ಬಾಲಿವುಡ್ ನಲ್ಲಿ ತಾವೇ ಎಲ್ಲಾ ತಮ್ಮದೇ ಎಲ್ಲಾ ಎನ್ನುವಂತೆ ಟಾಪ್ ನಲ್ಲಿ ಇರುವ ಟಾಪ್ ನಟಿಯರ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವವರು, ಅದರಲ್ಲೂ ನಾಯಕ ನಾಯಕಿಯಾಗಿ ಅಭಿನಯಿಸುವ ರ ಜೀವನಶೈಲಿ ನನ್ಗಿಂತ ಬಹಳ ವಿಭಿನ್ನವಾಗಿರುತ್ತದೆ ಎಂದು ಜನರು ಭಾವಿಸುತ್ತಾರೆ. ಅವರಿಗೆ ಅತ್ಯಂತ ಹೆಚ್ಚಿನ ಸಂಭಾವನೆ ಸಿಗುತ್ತದೆ ಎಂಬುದು ಜನರ ನಂಬಿಕೆ. ಇದು ಎಲ್ಲ ಕಲಾವಿದರ ವಿಷಯದಲ್ಲಿ ಸತ್ಯವಲ್ಲ, ಆದರೆ ಸಂಪೂರ್ಣ ಸುಳ್ಳೂ ಅಲ್ಲ. ನೀವು ಬಾಲಿವುಡ್ ನಟಿಯರ ಬಗ್ಗೆ ನೋಡುವುದಾದರೆ ಅವರುಗಳು, ಒಂದು ಸಿನಿಮಾಕ್ಕೆ ಪಡೆದುಕೊಳ್ಳುವ ಸಂಭಾವನೆ ಕೇಳಿದ್ರೆ ನಿಮಗೆ ನಿಜಕ್ಕೂ ಶಾಕ್ ಆಗಬಹುದು. ಹಾಗಾದ್ರೆ ಬನ್ನಿ ಅಂತ ಬಾಲಿವುಡ್ ನಟಿಯರು ಯಾರು ಎಂಬುದನ್ನು ನೋಡೋಣ.

katrina kaif | ಬಾಲಿವುಡ್ ನಲ್ಲಿ ತಾವೇ ಎಲ್ಲಾ ತಮ್ಮದೇ ಎಲ್ಲಾ ಎನ್ನುವಂತೆ ಟಾಪ್ ನಲ್ಲಿ ಇರುವ ಟಾಪ್ ನಟಿಯರ ಸಂಭಾವನೆ ಎಷ್ಟು ಗೊತ್ತೇ??
ಬಾಲಿವುಡ್ ನಲ್ಲಿ ತಾವೇ ಎಲ್ಲಾ ತಮ್ಮದೇ ಎಲ್ಲಾ ಎನ್ನುವಂತೆ ಟಾಪ್ ನಲ್ಲಿ ಇರುವ ಟಾಪ್ ನಟಿಯರ ಸಂಭಾವನೆ ಎಷ್ಟು ಗೊತ್ತೇ?? 3

ಮೊದಲನೆಯದಾಗಿ ಕತ್ರಿನಾ ಕೈಫ್. ಇತ್ತೀಚಿಗಷ್ಟೇ ಹಸೆಮಣೆ ಏರಿರುವ ಕತ್ರಿನಾ ಕೈಫ್, ಪ್ರತಿ ಚಿತ್ರಕ್ಕೆ ಸುಮಾರು 15-21 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಕತ್ರಿನಾ ‘ಸೂರ್ಯವಂಶಿ’ಯಲ್ಲಿ ಅಕ್ಷಯ್ ಕುಮಾರ್ ಗೆ ಜೊತೆಯಾಗಿದ್ದಾರೆ. ಮತ್ತು ಸಲ್ಲು ಜೊತೆ ‘ಟೈಗರ್ 3’, ಹಾರರ್-ಕಾಮಿಡಿ ‘ಫೋನ್ ಬೂತ್’ ಮತ್ತು ಮಿಸ್ಟರಿ ಥ್ರಿಲ್ಲರ್ ‘ಮೆರ್ರಿ ಕ್ರಿಸ್‌ಮಸ್’ ನಲ್ಲೂ ಕತ್ರಿನಾ ಅಬ್ಬರ ಜೋರಾಗಿದೆ.

ಕರೀನಾ ಕಪೂರ್ ಖಾನ್. ಸದ್ಯ ನೆಟ್‌ಫ್ಲಿಕ್ಸ್ ನ ಥ್ರಿಲ್ಲರ್‌ ಸಿರೀಸ್ ಒಂದರಲ್ಲಿ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಮೀರ್ ಖಾನ್ ಜೊತೆ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕರೀನಾ. ಇವರು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ! ವರದಿಗಳ ಪ್ರಕಾರ, ಕರೀನಾ ಪ್ರತಿ ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಆಲಿಯಾ ಭಟ್. ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಆಲಿಯಾ ಸಿನಿ ಪ್ರಿಯರ ಹಾರ್ಟ್ ಫೇವರೆಟ್ ನಟಿ. ವರದಿಗಳ ಪ್ರಕಾರ, ಆಲಿಯಾ ಪ್ರತಿ ಚಿತ್ರಕ್ಕೆ 22 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ ಆಲಿಯಾ. 2012 ರಲ್ಲಿ ‘ಸ್ಟೂಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಈ ವರ್ಷ ‘ಗಂಗೂಬಾಯಿ ಕಥಿಯಾವಾಡಿ’ ಮೂಲಕ ಭರ್ಜರಿ ಸೌಂಡ್ ಮಾಡಿದ್ದಾರೆ. ಆಲಿಯಾ, ಗಾಲ್ ಗಡೋಟ್‌ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಮೂಲಕ ಹಾಲಿವುಡ್ ಗೂ ಹಾರಿದ್ದಾರೆ.

ಕಂಗನಾ ರನೌತ್. ಸಿನಿಮಾ ಮಾತ್ರವಲ್ಲ ಹಲವು ವಿವಾದಾತ್ಮಕ ವಿಷಯಗಳ ಮೂಲಕವೂ ಸುದ್ದಿಯಲ್ಲಿ ಇರುತ್ತಾರೆ. ಪ್ರಸ್ತುತ ಹದಿಮೂರು ವಿವಾದಾತ್ಮಕ ಸೆಲೆಬ್ರಿಟಿಗಳೊಂದಿಗೆ ‘ಲಾಕ್ ಅಪ್’ ರಿಯಾಲಿಟಿ ಶೋವನ್ನು ಹೋಸ್ಟ್ ಮಾಡುತ್ತಿದ್ದಾರೆ ಕಂಗನಾ ರನೌತ್, ಪ್ರತಿ ಚಿತ್ರಕ್ಕೆ 27 ಕೋಟಿ ರೂ. ಸಂಭಾವನೆ ಪಡೆಯುವ ಇವರು, ಆಕ್ಷನ್-ಎಂಟರ್ಟೈನರ್ ‘ಧಕಡ್’ ಮತ್ತು ‘ತೇಜಸ್’ ನಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಅವರು ‘ರಂಗೂನ್’ ನಲ್ಲಿ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾನ್‌ಗಿಂತ ದೊಡ್ಡ ಸಂಭಾವನೆಯನ್ನು ಪಡೆದಿದ್ದರು ಎನ್ನಲಾಗಿದೆ.

kangana deepika padukone | ಬಾಲಿವುಡ್ ನಲ್ಲಿ ತಾವೇ ಎಲ್ಲಾ ತಮ್ಮದೇ ಎಲ್ಲಾ ಎನ್ನುವಂತೆ ಟಾಪ್ ನಲ್ಲಿ ಇರುವ ಟಾಪ್ ನಟಿಯರ ಸಂಭಾವನೆ ಎಷ್ಟು ಗೊತ್ತೇ??
ಬಾಲಿವುಡ್ ನಲ್ಲಿ ತಾವೇ ಎಲ್ಲಾ ತಮ್ಮದೇ ಎಲ್ಲಾ ಎನ್ನುವಂತೆ ಟಾಪ್ ನಲ್ಲಿ ಇರುವ ಟಾಪ್ ನಟಿಯರ ಸಂಭಾವನೆ ಎಷ್ಟು ಗೊತ್ತೇ?? 4

ದೀಪಿಕಾ ಪಡುಕೋಣೆ. ಗುಳಿಕೆನ್ನೆಯ ಚೆಲುವೆ ದೀಪಿಕಾ ಪಡುಕೋಣೆ ಪ್ರತಿ ಚಿತ್ರಕ್ಕೆ 26 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ‘ಗೆಹ್ರಾಯನ್’ ಸಿನಿಮಾದಲ್ಲಿ ನಟಿಸಿದ್ದು, ಹೆಚ್ಚಿನ ಮೆಚ್ಚುಗೆಯನ್ನು ಗಳಿಸುವಲ್ಲಿ ವಿಫಲವಾದರು. 2018 ರ ಹಿಟ್ ಸಿನಿಮಾ ‘ಪದ್ಮಾವತ್’ ಸಿನಿಮಾಗೆ, ರಣವೀರ್ ಸಿಂಗ್ ಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ.

Comments are closed.