News from ಕನ್ನಡಿಗರು

Kannada News: ಕೆಜಿಎಫ್ ತಾತ ಸೀರಿಯಸ್ ಸೀರಿಯಸ್ ಅನ್ನುತ್ತಿದ್ದಾರೆ, ಆದರೆ ನಿಜಕ್ಕೂ ಕೃಷ್ಣ ರಾವ್ ರವರಿಗೆ ಏನಾಗಿದೆ ಗೊತ್ತೇ??

110

Kannada News: ಕೆಜಿಎಫ್ (KGF) ಚಿತ್ರದಲ್ಲಿ ನಟಿಸುವ ಮೂಲಕ ಕೆಜಿಎಫ್ ತಾತ ಎಂದೆ ಹೆಸರುವಾಸಿಯಾಗಿದ್ದ ಕೃಷ್ಣ ರಾವ್ (Krishna Rao) ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಸ್ಥಿತಿ ಚಿಂತಾ ಜನಕವಾಗಿದೆ. ಅವರನ್ನು ತೀವ್ರ ನಿಗಾ ಘಟಕ (ಐಸಿಯು ನಲ್ಲಿ) ಇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಅವರ ಸೋದರ ಸಂಬಂಧಿಯೊಬ್ಬರು ಈ ಮಾಹಿತಿಯನ್ನು ಮಾಧ್ಯಮದವರ ಜೊತೆಗೆ ಹಂಚಿಕೊಂಡಿದ್ದಾರೆ. ಸುಮಾರು 72 ವರ್ಷದ ಕೃಷ್ಣ ರಾವ್ ಅವರು ಸ್ವಾಶಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಕೆಜಿಎಫ್ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಇತಿಹಾಸ ದಾಖಲಿಸಿದ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಭಿನಯಿಸಿದ ಪ್ರತಿ ಪಾತ್ರಗಳು ಕೂಡ ಹೆಸರು ಮಾಡಿದ್ದಲ್ಲದೆ ಆ ಪಾತ್ರವನ್ನು ಅಭಿನಯಿಸಿದ ಪ್ರತಿ ಪಾತ್ರಧಾರಿಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡರು. ಚಿತ್ರದಲ್ಲಿ ತಾತನ ಪಾತ್ರ ಮಾಡಿದ್ದ ಕೃಷ್ಣ ರಾವ್ ಅವರು ಆನಂತರ ಕೆಜಿಎಫ್ ತಾತ ಎಂದು ಪ್ರಸಿದ್ಧಿ ಪಡೆದಿದ್ದರು. 72 ವರ್ಷ ವಯಸ್ಸಾಗಿರುವ ಅವರು ಈ ಹಿಂದೆಯೂ ಕೆಲವು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಗ ಅವರ ಆರೋಗ್ಯದಲ್ಲಿ ಅಂತಹ ದೊಡ್ಡ ಸಮಸ್ಯೆ ಏನೂ ಎದುರಾಗಿರಲಿಲ್ಲ. ಆದರೆ ಇದೀಗ ಅವರು ಶ್ವಾಸಕೋಶ ಸಮಸ್ಯೆಯಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಅವರು ಬಳಲುತ್ತಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದನ್ನು ಓದಿ.. Cricket News: ಭಾರತ ತಂಡಕ್ಕೆ ಭವಿಷ್ಯದ ನಾಯಕನನ್ನು ಹೆಸರಿಸಿದ ಗಂಭೀರ್: ಪಾಂಡ್ಯ, ಪಂತ್, ರಾಹುಲ್ ಅಲ್ಲದೆ ಹೆಸರಿಸಿದ್ದು ಯಾರನ್ನು ಗೊತ್ತೇ??

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಕೃಷ್ಣ ರಾವ್ ಅವರನ್ನು ಬೆಂಗಳೂರಿನ (Bengaluru) ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅವರ ಆರೋಗ್ಯದ ಸ್ಥಿತಿ ಚಿಂತಾ ಜನಕವಾಗಿದೆ ಈ ಕುರಿತಂತೆ ಅವರ ಸೋದರ ಸಂಬಂಧಿಯಾದ ನಂದಕುಮಾರ್ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ. “ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯದ ಸ್ಥಿತಿ ತೀವ್ರ ಗಂಭೀರವಾಗಿದೆ. ಅವರ ಆರೋಗ್ಯದ ಸ್ಥಿತಿಯ ಕುರಿತು ನಿಖರವಾಗಿ ಏನನ್ನು ಹೇಳಲಾಗುತ್ತಿಲ್ಲ. ಅವರ ಸಹೋದರರಿಗೂ ಮಾಹಿತಿಯನ್ನು ತಿಳಿಸಲಾಗಿದೆ. ಅವರು ಆಸ್ಪತ್ರೆಗೆ ಬರುತ್ತಿದ್ದಾರೆ. ಕೃಷ್ಣರಾವ್ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಾಧ್ಯಮದವರ ಜೊತೆಗೆ ಅವರು ಹೇಳಿದ್ದಾರೆ. ಇದನ್ನು ಓದಿ.. Biggboss Kannada: ದಿಡೀರ್ ಎಂದು ಬಿಗ್ ಬಾಸ್ ಮನೆಗೆ ಮತ್ತೊಬ್ಬರು 2 ನೇ ವೈಲ್ಡ್ ಕಾರ್ಡ್ ಎಂಟ್ರಿ. ಏನಾಗಿದೆ ಗೊತ್ತೇ ಬಿಗ್ ಬಾಸ್ ನಲ್ಲಿ??

Leave A Reply

Your email address will not be published.