Kannada News: ಎಲ್ಲವೂ ಚೆನ್ನಾಗಿತ್ತು, ಆದರೆ ಕೇವಲ 10 ಮಾರ್ಕ್ಸ್ ಕಡಿಮೆ ಬಂತು, ಅದಕ್ಕೆ ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ??

Kannada News: ಸಾಮಾನ್ಯವಾಗಿ ಶಾಲಾ ಕಾಲೇಜಿನಲ್ಲಿ ವರ್ಷವಿಡಿ ಪಾಠ ಮಾಡಿ ಕೊನೆಯಲ್ಲಿ ಅವರು ಏನನ್ನು ಕಲಿತಿದ್ದಾರೆ, ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ಅರಿಯಲು ಪರೀಕ್ಷೆಯನ್ನು ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳಬೇಕು ಎನ್ನುವುದು ಎಲ್ಲ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಶಾಲೆಯಲ್ಲಿ ಓದಿನಲ್ಲಿ ತಾನು ಎಲ್ಲರಿಗಿಂತ ಮುಂದಿರಬೇಕು ಎನ್ನುವುದು ವಿದ್ಯಾರ್ಥಿಗಳ ಆಸೆ ಆಗಿರುತ್ತದೆ. ಆದರೆ ಕೆಲವೊಮ್ಮೆ ಹೆಚ್ಚು ಮಾರ್ಕ್ಸ್ ಗಳಿಸಿದರೆ ಮಾತ್ರ ತಾನು ಬುದ್ಧಿವಂತ ಎಂಬ ರೀತಿಯ ಮನಸ್ಥಿತಿಯನ್ನು ವಿದ್ಯಾರ್ಥಿಗಳಿಗೆ ತುಂಬಲಾಗುತ್ತದೆ. ವಾತಾವರಣ, ಪೋಷಕರು, ಶಿಕ್ಷಕರು ಹೀಗೆ ಸಾಕಷ್ಟು ಜನರಿಂದ ಮಕ್ಕಳಿಗೆ ಅದೇ ರೀತಿಯ ಮನಸ್ಥಿತಿ ಉಂಟಾಗಿರುತ್ತದೆ.

ಪರೀಕ್ಷೆಯಲ್ಲಿ ಕೇವಲ 10 ಅಂಕಗಳು ಕಡಿಮೆ ಬಂದದ್ದಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಹಿಂದಿನ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉಚಿತ ಸೀಟ್ ಅರ್ಹತೆ ಪಡೆದು ಕಾಲೇಜಿಗೆ ಪ್ರವೇಶ ಪಡೆದಿದ್ದಳು. ಆದರೆ ಪ್ರಥಮ ಪಿಯುಸಿಯ ಪರೀಕ್ಷೆಯಲ್ಲಿ ಈ ಹಿಂದಿನ ಪರೀಕ್ಷೆಗಿಂತ ಕೇವಲ 10 ಅಂಕಗಳು ಕಡಿಮೆ ಬಂದಿದ್ದಕ್ಕಾಗಿ ದೀಪ್ತಿ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಬ್ರಿಯಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ದೀಪ್ತಿ ಪ್ರಥಮ ಪಿಯುಸಿ ಓದುತ್ತಿದ್ದಳು. ಇತ್ತೀಚಿಗೆ ನಡೆದ ಪರೀಕ್ಷೆಯಲ್ಲಿ ಆಕೆ ಅದರ ಹಿಂದಿನ ಪರೀಕ್ಷೆಗಿಂತಲೂ 10 ಅಂಕ ಕಡಿಮೆ ಪಡೆದಿದ್ದಳು. ಹೀಗಾಗಿ ಪ್ರಿನ್ಸಿಪಾಲ್ ಮುಂದಿನ ಬಾರಿ ಚೆನ್ನಾಗಿ ಓದುವಂತೆ ಹೇಳಿದ್ದರು ಎನ್ನಲಾಗಿದೆ. ಇದನ್ನು ಓದಿ..Kannada News: ಅಭಿಮಾನಿಗಳು ಡಿ ಬಾಸ್ ಹೇ ದೇವರು ಎಂದುಕೊಂಡು ಆರಾಧಿಸುತ್ತಿದ್ದಾರೆ, ಆದರೆ ಅಭಿಮಾನಿಗಳ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್. ಏನು ಗೊತ್ತೇ?

kannada news deepti 1 | Kannada News: ಎಲ್ಲವೂ ಚೆನ್ನಾಗಿತ್ತು, ಆದರೆ ಕೇವಲ 10 ಮಾರ್ಕ್ಸ್ ಕಡಿಮೆ ಬಂತು, ಅದಕ್ಕೆ ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ??
Kannada News: ಎಲ್ಲವೂ ಚೆನ್ನಾಗಿತ್ತು, ಆದರೆ ಕೇವಲ 10 ಮಾರ್ಕ್ಸ್ ಕಡಿಮೆ ಬಂತು, ಅದಕ್ಕೆ ಈ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ?? 2

ಕಡಿಮೆ ಅಂಕ ಬಂದಿದ್ದಕ್ಕಾಗಿ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮೊದಲು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ ದೀಪ್ತಿ ಕಾಲೇಜಿಗೆ ಉಚಿತ ಪ್ರವೇಶ ಪಡೆದಿದ್ದಳು. ಆದರೆ ಈ ಸಲ ಕಡಿಮೆ ಅಂಕ ಬಂದುದ್ದಕ್ಕಾಗಿ ಅಪಮಾನದಿಂದ ಆಕೆ ಜೀವ ಕಳೆದುಕೊಂಡಿದ್ದಾಳೆ. ತನ್ನ ಮಗಳ ಸಾವಿಗೆ ಪ್ರಾಂಶುಪಾಲರೇ ಕಾರಣ ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ದೀತಿಯ ತಂದೆ ಆರೋಪಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳ ಮುಂದೆ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ನಿಂದಿಸಿರುವ ಪ್ರಾಂಶುಪಾಲರು ಫೈನ್ ಹಾಕುವುದಾಗಿ ಎಚ್ಚರಿಸಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಮನನೊಂದಿರುವ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ತಂದೆ ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನು ಓದಿ.. Kannada News: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ತಿಳಿದರೆ ಶಾಕ್ ಆಗ್ತೀರಾ. ಎಷ್ಟು ಇದೇ ಗೊತ್ತೆ??

Comments are closed.