲಿ ಅವರು ಮತ್ತೆ ಮನೆಯೊಳಗೆ ಪ್ರವೇಶಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಬಾಸ್ ವೈಲ್ಡ್ ಕಾರ್ಡ ಎಂಟ್ರಿ ಮೂಲಕ ಮೊದಲ ಸ್ಪರ್ಧಿಯಾಗಿ ದೀಪಿಕಾ ದಾಸ್ ಅವರನ್ನು ಮತ್ತೊಂದು ಅವಕಾಶ ನೀಡಿ ಮನೆಯೊಳಗೆ ಕಳಿಸಿದೆ. ಇದೀಗ ಎರಡನೇ ಸ್ಪರ್ಧಿಯಾಗಿ ಯಾರು ಮನೆಯೊಳಗೆ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎನ್ನುವ ಚರ್ಚೆಯಾಗುತ್ತಿದೆ. ಇಷ್ಟು ದಿನ ಕೇಳಿ ಬರುತ್ತಿದ್ದ ಹೆಸರುಗಳು ಹಿಂದಕ್ಕೆ ಸರಿದು ಇದೀಗ ಹೊಸ ಆಟಗಾರರೊಬ್ಬರ ಹೆಸರು ಮುನ್ನಡೆಗೆ ಬಂದಿದೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಓ ಟಿ ಟಿ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಸೋನು ಗೌಡ ಬರುತ್ತಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು.
ದೀಪಿಕಾ ದಾಸ್ ಮತ್ತೆ ಮನೆ ಒಳಗೆ ಪ್ರವೇಶಿಸುವವರೆಗೂ ಸೋನು ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹೇಳಲಾಗುತ್ತಿತ್ತು. ಆದರೆ ಆ ಯೋಚನೆ ತಲೆಕೆಳಗಾಗಿತ್ತು. ಇನ್ನೂ ಸೋನು ಗೌಡ ಅವರನ್ನು ಬಿಗ್ ಬಾಸ್ ಮನೆಯೊಳಗೆ ಕರೆಸಿಕೊಳ್ಳುವುದು ಅಸಾಧ್ಯದ ಮಾತು ಎಂದೇ ಹೇಳಲಾಗುತ್ತಿದೆ. ಅದರ ಜೊತೆಗೆ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರನ್ನು ಎರಡನೇ ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಬಹುದು ಎನ್ನಲಾಗುತ್ತಿತ್ತು. ಆದರೆ ಇದೀಗ ಸಾಕಷ್ಟು ಬಿಸಿ ಇರುವ ಅವರು ಬಿಗ್ ಬಾಸ್ ಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಕಳೆದ ಸೀಸನ್ ರನ್ನರ್ ಅಪ್ ಆದ, ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅರವಿಂದ್ ಕೆ ಪಿ (Aravind KP) ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಎರಡನೇ ಸ್ಪರ್ಧಿಯಾಗಿ ಆಗಮಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಾಕಷ್ಟು ಟಫ್ ಕಂಟೆಸ್ಟೆಂಟ್ ಆಗಿದ್ದ, ಅದ್ಭುತ ಆಟಗಾರ ಅರವಿಂದ್ ಇದೀಗ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
Comments are closed.