ಪ್ರೀತಿ ಮಾಡಿದ ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಹುಡುಗ. ಕೊನೆಗೆ ನಡೆದು ಹೋಯಿತು ಫುಲ್ ಹೈಡ್ರಾಮಾ, ಕೊನೆಗೆ ಈಗ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರೀತಿ ಮಾಡಬಾರದು ಪ್ರೀತಿ ಮಾಡಿದರೆ ಜಗಕೆ ಹೆ’ದರಬಾರದು ಎನ್ನುವುದಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಪ್ರೇಮಿಗಳಿಗೆ ತಮ್ಮ ಸಿನಿಮಾದ ಮೂಲಕ ಸಂದೇಶವನ್ನು ನೀಡಿರುವುದನ್ನು ನೀವು ಕೇಳಿದ್ದೀರಿ. ಇದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರೇಮ ಪ್ರಕರಣಗಳ ಕುರಿತಂತೆ ಹೆಚ್ಚಾಗಿ ಕೇಳುತ್ತಿದ್ದೇವೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಇಬ್ಬರು ಅನ್ಯಧರ್ಮೀಯ ಜೋಡಿಗಳ ಮದುವೆಯ ಕುರಿತಂತೆ. ಹೌದು ಗೆಳೆಯರೇ ಈ ವಿಚಾರ ನಡೆದಿರುವುದು ನಮ್ಮ ರಾಜ್ಯದಲ್ಲಿ.

ಕನಕರೆಡ್ಡಿ ಹಾಗೂ ದಿಲ್ಶಾದ್ ಬೇಗಂ ಇಬ್ಬರು ಜೋಡಿಗಳು ಒಂದು ವರ್ಷದಿಂದ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಇಬ್ಬರೂ ಕೂಡ ಮನೆಯಿಂದ ಓಡಿಹೋಗಿ ಮದುವೆಯಾಗಿ ಕನಕಗಿರಿ ಪೋಲಿಸ್ ಸ್ಟೇಷನ್ ಗೆ ಬಂದು ರಕ್ಷಣೆಯನ್ನು ಕೋರಿದ್ದಾರೆ. ಇಬ್ಬರೂ ಜೋಡಿಗಳು ಕನಕಗಿರಿ ಪೊಲೀಸ್ ಸ್ಟೇಷನ್ ನಲ್ಲಿ ಇದ್ದಾರೆ ಎನ್ನುವ ವಿಚಾರವನ್ನು ತಿಳಿದು ಹುಡುಗ-ಹುಡುಗಿಯ ಮನೆಯವರು ಕನಕಗಿರಿ ಪೊಲೀಸ್ ಸ್ಟೇಷನ್ ನಲ್ಲಿ ದೊಡ್ಡ ಹಂಗಾಮ ವನ್ನೇ ಸೃಷ್ಟಿಸಿದ್ದಾರೆ. ಅದರಲ್ಲೂ ಹುಡುಗಿಯರ ಮನೆಯವರು ಆಕೆಯ ಬಳಿಗೆ ಬಂದು ಅವಳ ಮನವೊಲಿಸುವಂತೆ ಎಲ್ಲಾ ಪ್ರಯತ್ನಗಳನ್ನು ಶತಾಯಗತಾಯ ಎನ್ನುವಂತೆ ಮಾಡಿದ್ದಾರೆ ಆದರೆ ಹುಡುಗಿ ಮಾತ್ರ ಅವರೊಂದಿಗೆ ಮನೆಗೆ ತೆರಳಲು ಒಪ್ಪಿಕೊಳ್ಳುತ್ತಿಲ್ಲ ಮದುವೆಯಾದವನ ಜೊತೆಗೆ ಇರಲು ಸಿದ್ದಳಾಗಿದ್ದಾಳೆ. ನಂತರ ಪೊಲೀಸ್ ಠಾಣೆ ಯವರು ನವವಿವಾಹಿತ ರನ್ನು ಹಾಗೂ ಹುಡುಗಿಯ ಮನೆಯವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಮೂಲಕ ಅಲ್ಲಿ ಕೂಡ ಹುಡುಗಿಯ ಮನೆಯವರಿಗೆ ಹುಡುಗಿಯನ್ನು ಒಪ್ಪಿಸುವ ಅವಕಾಶವನ್ನು ನೀಡುತ್ತಾರೆ.

jodi maduve | ಪ್ರೀತಿ ಮಾಡಿದ ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಹುಡುಗ. ಕೊನೆಗೆ ನಡೆದು ಹೋಯಿತು ಫುಲ್ ಹೈಡ್ರಾಮಾ, ಕೊನೆಗೆ ಈಗ ಏನಾಗಿದೆ ಗೊತ್ತೇ??
ಪ್ರೀತಿ ಮಾಡಿದ ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಹುಡುಗ. ಕೊನೆಗೆ ನಡೆದು ಹೋಯಿತು ಫುಲ್ ಹೈಡ್ರಾಮಾ, ಕೊನೆಗೆ ಈಗ ಏನಾಗಿದೆ ಗೊತ್ತೇ?? 2

ಈ ಸಂದರ್ಭದಲ್ಲಿ ಹುಡುಗನ ಕಡೆಯವರು ಸಾಂತ್ವನ ಕೇಂದ್ರದ ಹೊರಗಡೆ ಊಟ ಮಾಡಿ ಕುಳಿತುಕೊಳ್ಳುವ ಮೂಲಕ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ನಂತರ ತಾವರಗೇರಿ ಪೊಲೀಸ್ ಸ್ಟೇಷನ್ ಗೆ ಕೂಡ ಕರೆದುಕೊಂಡು ಹೋಗಿ ಹುಡುಗಿ ಮನೆಯವರಿಗೆ ಆಕೆಯನ್ನು ಒಪ್ಪಿಸಲು ಕೊನೆಯ ಅವಕಾಶವನ್ನು ನೀಡುವ ಸಲುವಾಗಿ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಹುಡುಗನ ಮನೆಯವರು ಯಾಕೆ ಕೇವಲ ಹುಡುಗಿಯ ಮನೆಯವರಿಗೆ ಅವಕಾಶ ನೀಡುತ್ತಿದ್ದೀರಿ ಎಂಬುದಾಗಿ ವ್ಯಾನನ್ನು ಅಡ್ಡ ಕಟ್ಟುತ್ತಾರೆ. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಈ ವಿಚಾರವನ್ನು ರಾಜಿ ಪಂಚಾಯಿತಿ ಮಾಡಲಾಗುತ್ತದೆ. ಆದರೆ ಹುಡುಗಿ ತಾನು ಮದುವೆ ಆದವನ ಜೊತೆಗೆ ಇರುತ್ತೇನೆ ಎಂಬುದಾಗಿ ಪಟ್ಟು ಹಿಡಿಯುತ್ತಾಳೆ. ಕೊನೆಗೂ ಆ ಹುಡುಗಿಯ ಮಾತಿಗೆ ಪೋಷಕರು ಮಣಿಯಲೇಬೇಕಾಯಿತು. ಕೊನೆಗೂ ಹಲವಾರು ದಿನಗಳಿಂದ ಕಾಡುತ್ತಿದ್ದ ಈ ಪ್ರಕರಣ ಯಾವುದೇ ಚಿಂತೆಯಿಲ್ಲದೆ ಸಂಪೂರ್ಣವಾಗಿ ಯಶಸ್ಸನ್ನು ಕಂಡಿದೆ ಎಂದು ಹೇಳಬಹುದಾಗಿದೆ.

Comments are closed.