Kannada News: ಅಭಿಮಾನಿಗಳು ಡಿ ಬಾಸ್ ಹೇ ದೇವರು ಎಂದುಕೊಂಡು ಆರಾಧಿಸುತ್ತಿದ್ದಾರೆ, ಆದರೆ ಅಭಿಮಾನಿಗಳ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್. ಏನು ಗೊತ್ತೇ?

Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರನ್ನು ಅಭಿಮಾನಿಗಳು ಡಿ ಬಾಸ್ ಎಂದೆ ಕರೆಯುತ್ತಾರೆ. ನಟ ದರ್ಶನ್, ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಅತಿ ಹೆಚ್ಚು ಮಾಸ್ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ದರ್ಶನ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ದರ್ಶನ್ ಎಂದರೆ ಪ್ರಾಣ ಬೇಕಾದರೂ ಕೊಡುವ, ಏನನ್ನೂ ಬೇಕಾದರೂ ಮಾಡುವ ಅಪ್ಪಟ ಅಭಿಮಾನಿಗಳು ಲಕ್ಷಾಂತರ ಜನರಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ದರ್ಶನ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮೋಷನ್ ಭರದಿಂದ ಸಾಗಿದೆ. ಚಿತ್ರದ ಪ್ರಚಾರದ ವೇಳೆ ನಟ ದರ್ಶನ್ ಅಭಿಮಾನಿಗಳ ಕುರಿತು ಭಾವುಕರಾಗಿ ಕೆಲವು ಮಾತುಗಳನ್ನು ಆಡಿದ್ದಾರೆ.

ನಟ ದರ್ಶನ್ ಅವರ ಸಾಕಷ್ಟು ಕುತೂಹಲ ಸೃಷ್ಟಿಸಿರುವ ಕ್ರಾಂತಿ (Kranthi) ಸಿನಿಮಾ ಇದೆ 2023ರ ಜನವರಿ 26ರಂದು ಭರ್ಜರಿಯಾಗಿ ತೆರೆ ಕಾಣಲಿದೆ. ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ನಂತರ ರೊಚ್ಚಿಗೆದ್ದ ಅಭಿಮಾನಿಗಳು ತಮಗೆ ಯಾವ ಮಾಧ್ಯಮವೂ ಬೇಕಾಗಿಲ್ಲ, ದರ್ಶನ್ ರವರ ಚಿತ್ರವನ್ನು ಗೆಲ್ಲಿಸಲು ಅದಕ್ಕೆ ಪ್ರಚಾರ ನೀಡಲು ಅಭಿಮಾನಿಗಳೇ ಸಾಕು ಎಂದು ಕರ್ನಾಟಕದಲ್ಲಿ ಎಂದೆಂದೂ ಆಗದ ಮಟ್ಟಿಗೆ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡಿ ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಇದೇ ವೇಳೆ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಈ ವೇಳೆ ನಟ ದರ್ಶನ್ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಯನ್ನು ನೆನೆದು ಭಾವುಕರಾಗಿದ್ದಾರೆ. “ನನ್ನ ಅಭಿಮಾನಿಗಳು ನನ್ನ ಮೇಲೆ ಎಷ್ಟೆಲ್ಲ ಪ್ರೀತಿ ತೋರಿಸುತ್ತಾರೆ. ಈ ಪ್ರೀತಿಯನ್ನು, ಅವರ ಋಣವನ್ನು ನಾನು ಹೇಗೆ ತೀರಿಸಲಿ? ನನ್ನ ಇಡೀ ಜೀವನ ಪೂರ್ತಿ ಅವರ ಋಣವನ್ನು ತೀರಿಸಲಾರೆ” ಎಂದಿದ್ದಾರೆ. ಇದನ್ನು ಓದಿ.. Kannada News: ಕಾಂತಾರ ಯಶಸ್ಸು ಪಡೆದ ಬೆನ್ನಲ್ಲೇ ಹೊಸ ಚಿತ್ರಕ್ಕೆ ಮೈಂಡ್ ಬ್ಲಾಕ್ ಸಂಭಾವನೆ ಕೇಳಿದ ಸಪ್ತಮಿ ಗೌಡ. ಎಷ್ಟು ಅಂತೇ ಗೊತ್ತೇ??

kannada news darshan about fans | Kannada News: ಅಭಿಮಾನಿಗಳು ಡಿ ಬಾಸ್ ಹೇ ದೇವರು ಎಂದುಕೊಂಡು ಆರಾಧಿಸುತ್ತಿದ್ದಾರೆ, ಆದರೆ ಅಭಿಮಾನಿಗಳ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್. ಏನು ಗೊತ್ತೇ?
Kannada News: ಅಭಿಮಾನಿಗಳು ಡಿ ಬಾಸ್ ಹೇ ದೇವರು ಎಂದುಕೊಂಡು ಆರಾಧಿಸುತ್ತಿದ್ದಾರೆ, ಆದರೆ ಅಭಿಮಾನಿಗಳ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಡಿ ಬಾಸ್. ಏನು ಗೊತ್ತೇ? 2

“ನನ್ನ ಅಭಿಮಾನಿ ಸೆಲಬ್ರೆಟಿಗಳು ಕ್ರಾಂತಿ ಸಿನಿಮಾವನ್ನು ಅವರದ್ದೇ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಪ್ರೀತಿಯಿಂದ ತೆಗೆದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಅವರ ಪ್ರೀತಿಗೆ ಬೆಲೆಕಟ್ಟಲಾರೆ. ನನ್ನ ಸಿನಿಮಾವನ್ನು ಪ್ರಚಾರ ಮಾಡಿ ಎಂದು ನಾನು ಅವರಿಗೆ ಯಾವಾಗಲೂ ಹೇಳಿಯೇ ಇಲ್ಲ. ಆದರೂ ಕ್ರಾಂತಿ ಸಿನಿಮಾವನ್ನು ಅಭಿಮಾನದಿಂದ ತೆಗೆದುಕೊಂಡು ತಮ್ಮದೇ ಸ್ವಂತ ಖರ್ಚಿನಲ್ಲಿ ರಾಜ್ಯದ ಮೂಲೆ ಮೂಲೆಗೂ ತಲುಪಿಸುತ್ತಿದ್ದಾರೆ. ಈ ಪ್ರೀತಿಗೆ ನಾನು ಏನು ಹೇಳಲಿ? ಅವರು ನನ್ನಿಂದ ಹೆಚ್ಚಿಗೆ ಏನನ್ನು ನಿರೀಕ್ಷಿಸುವುದಿಲ್ಲ. ನನ್ನ ಖುಷಿಯನ್ನು ಅವರು ಬಯಸುತ್ತಾರೆ. ಹೆಚ್ಚೆಂದರೆ ಅವರೊಟ್ಟಿಗೆ ಮಾತನಾಡಿದರೆ, ಒಂದು ಸೆಲ್ಫಿ ಕೊಟ್ಟರೆ ಅವರಿಗೆ ಅದೇ ಕೋಟಿ ಕೊಟ್ಟಷ್ಟು. ಅದೇ ಅವರಿಗೆ ದೊಡ್ಡ ವಿಷಯ. ಕೆಲವರಂತೂ ನನ್ನನ್ನು ನೋಡಿಯೇ ಇರುವುದಿಲ್ಲ, ಆದರೂ ನನ್ನನ್ನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಈ ಅಭಿಮಾನಿಕ್ಕೆ, ಪ್ರೀತಿಗೆ ನಾನು ಜೀವನಪೂರ್ತಿ ದಾಸನಾಗಿರುತ್ತೇನೆ” ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ. ಇದನ್ನು ಓದಿ.. Kannada News: ಅವಕಾಶ ಕೊಟ್ಟ ಕಿರಿಕ್ ಪಾರ್ಟಿ ಅನ್ನೇ ಮರೆತ ರಶ್ಮಿಕಾ ಕುರಿತು ಇದೀಗ ಪ್ರೋಮೊದ್ ಶೆಟ್ಟಿ ಹೇಳಿದ್ದೇನು ಗೊತ್ತೇ?? ಅಂದು ರಿಷಬ್ ಇಂದು ಪ್ರೋಮೊದ್.

Comments are closed.