Kannada News: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ರವರ ನಡುವಿನ ವಯಸ್ಸಿನ ಅಂತರ ತಿಳಿದರೆ ಶಾಕ್ ಆಗ್ತೀರಾ. ಎಷ್ಟು ಇದೇ ಗೊತ್ತೆ??
Kannada News: ಕಳೆದ ಕೆಲವು ದಿನಗಳಿಂದ ನಟಿ ಹರಿಪ್ರಿಯ ಮತ್ತು ವಶಿಷ್ಟ ಸಿಂಹ (Vasishta Simha) ಅವರ ಜೋಡಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದೆ. ಅಧಿಕೃತವಾಗಿ ಹರಿಪ್ರಿಯಾ (Haripriya) ಮತ್ತು ವಶಿಷ್ಟ ಸಿಂಹ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿರುವ ಈ ಇಬ್ಬರು ಇದೀಗ ದಂಪತಿಗಳಾಗಲಿದ್ದಾರೆ. ಈ ಮೊದಲು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಫೋಟೋ, ಡಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದ ಅವರು ಕೊಂಚ ಅಭಿಮಾನಿಗಳಲ್ಲಿ ಇವರಿಬ್ಬರ ನಡುವೆ ಏನೋ ಇದೆ ಎನ್ನುವಂತೆ ಅನುಮಾನ ಮೂಡಿಸಿದ್ದರು. ಇದೀಗ ಅವರು ಅಧಿಕೃತವಾಗಿ ಜೋಡಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಜೋಡಿಯ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವುದನ್ನು ಇಲ್ಲಿ ಹೇಳಲಾಗಿದೆ.
ನಟಿ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪೂ ಮೂಡಿಸಿರುವ ನಟಿಯಾಗಿದ್ದಾರೆ. ಸಾಕಷ್ಟು ಜನಪ್ರಿಯ ಚಿತ್ರಗಳನ್ನು ನೀಡಿರುವ ಅವರು ತಮ್ಮ ನಟನೆ, ಸರಳತೆ, ಸೌಂದರ್ಯದಿಂದಲೇ ಹೆಸರುವಾಸಿಯಾಗಿದ್ದಾರೆ. ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿರುವ ಹರಿಪ್ರಿಯ ಇಂದಿಗೂ ಬಹುಬೇಡಿಕೆಯ ನಟಿ. ಇನ್ನು ವಶಿಷ್ಟ ಸಿಂಹ ಅವರು ಕಳ್ಳ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಖಡಕ್ ಅಭಿನಯ, ಕಂಚಿನ ಕಂಠದಿಂದಲೇ ಅವರು ಜನಪ್ರಿಯರಾಗಿದ್ದಾರೆ. ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಇತ್ತೀಚಿಗೆ ಕೆಲವೊಮ್ಮೆ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗಿರುವ ಚಿತ್ರಗಳನ್ನು, ಒಟ್ಟಿಗೆ ಡ್ಯಾನ್ಸ್ ಮಾಡುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದು ಅಭಿಮಾನಿಗಳಿಗೆ ಅನುಮಾನ ಮೂಡಿಸಿತು. ಇದೀಗ ಆ ಅನುಮಾನಕ್ಕೆ ತೆರೆ ಬಿದ್ದಿದ್ದು ಈ ಜೋಡಿಗಳು ಅಧಿಕೃತವಾಗಿ ಮದುವೆಯಾಗಲಿದ್ದಾರೆ. ಇದನ್ನು ಓದಿ.. Kannada News: ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಅನ್ನೇ ಮರೆತ ರಶ್ಮಿಕಾ ಕುರಿತು ಇದೀಗ ಪ್ರೋಮೊದ್ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ಪ್ರೋಮೊದ್.
ಇತ್ತೀಚಿಗೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕೆಲವು ಸಂಪ್ರದಾಯಗಳ ಪ್ರಕಾರ ಮದುವೆಗೂ ಮೊದಲು ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸಲಾಗುತ್ತದೆ. ಜೊತೆಗೆ ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಹರಿಪ್ರಿಯ ಅವರು, ಅದರಲ್ಲಿ ಯಾರೋ ಒಬ್ಬರು ಹರಿಪ್ರಿಯಾ ಅವರನ್ನು ಸಮಾಧಾನ ಮಾಡುತ್ತಿದ್ದಾರೆ. ಆದರೆ ಅದು ಯಾರು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಎಲ್ಲ ಮಾಹಿತಿ ಬಹಿರಂಗಗೊಂಡ ನಂತರ ಅದು ವಶಿಷ್ಟ ಸಿಂಹ ಅವರೇ ಎಂದು ತಿಳಿದು ಬಂದಿತ್ತು. ಇದೀಗ ಈ ಜೋಡಿ ಅಧಿಕೃತವಾಗಿ ಮದುವೆಯ ಮುದ್ರೆಗೆ ಹಣೆಯಾಗುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಲಿದ್ದು, ಸಾಕಷ್ಟು ಕಡೆ ಇವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಈ ಜೋಡಿ ಸಂಚಲನ ಸೃಷ್ಟಿಸಿದೆ. ಇನ್ನೂ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಹೇಳುವುದಾದರೆ ವಶಿಷ್ಟ ಸಿಂಹ ಅವರಿಗೆ 34 ವರ್ಷ ವಯಸ್ಸು. ನಟಿ ಹರಿಪ್ರಿಯಾ ಅವರಿಗೆ 31 ವರ್ಷ ವಯಸ್ಸಾಗಿದೆ. ಇದನ್ನು ಓದಿ..Kannada News: ಅಭಿಮಾನಿಗಳು ಡಿ ಬಾಸ್ ಹೇ ದೇವರು ಎಂದುಕೊಂಡು ಆರಾಧಿಸುತ್ತಿದ್ದಾರೆ, ಆದರೆ ಅಭಿಮಾನಿಗಳ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್. ಏನು ಗೊತ್ತೇ?
Comments are closed.