Cricket News: ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಹೆಸರಿಸಿದ ಗಂಭೀರ್: ಪಾಂಡ್ಯ, ಪಂತ್, ರಾಹುಲ್ ಅಲ್ಲದೆ ಹೆಸರಿಸಿದ್ದು ಯಾರನ್ನು ಗೊತ್ತೇ??

Cricket News: ಟೀಮ್ ಇಂಡಿಯಾದ (Team India) ಭವಿಷ್ಯದ ನಾಯಕ ಯಾರು? ಎನ್ನುವ ಪ್ರಶ್ನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಮಾಜಿ ಆಟಗಾರರು ಮತ್ತು ಕ್ರಿಕೆಟ್ ತಜ್ಞರು ಕೆಲವು ಅನುಭವಿ ಉತ್ತಮ ಆಟಗಾರರನ್ನು ಭವಿಷ್ಯದ ನಾಯಕನಾಗಲು ಅರ್ಹ ಎಂದು ಸೂಚಿಸುತ್ತಿರುತ್ತಾರೆ. ಈ ಪಟ್ಟಿಯಲ್ಲಿ ಇದುವರೆಗೆ ಕೇಳಿ ಬಂದಿರುವ ಹೆಸರುಗಳೆಂದರೆ ಅದು ಕೆ ಎಲ್ ರಾಹುಲ್ (K L Rahul), ರಿಷಬ್ ಪಂತ್ (Rishab pant), ಹಾರ್ದಿಕ್ ಪಾಂಡ್ಯ (Hardik Pandya), ಶ್ರೇಯಸ್ ಅಯ್ಯರ್ (Shreyas Iyer). ಆದರೆ ಇದೇ ಮೊದಲ ಬಾರಿಗೆ ಗೌತಮ್ ಗಂಭೀರ್ (Gautam Gambhir) ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗಲು ಯಾರು ಅರ್ಹರು ಎನ್ನುವ ಪ್ರಶ್ನೆಗೆ ಮತ್ತೊಬ್ಬ ಹೊಸ ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಗೆ ಟೀಮ್ ಇಂಡಿಯಾವನ್ನು ಮುನ್ನಡೆಸಬಲ್ಲ ಭವಿಷ್ಯದ ನಾಯಕ ಯಾರಾಗಬಲ್ಲರು ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಆದರೆ ಇದಕ್ಕೆ ಅವರು ಅಚ್ಚರಿಯ ಉತ್ತರ ನೀಡಿದ್ದು, ಯಾರು ನಿರೀಕ್ಷಿಸದ ಆಟಗಾರನೊಬ್ಬನ ಹೆಸರನ್ನು ಸೂಚಿಸಿದ್ದಾರೆ. ಎಫ್‌ಐಸಿಸಿಐ (FICCI) ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೌತಮ್ ಗಂಭೀರವರಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸಬಲ್ಲ ಭವಿಷ್ಯದ ನಾಯಕ ಯಾರು ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಗೌತಮ್ ಹಾರ್ದಿಕ್ ಪಾಂಡ್ಯ ಮತ್ತು ಪೃಥ್ವಿ ಶಾ (Prithvi Shaw) ಅವರ ಹೆಸರನ್ನು ಸೂಚಿಸಿದ್ದಾರೆ. ಇಬ್ಬರು ಆಟಗಾರರು ತಂಡವನ್ನು ಮುನ್ನಡೆಸಬಲ್ಲ ಟೀಮ್ ಇಂಡಿಯಾದ ನಾಯಕರಾಗಲು ಅರ್ಹರು ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ತಿಳಿದರೆ ಶಾಕ್ ಆಗ್ತೀರಾ. ಎಷ್ಟು ಇದೇ ಗೊತ್ತೆ??

cricket news gambhir about prithvi | Cricket News: ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಹೆಸರಿಸಿದ ಗಂಭೀರ್: ಪಾಂಡ್ಯ, ಪಂತ್, ರಾಹುಲ್ ಅಲ್ಲದೆ ಹೆಸರಿಸಿದ್ದು ಯಾರನ್ನು ಗೊತ್ತೇ??
Cricket News: ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಹೆಸರಿಸಿದ ಗಂಭೀರ್: ಪಾಂಡ್ಯ, ಪಂತ್, ರಾಹುಲ್ ಅಲ್ಲದೆ ಹೆಸರಿಸಿದ್ದು ಯಾರನ್ನು ಗೊತ್ತೇ?? 2

ಹಾರ್ದಿಕ್ ಪಾಂಡ್ಯ ಅವರ ಹೆಸರು ಅಷ್ಟೇನೂ ಆಶ್ಚರ್ಯ ಉಂಟು ಮಾಡಿಲ್ಲ. ಈ ಮೊದಲು ಅವರು ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ (IPL) ನಲ್ಲಿ ಗೆಲ್ಲಿಸಲು ಪ್ರಮುಖ ಕಾರಣರಾಗಿದ್ದರು. ಆದರೆ ಪೃಥ್ವಿ ಶಾ ಅವರ ಹೆಸರು ಅಚ್ಚರಿ ಮೂಡಿಸಿದೆ. 2021 ರ ನಂತರ ಅವರು ಯಾವ ಆಟವನ್ನು ಆಡಿಲ್ಲ. 2021ರ ನಂತರ ಟೀಮ್ ಇಂಡಿಯಾ ಪರ ಒಂದು ಆಟವನ್ನು ಆಟದ ಪೃಥ್ವಿ ಶಾ ಅವರ ಹೆಸರನ್ನು ಸೂಚಿಸಿದ್ದಕ್ಕಾಗಿ ಗೌತಮ್ ಗಂಭೀರ್ ಸೂಕ್ತ ಕಾರಣಗಳನ್ನು ನೀಡಿದ್ದಾರೆ. ಪೃಥ್ವಿ ಶಾ ಒಬ್ಬರು ಯುವ ಆಟಗಾರರಾಗಿದ್ದಾರೆ, ನಾನು ಅವರ ಹೆಸರನ್ನು ತೆಗೆದುಕೊಳ್ಳಲು ಮುಖ್ಯ ಕಾರಣವೆಂದರೆ ಅವರು ಒಬ್ಬ ಅದ್ಭುತ ಆಕ್ರಮಣಕಾರಿ ಆಟಗಾರರಾಗಿದ್ದಾರೆ. ಕ್ರಿಕೆಟ್ಗೆ ಬೇಕಿರುವುದು ಇಂಥದೇ ಆಕ್ರಮಣಕಾರಿ ಶೈಲಿಯ ಪ್ರದರ್ಶನವಾಗಿದೆ. ಹೀಗಾಗಿ ಪಂದ್ಯದಲ್ಲಿ ಯಶಸ್ವಿಯಾಗಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಆಡಬಲ್ಲವರಾಗಿದ್ದರಿಂದ ಅವರು ತಂಡದ ನಾಯಕರಾಗಲು ಅರ್ಹತೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada News: ಎಲ್ಲವೂ ಚೆನ್ನಾಗಿತ್ತು, ಆದರೆ ಕೇವಲ 10 ಮಾರ್ಕ್ಸ್ ಕಡಿಮೆ ಬಂತು, ಅದಕ್ಕೆ ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ??

Comments are closed.