ಆರ್ಸಿಬಿಯಲ್ಲಿ ಇದ್ದಾಗ ಏನೇ ಆದರೂ ಕೊಹ್ಲಿ ಜೊತೆ ನಿಲ್ಲುತ್ತಿದ್ದ ಚಾಹಲ್. ಇಂದು ಕೊಹ್ಲಿ ಫಾರ್ಮ್ ಬಗ್ಗೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವುದು ಅದು ನಮ್ಮ ಭಾರತ ಕ್ರಿಕೆಟ್ ತಂಡದ ಒಂದಾನೊಂದು ಕಾಲದ ರನ್ ಮಶೀನ್ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಶತಗಳಿಸದೇ ಬರೋಬ್ಬರಿ 1000 ದಿನಗಳು ಆಗುತ್ತಾ ಬಂದಿವೆ. ವಿರಾಟ್ ಕೊಹ್ಲಿ ಬ್ಯಾಟ್ ನಿಂದ 2019ರಲ್ಲಿ ಕೊನೆಯ ಶತಕ ಬಂದಿತ್ತು. ಅಲ್ಲಿಂದಿಚೆಗೆ ವಿರಾಟ್ ಕೊಹ್ಲಿ ಬ್ಯಾಟ್ ಸದ್ದೇ ಮಾಡುತ್ತಿಲ್ಲ.
ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರರು ಮಾತ್ರವಲ್ಲದೇ ವಿಶ್ವದ ಎಲ್ಲಾ ಕ್ರಿಕೇಟಿಗರು ವಿರಾಟ್ ಬೆಂಬಲಕ್ಕೆ ನಿಂತಿದ್ದು, ವಿರಾಟ್ ಕೂಡ ಮನುಷ್ಯ, ಅವರಿಗೆ ಸಮಯ ನೀಡಿ ಎಂದು ಹೇಳಿದ್ದಾರೆ. ಈ ನಡುವೆ ಭಾರತ ತಂಡದ ಯಶಸ್ವಿ ಸ್ಪಿನ್ನರ್ ಯುಜವೇಂದ್ರ ಚಾಹಲ್ ಸಹ ವಿಭಿನ್ನವಾದ ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ. ಅವರು ಈಗಾಗಲೇ 70 ಶತಕ ಸಿಡಿಸಿದ್ದಾರೆ. ಹಲವಾರು ಪಂದ್ಯಗಳಲ್ಲಿ ಭಾರತ ತಂಡವನ್ನು ಗೆಲ್ಲಿಸಿದ್ದಾರೆ. ನಾವು ಅವರಿಗೆ ಈ ಸಂದರ್ಭದಲ್ಲಿ ಶತಕ ಗಳಿಸಿ ಎಂದು ಒತ್ತಡ ಹಾಕಬಾರದು. ವಿರಾಟ್ ಕೊಹ್ಲಿ ಅಂದಿಗೂ ಮ್ಯಾಚ್ ವಿನ್ನರ್, ಇಂದಿಗೂ ಮ್ಯಾಚ್ ವಿನ್ನರ್. ತಂಡ ಸಂಕಷ್ಟದಲ್ಲಿದ್ದಾಗ ಪುನಃ ವಿರಾಟ್ ಕೊಹ್ಲಿ ಮರಳಿ ತಮ್ಮ ಫಾರ್ಮ್ ಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ. ಈ ಏಷ್ಯಾ ಕಪ್ ವಿರಾಟ್ ಕೊಹ್ಲಿ ಗೆ ಮಾಡು ಇಲ್ಲವೇ ಮಡಿ ಟೂರ್ನಿಯಾಗಲಿದ್ದು, ಇಲ್ಲಿ ವಿಫಲರಾದರೇ, ಟಿ 20 ವಿಶ್ವಕಪ್ ನಲ್ಲಿ ಸ್ಥಾನ ಸಿಗುವುದು ಕಷ್ಟವಾಗಿದೆ. ಇನ್ನು ಕಳೆದ ವರ್ಷ ನಡೆದ ಟಿ 20 ವಿಶ್ವಕಪ್ ನಲ್ಲಿ ಸ್ಥಾನ ವಂಚಿತರಾಗಿದ್ದ ಯುಜವೇಂದ್ರ ಚಾಹಲ್ ಈ ಭಾರಿ ಖಂಡಿತ ಸ್ಥಾನ ಪಡೆಯಲಿದ್ದಾರೆ. ಉತ್ತಮ ಫಾರ್ಮ್ ನಲ್ಲಿರುವ ಯುಜವೇಂದ್ರ ಚಾಹಲ್ ವಿಕೇಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
Comments are closed.