ಸಹನಟಿ ಆತ್ಮಹತ್ಯೆಯ ಕುರಿತು ಮಾತನಾಡಿದ ದೊರೆಸಾನಿ ನಟm ನಟಿ ಹೇಳಿದ್ದೇನು ಗೊತ್ತೆ?? ದೊರೆಸಾನಿಯಲ್ಲಿ ಯಾವ ಪಾತ್ರ ಮಾಡಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆಯ ನಟಿ ಚೇತನ ರಾಜ್ ರವರ ಮರಣ ಎನ್ನುವುದು ಕಿರುತೆರೆ ಲೋಕಕ್ಕೆ ದೊಡ್ಡಮಟ್ಟದ ಶಾಕ್ ಅನ್ನು ನೀಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಚೇತನ ರಾಜ್ ಕೇವಲ 21ನೇ ವಯಸ್ಸಿಗೆ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ ಇದು ನಿಜಕ್ಕೂ ಕೂಡ ಭರಿಸಲಾರದ ದುಃಖವನ್ನು ತಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಚೇತನ ರವರು ದೊರೆಸ್ವಾಮಿ ಧಾರವಾಹಿಯಲ್ಲಿ ಕೂಡ ಕಾಣಿಸಿಕೊಂಡಿರುವ ಅತ್ಯಂತ ಯುವ ಉದಯೋನ್ಮುಖ ನಟಿಯಾಗಿದ್ದಾರೆ. ಹೌದು ಗೆಳೆಯರೇ ಇನ್ನು ಚೇತನ ರವರು ಮರಣ ಹೊಂದಿದ್ದು ಹೇಗೆ ಎಂಬುದು ಕೂಡ ಈಗಾಗಲೇ ನಿಮಗೆ ತಿಳಿದುಬಂದಿದೆ.

ಹೌದು ಗೆಳೆಯರೇ ಚೇತನ ರವರು ನಟನೆಯ ವೃತ್ತಿಯ ಕಾರಣದಿಂದಾಗಿ ತಾನು ದಪ್ಪ ಇದ್ದೇನೆ ಎಂಬ ಮನೋಭಾವನೆ ಅವರಲ್ಲಿ ಮೂಡಿ ಅದಕ್ಕೆ ಸಂಬಂಧಪಟ್ಟಂತಹ ಶಸ್ತ್ರಚಿಕಿತ್ಸೆಯ ಮೂಲಕ ತೂಕವನ್ನು ಕಳೆದುಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ. ಇದರ ಕಾರಣದಿಂದಾಗಿಯೇ ಚೇತನ ಈಗ ಮರಣವನ್ನು ಹೊಂದಿದ್ದಾರೆ ಎಂಬುದು ಸಾಬೀತಾಗಿದೆ. ಇನ್ನು ಈ ಕುರಿತಂತೆ ಎಲ್ಲರೂ ಕೂಡ ದುಃಖ ವನ್ನು ಹೊಂದಿದ್ದು ಚೇತನ ರವರ ಮರಣಕ್ಕೆ ಕಂಬನಿಯನ್ನು ಮಿಡಿದಿದ್ದಾರೆ. ಇನ್ನು ಚೇತನ ರವರ ಮರಣದ ಹಿನ್ನೆಲೆಯಲ್ಲಿ ದೊರೆಸಾನಿ ಧಾರಾವಾಹಿಯ ನಟ ಹಾಗೂ ನಟಿಯರು ಕೂಡ ಸಂದರ್ಶನದಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಇದೆ ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದಕ್ಕೆ ಇವರು ಜೀವ ತುಂಬಿದ್ದರು. ಹಾಗಿದ್ದರೆ ದೊರೆಸಾನಿ ಧಾರವಾಹಿಯ ನಾಯಕ ನಟ ಹಾಗೂ ನಟಿ ಇಬ್ಬರು ಏನನ್ನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಈ ಕುರಿತಂತೆ ಮಾತನಾಡಿದ ಇಬ್ಬರೂ ಕೂಡ ಅವರು ಕಿರುತೆರೆಯಲ್ಲಿ ಹಾಗೂ ಸಿನಿಮಾರಂಗದಲ್ಲಿ ಸಾಕಷ್ಟು ಆಫರ್ ಬರುತ್ತಿದ್ದ ಹಿನ್ನೆಲೆಯಲ್ಲಿ ಅವರು ತೆಳ್ಳಗಾಗಲು ಈ ಶಾರ್ಟ್ ಕ’ಟ್ ಅನ್ನು ಆಯ್ಕೆಮಾಡಿಕೊಂಡಿದ್ದರು ಆದರೆ ಅದು ಅವರಿಗೆ ಈಗ ಕಂಟಕವಾಗಿ ಪರಿಣಮಿಸಿದೆ ಎಂಬುದಾಗಿ ದುಃಖಿಸಿದ್ದಾರೆ. ಯಾರೇ ಆಗಲಿ ಅತ್ಯಂತ ವೇಗವಾಗಿ ಯಶಸ್ಸನ್ನು ಪಡೆಯುವ ಹಿನ್ನೆಲೆಯಲ್ಲಿ ಹೀಗೆ ಮಾಡಿಕೊಳ್ಳಲು ಹೋಗಬಾರದು ಎನ್ನುವುದು ಕೂಡ ಹೇಳಿದ್ದಾರೆ. ಹಲವಾರು ಸಿನಿಮಾ ಹಾಗೂ ಧಾರವಾಹಿಗಳು ಆಫರ್ ಬರುತ್ತಿದ್ದ ಕಾರಣ ಚೇತನ ಅವರು ಹೀಗೆ ಮಾಡಿಕೊಳ್ಳಲು ಹೋದರು ಎಂಬುದಾಗಿ ತಿಳಿದುಬಂದಿದೆ.

ಇಂದಿನ ಕಾಲದಲ್ಲಿ ಪ್ರತಿಯೊಬ್ಬ ಯುವ ನಟ-ನಟಿಯರು ಫಿಟ್ನೆಸ್ ಕುರಿತಂತೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಅಡ್ಡದಾರಿ ಹಿಡಿದುಕೊಂಡು ಬೇಗ ಯಶಸ್ವಿಯಾಗಲು ನೋಡುತ್ತಾರೆ. ಅತ್ಯಂತ ವೇಗವಾಗಿ ಸಿಗುವ ಯಶಸ್ಸು ನಿಜಕ್ಕೂ ಕೂಡ ಸಹಜವಲ್ಲ ತಾಳ್ಮೆ ಇರಬೇಕು ಚೆನ್ನಾಗಿ ಊಟ ಮಾಡಿಕೊಂಡು ಆರೋಗ್ಯವಂತರಾಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ದೃಢತೆಯನ್ನು ಸಮತೋಲನವಾಗಿ ಇಟ್ಟುಕೊಳ್ಳಬೇಕು. ಯಾರು ಏನೋ ನಮ್ಮ ದೇಹದ ಕುರಿತಂತೆ ಹೇಳುತ್ತಾರೆ ಎಂಬುದಾಗಿ ಈ ತರಹ ಸತ್ರ ಚಿಕಿತ್ಸೆಯನ್ನು ಮಾಡಿಕೊಳ್ಳಲು ಹೋಗಬಾರದು ಎಂಬುದಾಗಿ ಹೇಳಿದ್ದಾರೆ. ಇದು ಮುಂದೆ ನಟ ಹಾಗೂ ನಟಿಯಾಗಿ ಮಿಂಚಬೇಕು ಎಂದು ಆಸೆಯನ್ನು ಹೊಂದಿರುವಂತಹ ಹಲವಾರು ಯುವ ಪ್ರತಿಭೆಗಳಿಗೆ ಪಾಠವಾಗಿ ಪರಿಣಮಿಸಲಿದೆ ಎನ್ನುವುದಾಗಿ ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ

Comments are closed.