ಯಶ್ ರವರ ಕೆಜಿಎಫ್ ನಿಂದ ಪುಷ್ಪ 2 ಗೆ ಕುಲಾಯಿಸಿದ ಅದೃಷ್ಟ. ಬಿಡುಗಡೆಗೂ ಮುನ್ನವೇ ಮಾಡಬಹುದಾದ ಬಿಸಿನೆಸ್ ಮೊತ್ತ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ಈಗಾಗಲೇ ಗೊತ್ತಿರುವ ಹಾಗೆ ದಕ್ಷಿಣ ಭಾರತದ ಚಿತ್ರಗಳು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಸಿನಿಮಾಗಳನ್ನೇ ಹಿಂದಕ್ಕಿವೆ. ಹೌದು ಗೆಳೆಯರೇ ಈ ಸಾಲಿನಲ್ಲಿ ಪುಷ್ಪ ಆರ್ ಆರ್ ಆರ್ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಮುಂಚೂಣಿಯಲ್ಲಿ ಕಾಣಸಿಗುತ್ತವೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2 ಚಿತ್ರ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಮೇಲೆ ಪುಷ್ಪ 2 ಚಿತ್ರತಂಡ ಈಗ ಸಾಕಷ್ಟು ಈ ಕುರಿತಂತೆ ತಲೆ ಕೆಡಿಸಿಕೊಂಡಿದೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ ಕೆಜಿಎಫ್ ಈಗಾಗಲೇ ಸಾವಿರ ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಹಿನ್ನೆಲೆಯಲ್ಲಿ ಮುಂದೆ ಬಿಡುಗಡೆಯಾಗಲಿರುವ ಪುಷ್ಪ 2 ಕೂಡ ಈ ದಾಖಲೆಯನ್ನು ಮು’ರಿಯುವ ಒತ್ತಡದಲ್ಲಿ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಒಂದು ಸಮಯದಲ್ಲಿ 10 ಕೆಜಿಎಫ್ ಸೇರಿದರೆ ಒಂದು ಪುಷ್ಪ ಎಂದು ಹೇಳಲಾಗುತ್ತಿತ್ತು ಆದರೆ ಕೆಜಿಎಫ್ ಚಾಪ್ಟರ್ 2ರ ಮುಂದೆ ಪುಷ್ಪಾ ಚಿತ್ರದ ಪ್ರಭಾವ ಮಂಕಾಗಿ ಕುಳಿತಿತ್ತು. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಪುಷ್ಪ 2 ಗ್ರಾಂಡ್ ಆಗಿ ಮೂಡಿ ಬರಬೇಕು ಎನ್ನುವುದಾಗಿ ಈಗಾಗಲೇ ಚಿತ್ರತಂಡ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ. ಪುಷ್ಪ ಚಿತ್ರ 356 ಕೋಟಿಗಳನ್ನು ಗಳಿಸಿತ್ತು. ಹಿಂದಿಯಲ್ಲಿ ನೂರು ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿರುವುದು ಅಲ್ಲು ಅರ್ಜುನ್ ರವರ ಜನಪ್ರಿಯತೆ ಹಿಂದಿ ರೀಜನ್ ನಲ್ಲಿ ಹೇಗಿದೆ ಎಂಬುದನ್ನು ಸಾಬೀತು ಪಡಿಸಿತು.

kgf 2 pushpa | ಯಶ್ ರವರ ಕೆಜಿಎಫ್ ನಿಂದ ಪುಷ್ಪ 2 ಗೆ ಕುಲಾಯಿಸಿದ ಅದೃಷ್ಟ. ಬಿಡುಗಡೆಗೂ ಮುನ್ನವೇ ಮಾಡಬಹುದಾದ ಬಿಸಿನೆಸ್ ಮೊತ್ತ ಎಷ್ಟು ಕೋಟಿ ಗೊತ್ತೇ??
ಯಶ್ ರವರ ಕೆಜಿಎಫ್ ನಿಂದ ಪುಷ್ಪ 2 ಗೆ ಕುಲಾಯಿಸಿದ ಅದೃಷ್ಟ. ಬಿಡುಗಡೆಗೂ ಮುನ್ನವೇ ಮಾಡಬಹುದಾದ ಬಿಸಿನೆಸ್ ಮೊತ್ತ ಎಷ್ಟು ಕೋಟಿ ಗೊತ್ತೇ?? 2

ಆದರೆ ಈಗ ಅಲ್ಲು ಅರ್ಜುನ ನಟನೆಯ ಪುಷ್ಪ 2 ಚಿತ್ರದ ಚಿತ್ರೀಕರಣ ಆರಂಭವಾಗುವ ಮುನ್ನವೇ ಪ್ರಿ ರಿಲೀಸ್ ಬಿಸಿನೆಸ್ ನಿಜಕ್ಕೂ ಕೂಡ ದಾಖಲೆ ಮಟ್ಟದಲ್ಲಿ ಕಂಡುಬರುತ್ತಿವೆ. ಹೌದು ಗೆಳೆಯರೇ ಪುಷ್ಪ 2 ಚಿತ್ರ ಚಿತ್ರೀಕರಣ ಆರಂಭಿಸುವ ಮುನ್ನವೇ 700 ಕೋಟಿ ರೂಪಾಯಿಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಡಿಜಿಟಲ್ ರೈಟ್ಸ್ ಗಾಗಿ 300 ಕೋಟಿ ರೂಪಾಯಿ ಬೇಡಿಕೆ ನೀಡಲಾಗಿದೆ. ದಕ್ಷಿಣ ಭಾರತ ಭಾಷೆಗಳ ಎಲ್ಲಾ ಭಾಷೆಯ ಥಿಯೇಟರ್ ರೈಟ್ಸ್ 200 ಕೋಟಿ ರೂಪಾಯಿಗೂ ಅಧಿಕ ಹೋಗುವ ಸಾಧ್ಯತೆ ಇದೆ. ಇನ್ನು ಹಿಂದಿ ಬಿಡುಗಡೆಗಾಗಿ ಕೂಡ 200 ಕೋಟಿಗೂ ಅಧಿಕ ರೂಪಾಯಿಗಳು ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿದೆ. ಒಟ್ಟಾರೆಯಾಗಿ ಬಿಡುಗಡೆಗೂ ಮುನ್ನವೇ 700 ಕೋಟಿ ರೂಪಾಯಿ ಬೇಡಿಕೆ ಪುಷ್ಪ 2 ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ಪುಷ್ಪ 2 ಚಿತ್ರದ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರ್ದೇಶಕ ಸುಕುಮಾರ್ ಮಾಡುತ್ತಿದ್ದಾರೆ ಎಂಬುದಾಗಿ ಕೂಡ ಕೇಳಿಬಂದಿದೆ.

Comments are closed.