Cheque book rules: ಚೆಕ್ ಬೌನ್ಸ್ ಆಗಬಾರದು ಎಂದರೆ, ಚೆಕ್ ಮೇಲೆ ಈ ಶಬ್ದ ಬರೆಯಿರಿ. ಬ್ಯಾಂಕ್ ನಿಯಮದ ಸಂಪೂರ್ಣ ಮಾಹಿತಿ.

Cheque book rules Explained in Kannada - From Hello Karnataka News

Cheque book rules: ನಮಸ್ಕಾರ ಸ್ನೇಹಿತರೇ ಬ್ಯಾಂಕಿಂಗ್ ವ್ಯವಸ್ಥೆಯ(banking system) ಜೊತೆಗೆ ನಾವೆಲ್ಲರೂ ಪ್ರತಿಯೊಬ್ಬರೂ ಕೂಡ ಲಿಂಕ್ ಆಗಿರುತ್ತೇವೆ. ಹೀಗಾಗಿ ಬ್ಯಾಂಕಿನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕಾಗಿರುವುದು ಕೂಡ ಅಗತ್ಯವಾಗಿರುತ್ತದೆ. ಬ್ಯಾಂಕ್ ನಲ್ಲಿ ಅಕೌಂಟ್ ಮಾಡುತ್ತಿದ್ದಂತೆ ನಿಮಗೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲವೇ ಚೆಕ್ ಬುಕ್ ಎನ್ನುವಂತಹ ವಿಚಾರಗಳ ಬಗ್ಗೆ ಕೂಡ ತಿಳಿದುಕೊಳ್ಳಬೇಕಾಗಿರುವಂತಹ ಅಗತ್ಯ ಇರುತ್ತದೆ ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವಂತಹ ಅತ್ಯಂತ ಪ್ರಮುಖ ಪ್ರಕ್ರಿಯೆಗಳು ಆಗಿರುತ್ತವೆ.

Cheque book rules Explained in Kannada – From Hello Karnataka News

ಅದರಲ್ಲೂ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಚೆಕ್ ಬುಕ್(Cheque book rules) ಬಗ್ಗೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೊಡ್ಡಮಟ್ಟದ ಹಣದ ಟ್ರಾನ್ಸಾಕ್ಷನ್ ಗಾಗಿ ಇದು ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ವಸ್ತುವಾಗಿದೆ. ಪ್ರತಿಯೊಂದು ಹಣದ ಕೊಡುಕೊಳ್ಳುವಿಕೆಯನ್ನು ನೇರವಾಗಿ ಹಣದ ಮೂಲಕವೇ ಮಾಡಲು ಸಾಧ್ಯವಿರುವುದಿಲ್ಲ. ಇದೇ ಕಾರಣಕ್ಕಾಗಿಯೇ ಚೆಕ್ ಬುಕ್ ನಂತಹ ಮೂಲಗಳನ್ನು ಕೂಡ ಉಪಯೋಗಿಸಿಕೊಳ್ಳಲಾಗುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ನೀವು ಹೆಚ್ಚಾಗಿ ಬ್ಯಾಂಕಿನ ಟ್ರಾನ್ಸಾಕ್ಷನ್ ವ್ಯವಸ್ಥೆಗಳಲ್ಲಿ ಗಮನಿಸಬಹುದು RTGS ಹಾಗೂ NEFT ತಂತ್ರಜ್ಞಾನಗಳನ್ನು ಹೆಚ್ಚಿನ ಹಣದ ಟ್ರಾನ್ಸಾಕ್ಷನ್ ಗಾಗಿ ಬಳಸಲಾಗುತ್ತದೆ ಆದರೂ ಕೂಡ ಇವತ್ತಿಗೂ ಚೆಕ್ ಬುಕ್ ಅನ್ನು ಬಳಸಲಾಗುತ್ತದೆ. ಹಾಗಿದ್ರೆ ಬನ್ನಿ ಚೆಕ್ ಬುಕ್ ಬಳಸುವಾಗ ಬಾರಿಸಬೇಕಾಗಿರುವ ಕೆಲವೊಂದು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.

ಚೆಕ್ ಬುಕ್ ನಲ್ಲಿ ಈ ಒಂದು ಶಬ್ದವನ್ನು ಬರೆಯಲೇಬೇಕು?? (Cheque book rules)
ಚೆಕ್ ಬುಕ್ ಬರೆಯುವಾಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವಿವರವನ್ನು ಕೇಳುತ್ತಾರೆ ಅಲ್ಲಿ ಕೇಳಲಾಗಿರುವಂತಹ ವಿವರಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಜಾಗದಲ್ಲಿ ಬರೆಯಬೇಕು ಇಲ್ಲವಾದಲ್ಲಿ ಒಂದೇ ಒಂದು ಚಿಕ್ಕ ತಪ್ಪಿನಿಂದಲೂ ಕೂಡ ಚೆಕ್ ಬುಕ್ ಬೌನ್ಸ್(cheque book bounce ) ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಚೆಕ್ ಬುಕ್ ಬೌನ್ಸ್ ಅನ್ನೋದಕ್ಕಿಂತ ಹೆಚ್ಚಾಗಿ ಇದು ನಿಮಗೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸಮಸ್ಯೆಯನ್ನು ಕೊಡುತ್ತಾರೆ ಅದೇನೆಂದರೆ, ಚೆಕ್ ಬುಕ್ ನಲ್ಲಿ ನೀವು ಹಣದ ಮೊತ್ತವನ್ನು ಅಕ್ಷರದಲ್ಲಿ ಬರೆಯುವಾಗ ಕೊನೆಗೆ ಓನ್ಲಿ(Only ) ಎನ್ನುವುದಾಗಿ ಬರೆಯಬೇಕು. ಇಲ್ಲವಾದಲ್ಲಿ ನೀವು ಬರೆದಿರುವಂತಹ ಮೊತ್ತಕ್ಕಿಂತ ಹೆಚ್ಚಿನದಾಗಿ ಬೇರೆಯವರು ಬರೆದುಕೊಳ್ಳುತ್ತಾರೆ ಇದರಿಂದಾಗಿ ನೀವು ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಅಥವಾ ಚೆಕ್ ಬೌನ್ಸ್ ಕೂಡ ಆಗಬಹುದು. ಹೀಗಾಗಿ ಮೊತ್ತವನ್ನು ಚೆಕ್ ಬುಕ್ ನಲ್ಲಿ ಅಕ್ಷರದಲ್ಲಿ ಬರೆಯುವಾಗ ಕೊನೆಯಲ್ಲಿ ಓನ್ಲಿ ಎಂಬುದಾಗಿ ಬರೆಯಬೇಕು ಹಾಗೂ ನಂಬರ್ ನಲ್ಲಿ ಬರೆಯುವಾಗ /- ಚಿಹ್ನೆಯನ್ನು ಬಳಸಬೇಕು.

Comments are closed.