ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ ‘ಗಿಚ್ಚಿ ಗಿಲಿಗಿಲಿ’, ಬಿಡುಗಡೆಗೂ ಮುನ್ನವೇ ಪ್ರೇಕ್ಷಕರು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡವನ್ನ ಇಂಗ್ಲಿಷ್ ಆಕ್ಸೆಂಟ್ ನಲ್ಲಿ ಮಾತನಾಡುವ ಹುಡುಗಿಯೆಂದರೆ ನಿವೇದಿತಾ ಗೌಡ ಅನ್ನೋದು ಎಲ್ಲರಿಗೂ ನೆನಪಾಗುತ್ತೆ. ಬಿಗ್ ಬಾಸ್ ನಲ್ಲಿ ಜನಸಾಮಾನ್ಯ ಕೋಟಾ ದಲ್ಲಿ ಬಿಗ್ ಬಾಸ್ ಮನೆಗೆ ಹೋದ ನಿವೇದಿತಾ ಅಲ್ಲಿಂದ ಸಿಕ್ಕಾಪಟ್ಟೆ ಫೇಮಸ್ ಆದರು. ನಂತರ ಕನ್ನಡ ರಾಪರ್ ಚಂದನ್ ಶೆಟ್ಟಿ ಅವರನ್ನು ವಿವಾಹವಾದರು ನಿವೇದಿತಾ. ಇವರಿಬ್ಬರ ಲವ್ ಪ್ರಪೋಸಲ್ ಕೂಡ ತುಂಬಾನೇ ಸುದ್ದಿಯಾಗಿತ್ತು.

ಇತ್ತೀಚಿಗೆ ನಿವೇದಿತ ಅತಿ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಪಾಸಿಟಿವ್ ಹಾಗೂ ನೆಗೆಟಿವ್ ಕಮೆಂಟ್ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತ ಜೋಡಿಯನ್ನು ಕೆಲವರು ಬಾಯಿಗೆ ಬಂದಂತೆ ಬೈದರೆ ಇನ್ನು ಕೆಲವರು ಸೂಪರ್ ಎಂದು ಹೇಳುತ್ತಾರೆ. ಇದೀಗ ನಿವೇದಿತಾ ಗೌಡ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋ ದ ಪ್ರೋಮೋ ಈಗಾಗಲೇ ಪ್ರಸಾರವಾಗುತ್ತಿದ್ದು ಕೆಲವು ನೆಗೆಟಿವ್ ಕಾಮೆಂಟ್ ಗಳು ಬಂದಿವೆ.

niveditha divya vasantha | ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ 'ಗಿಚ್ಚಿ ಗಿಲಿಗಿಲಿ', ಬಿಡುಗಡೆಗೂ ಮುನ್ನವೇ ಪ್ರೇಕ್ಷಕರು ಹೇಳಿದ್ದೇನು ಗೊತ್ತೇ??
ಕಿರುತೆರೆಯಲ್ಲಿ ನಿವೇದಿತಾ ಗೌಡ, ದಿವ್ಯ ವಸಂತಾ 'ಗಿಚ್ಚಿ ಗಿಲಿಗಿಲಿ', ಬಿಡುಗಡೆಗೂ ಮುನ್ನವೇ ಪ್ರೇಕ್ಷಕರು ಹೇಳಿದ್ದೇನು ಗೊತ್ತೇ?? 2

ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಎನ್ನುವ ಹೊಸ ರಿಯಾಲಿಟಿ ಶೋ ಪ್ರಾರಂಭವಾಗುತ್ತಿದೆ. ಈ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ನ್ಯೂಸ್ ಆಂಕರ್ ದಿವ್ಯಾ ವಸಂತ ಹಾಗೂ ಇವರಿಬ್ಬರ ಜೊತೆ ರಾಜ-ರಾಣಿ ರಿಯಾಲಿಟಿ ಶೋ ಖ್ಯಾತಿಯ ಶ್ರೀಕಾಂತ್ ಮತ್ತು ಅಯ್ಯಪ್ಪ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಶೋ ದ ಪ್ರೋಮೋ ಕೂಡ ಪ್ರಸಾರವಾಗುತ್ತಿದೆ.

ಇನ್ನು ಈ ಪ್ರೋಮೋ ಬಗ್ಗೆ ಹೇಳೋದಾದ್ರೆ ಪ್ರಮೋದಲ್ಲಿ ಮೊದಲು ಫೋನ್ ರಿಂಗ್ ಆಗುತ್ತೆ. ನಾವು ಕನ್ನಡ ಕಿರುತೆರೆಯಿಂದ ಫೋನ್ ಮಾಡುತ್ತಿದ್ದೇವೆ. ನಿಮ್ಮಗೆಲ್ಲ ಒಂದು ಸಿಹಿ ಸುದ್ದಿ ಇದೆ ಎಂದು ಹೇಳುತ್ತಾರೆ. ಇದಕ್ಕೆ ದಿವ್ಯಾ ವಸಂತಾ ಇಡೀ ರಾಜ್ಯಕ್ಕೆಲ್ಲಾ ಸಿಹಿ ಸುದ್ದಿ ಹಂಚುವವರು ನಾವು, ನಮಗೆನಾ ಎಂದು ಕೇಳುತ್ತಾರೆ. ಆಗ ನಮ್ಮಮ್ಮ ಸೂಪರ್ ಸ್ಟಾರ್ ಆದಮೇಲೆ ಮನರಂಜನಾ ಲೋಕದಲ್ಲಿ ಒಂದು ದೊಡ್ಡ ಜಾಗ ಕಾಲಿ ಇದೆ ಅದನ್ನ ನೀವೆ ತುಂಬಿಸಬೇಕು ಅಯ್ಯಪ್ಪ ಎಂದು ವಾಹಿನಿಯವರು ಹೇಳುತ್ತಾರೆ, ಇದಕ್ಕೆ ಅಯ್ಯಪ್ಪ ಇದು ಯಾವುದೋ ರಾಂಗ್ ಎಂದು ಕಾಲ್ ಕಟ್ ಮಾಡುತ್ತಾರೆ.

ಇನ್ನು ಫೋನ್ ಎತ್ತಿಕೊಂಡ ನಿವೇದಿತಾ ಗೌಡ, ನಾನು ಆಕ್ಟಿಂಗ್ ಮಾಡಿದ್ರೆ ಜನ ನಗ್ತಾರೆ ಎಂದಾಗ ವಾಹಿನಿಯವರು ಅದಕ್ಕೆ ಕರೆಯುತ್ತಿರೋದು ಎನ್ನುತ್ತಾರೆ. ಆಗ ಶ್ರೀಕಾಂತ್ ನನಗೆ ಕಾಮಿಡಿ ಬರಲ್ಲ ಎನ್ನುತ್ತಾರೆ. ಆದರೆ ಇದಕ್ಕೆ ಕಾಸು ಕೊಡ್ತಾರೆ ಎನ್ನುತ್ತಿದ್ದಂತೆ ಹಾಗಾದರೆ ಸರಿ ನಾವ್ ರೆಡಿ ಎಂದು ಈ ನಾಲ್ಕು ಜನ ಒಪ್ಪಿಗೆ ಸೂಚಿಸುತ್ತಾರೆ. ಈ ಪ್ರಮೋವನ್ನು ಬಹಳ ವಿಭಿನ್ನವಾಗಿ ಮಾಡಲಾಗಿದೆ. ಅಂದಹಾಗೆ ಈ ಶೋ ನಮ್ಮಮ್ಮ ಸೂಪರ್ ಸ್ಟಾರ್ ಮುಗಿದ ಬಳಿಕ ಪ್ರಸಾರವಾಗಲಿದೆ. ಇನ್ನು ಗಿಚ್ಚಿ ಗಿಲಿಗಿಲಿಯ ಈ ಪ್ರೋಮೋ ಕೆಲವರಲ್ಲಿ ಆಸಕ್ತಿ ಮೂಡಿಸಿದ್ದರೆ ಇನ್ನು ಕೆಲವರು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ನಾವು ಈ ಶೋ ನೋಡಲ್ಲ, ಒಂದೇ ವಾರದಲ್ಲಿ ತೋಪೆದ್ದು ಹೋಗತ್ತೆ ಎಂದೆಲ್ಲ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ಮಿಶ್ರ ಪ್ರತಿಕ್ರಿಯೆ ಇರುವ ಈ ಶೋ ಸಾಧಿಸುತ್ತೋ, ಸೋಲತ್ತೋ ಕಾದುನೋಡಬೇಕು.

Comments are closed.