ಚಿತ್ರರಂಗದ ಮತ್ತೊಂದು ತೆರೆ ಹಿಂದಿನ ಮುಖವನ್ನು ತೆರೆದಿಟ್ಟ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಚೇತನ ರಾಜ್ ರವರ ಕುರಿತಂತೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ಕೆಲವೊಮ್ಮೆ ಖ್ಯಾತಿಗಳಿಗಿಂತ ಕುಖ್ಯಾತಿಗೆ ಹೆಸರುಗಳಿಸಿರುತ್ತದೆ. ವಿವಾದಗಳಿಗೂ ಸ್ಯಾಂಡಲ್ ವುಡ್ ಗೂ ಅವಿನಾಭಾವ ನಂಟು.ಈಗ ಎರಡು ದಿನಗಳ ಹಿಂದೆ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ಚೇತನಾ ರಾಜ್ ತಮ್ಮದಲ್ಲದ ತಪ್ಪಿಗೆ ಇಹಲೋಕ ತ್ಯಜಿಸುವ ಪ್ರಸಂಗ ನಡೆಯಿತು. ತಮ್ಮ ದೇಹದಲ್ಲಿನ ಅತಿಯಾದ ಕೊಬ್ಬನ್ನು ತೆಗೆಸಲು ಖಾಸಗಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದರು.

ಆದರೇ ಚಿಕಿತ್ಸೆ ಫಲಕಾರಿಯಾಗದೆ ಅಗಲಿದರು. ಈ ಬಗ್ಗೆ ಸ್ಯಾಂಡಲ್ ವುಡ್ ನ ಹಿರಿಯ ನಟನಟಿಯರು ಸಂತಾಪ ವ್ಯಕ್ತಪಡಿಸಿದ್ದರು. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಂಡಲ್ ವುಡ್ ನ ಮನಮೋಹಕ ತಾರೆ ರಮ್ಯಾ ಟ್ವೀಟ್ ಮೂಲಕ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಾಡಿ ಶೇಮಿಂಗ್ ಇದೆ. ಇಲ್ಲಿ ನಟರು ದಢೂತಿ ದೇಹ, ಬೊಜ್ಜನ್ನು ಇಟ್ಟುಕೊಂಡು 60 ವರ್ಷದವರೆಗೆ ಬೇಕಾದರೂ ಹೀರೋ ಆಗಬಹುದು.

ramya chetana raj | ಚಿತ್ರರಂಗದ ಮತ್ತೊಂದು ತೆರೆ ಹಿಂದಿನ ಮುಖವನ್ನು ತೆರೆದಿಟ್ಟ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಚೇತನ ರಾಜ್ ರವರ ಕುರಿತಂತೆ ಹೇಳಿದ್ದೇನು ಗೊತ್ತೇ??
ಚಿತ್ರರಂಗದ ಮತ್ತೊಂದು ತೆರೆ ಹಿಂದಿನ ಮುಖವನ್ನು ತೆರೆದಿಟ್ಟ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಚೇತನ ರಾಜ್ ರವರ ಕುರಿತಂತೆ ಹೇಳಿದ್ದೇನು ಗೊತ್ತೇ?? 2

ಆದರೇ ನಟಿಯರು ಕೊಂಚ ದಪ್ಪವಾದ ರೇ ಸಾಕು, ಆಂಟಿ,ಡುಮ್ಮಿ, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜರಿಯುವುದಷ್ಟೇ ಅಲ್ಲದೇ, ಚಲನಚಿತ್ರರಂಗದಲ್ಲಿ ಅವಕಾಶ ಸಹ ಕಡಿಮೆ ಆಗುತ್ತದೆ. ಹೀಗಾಗಿ ನಟಿಯರು ದೇಹದ ತೂಕ ಮತ್ತು ಬೊಜ್ಜಿಗೆ ಸಂಭಂದಿಸಿದಂತೆ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಈ ರೀತಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಾಗಾಗಿ ಚಲನಚಿತ್ರರಂಗದಲ್ಲಿ ನಟನೆಗೆ ಬೆಲೆ ನೀಡಬೇಕು, ಅಂಗಾಂಗಕ್ಕೆ ಅಲ್ಲ ಎಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.