Cricket News: ದಿಡೀರ್ ಎಂದು ನಾಯಕನಾಗಿ ಮೆರೆಯುತ್ತಿದ್ದ ಹಾರ್ಧಿಕ್ ಹಾಗೂ ಚಾಹಲ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ಮೈದಾನದ ಹೊರಗಡೆ ಏನಾಗಿದೆ ಗೊತ್ತೆ?
Cricket News: ಟೀಮ್ ಇಂಡಿಯಾ ಆಸ್ಟ್ರೇಲಿಯಾ (India vs Australia) ವಿರುದ್ಧದ ಟೆಸ್ಟ್ ಸರಣಿಯ ಪಂದ್ಯಗಳಲ್ಲಿ ನಿರತವಾಗಿದೆ. ಇನ್ನೂ ಈ ಸರಣಿ ಮುಗಿದ ಬಳಿಕ ಭಾರತವು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಪಂದ್ಯಗಳಲ್ಲಿ ಸೆಣೆಸಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದೆ. ಇನ್ನು ಈಗಾಗಲೇ ಎರಡು ಟೆಸ್ಟ್ ಸರಣಿ ಪಂದ್ಯಗಳು ಮುಗಿದಿದ್ದು, ಇದೇ ಮಾರ್ಚ್ ಒಂದರಿಂದ ಮೂರನೇ ಸರಣಿಯ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಇನ್ನು ಮಾರ್ಚ್ 9 ರಿಂದ ಅಂತಿಮ ಮತ್ತು ಕೊನೆಯ ಟೆಸ್ಟ್ ಮ್ಯಾಚ್ ಆರಂಭಗೊಳ್ಳಲಿದೆ. ಆನಂತರ ಟೀಮ್ ಇಂಡಿಯ ಮತ್ತು ಆಸ್ಟ್ರೇಲಿಯಾ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುವುದರಿಂದಾಗಿ ಕೆಲವು ಆಟಗಾರರಿಗೆ ಬಿಸಿಸಿಐ (BCCI) ಶಾಕಿಂಗ್ ಆದೇಶವೊಂದನ್ನು ಹೊರಡಿಸಿದೆ.
ಟೆಸ್ಟ್ ಸರಣಿಯಲ್ಲಿ ಇಲ್ಲದೆ ಏಕದಿನ ಸರಣಿಯಲ್ಲಿ ಆಡುತ್ತಿರುವ ಆಟಗಾರರು ತಮ್ಮ ಫಿಟ್ನೆಸ್ ರಿಪೋರ್ಟ್ ತರುವಂತೆ ಇದೀಗ ಭಾರತೀಯ ನಿಯಂತ್ರಣ ಮಂಡಳಿ ಸಂಬಂಧಿಸಿದ ಆಟಗಾರರಿಗೆ ಆದೇಶಿಸಿದೆ. ಉಪ ನಾಯಕ ಹಾರ್ದಿಕ್ ಪಾಂಡ್ಯ (Hardik Pandya), ಯುಜ್ವೇಂದ್ರ ಚಹಲ್ (Yuzvendra Chahal), ಉಮ್ರಾನ್ ಮಲಿಕ್ (Umran Malik), ವಾಷಿಂಗ್ಟನ್ ಸುಂದರ್ (Washington Sundar) ಸೇರಿದಂತೆ ಇನ್ನಿತರ ಆಟಗಾರರಿಗೆ ಈ ಆದೇಶ ಅನ್ವಯವಾಗುತ್ತದೆ. ಹೀಗಾಗಿ ಈ ಆಟಗಾರರು ಸೇರಿದಂತೆ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳದ ಇನ್ನೂ ಹಲವಾರು ಆಟಗಾರರು ಏಕದಿನ ಸರಣಿಯಲ್ಲಿ ಆಡಬೇಕೆಂದರೆ ತಮ್ಮ ಫಿಟ್ನೆಸ್ ರಿಪೋರ್ಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಹೀಗಾಗಿ ಸಂಬಂಧಿಸಿದ ಆಟಗಾರರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ (NCA) ಹೋಗಿ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಲ್ಗೊಳ್ಳಬೇಕಾಗಿದೆ. ಇದನ್ನು ಓದಿ..Cricket News: ವಿವಾದಾತ್ಮಕ ಔಟ್ ನಲ್ಲಿ ವಿರಾಟ್ ಕೊಹ್ಲಿ ಗೆ ನಿಜಕ್ಕೂ ಮೋಸವಾಯ್ತಾ? ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತೇ? ಗೊತ್ತಿಲ್ಲದೇ ಮಾತನಾಡಬೇಡಿ.
ಚಹಲ್ ಹಾಗೂ ಮಲಿಕ್ ಈಗಾಗಲೇ ಎನ್ ಸಿ ಎ ಗೆ ತಲುಪಿ ಫಿಟ್ನೆಸ್ ಟೆಸ್ಟ್ ಗಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಇನ್ನಷ್ಟೇ ಅಲ್ಲಿಗೆ ಬಂದು ಸೇರಲಿದ್ದಾರೆ ಎಂದು ತಿಳಿದು ಬಂದಿದೆ. 3 ಏಕದಿನ ಪಂದ್ಯಗಳ ಪೈಕಿ ಮೊದಲ ಪಂದ್ಯವು ಮಾರ್ಚ್ 17ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 19ರಂದು ವಿಶಾಖಪಟ್ಟಣದಲ್ಲಿ ಎರಡನೇ ಪಂದ್ಯ ಜರುಗಲಿದೆ. ಇನ್ನು ಮಾರ್ಚ್ 22ರಂದು ಚೆನ್ನೈನಲ್ಲಿ ಮೂರನೇ ಪಂದ್ಯ ನಡೆಯಲಿದೆ. ಇನ್ನು ಏಕದಿನ ಸರಣಿಯ ಮೊದಲ ಪದ್ಯದಿಂದ ರೋಹಿತ್ ಶರ್ಮಾ ತಂಡದಿಂದ ಹೊರಗುಳಿಯಲ್ಲಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು ಅವರ ಸ್ಥಾನದಲ್ಲಿ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನು ಓದಿ..Cricket News: ಕೊನೆಗೂ ಗಟ್ಟಿ ನಿರ್ಧಾರ ಮಾಡಿದ ಬಿಸಿಸಿಐ: ರಾಹುಲ್ ಗೆ ಶಾಕ್ ಮೇಲೆ ಶಾಕ್. ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ ರಾಹುಲ್ ಪರಿಸ್ಥಿತಿ ಏನಾಗಿದೆ ಗೊತ್ತೇ?
Comments are closed.