Kannada News: ಮೆಗಾ ಸ್ಟಾರ್ ಚಿರು ಫ್ಯಾಮಿಲಿ ನಟ ವರುಣ್ ಮದುವೆಯಾಗುತ್ತಿರುವ ಬೆಣ್ಣೆಯಂತಹ ಹುಡುಗಿ ಯಾರು ಗೊತ್ತೇ?? ತಿಳಿದರೆ ಕುಂತಲ್ಲೇ ಎಗರಿ ಬೀಳ್ತಿರಾ.
Kannada News: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ಕುಟುಂಬಕ್ಕೆ ಮತ್ತೊಬ್ಬರು ಹೊಸ ಸದಸ್ಯರ ಎಂಟ್ರಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮನೆಯಲ್ಲಿ ಅದ್ದೂರಿ ಶುಭ ಸಮಾರಂಭ ಒಂದು ನಡೆಯಲಿದೆ. ಅಂದಹಾಗೆ ಚಿರು ಕುಟುಂಬ ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ ಕುಟುಂಬದವರ ಮದುವೆಗೆ ಸಾಕ್ಷಿ ಆಗಲಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಸ್ಟಾರ್ ನಟಿಯೊಬ್ಬರು ಚಿರು ಅವರ ಮನೆಗೆ ಸೊಸೆಯಾಗಿ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮೆಗಾ ಪ್ರಿನ್ಸ್ ವರುಣ್ ತೇಜ್ (Varun Tej) ಅವರ ಮದುವೆಗೆ ಇಡೀ ಕುಟುಂಬ ಸಾಕ್ಷಿ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಇವರ ಮದುವೆಯಾಗಲಿದೆ ಎಂದು ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಸ್ಟಾರ್ ನಟಿಯೊಬ್ಬರು ಮೆಗಾಸ್ಟಾರ್ ಕುಟುಂಬಕ್ಕೆ ಸೊಸೆಯಾಗಿ ಬರುತ್ತಿದ್ದಾರೆ ಎಂದು ವರದಿಯಾಗಿದೆ.
ಮೆಗಾ ಪ್ರಿನ್ಸ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಅವರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಮೊದಲಿನಿಂದಲೂ ಇದೆ. ಆದರೆ ಈ ಕುರಿತಾಗಿ ಇಬ್ಬರೂ ಸಹ ಯಾವುದೇ ಒಂದು ಸುಳಿವನ್ನು ಬಿಟ್ಟು ಕೊಟ್ಟಿಲ್ಲ. ತಾವು ಪ್ರೀತಿಸುತ್ತಿರುವ ಸತ್ಯವನ್ನು ಸಹ ಹೇಳಿಕೊಂಡಿಲ್ಲ. ಆದರೆ ಈ ನಡುವೆ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಷಯ ಕನ್ಫರ್ಮ್ ಆಗಿದೆ. ಹೀಗಾಗಿ ಈ ಜೋಡಿ ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಈ ಹಿಂದೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ವರುಣ್ ತೇಜ್ ಅವರ ತಂದೆ ನಾಗಬಾಬು (Nagababu) ತಮ್ಮ ಮಗನ ಮದುವೆ ಕುರಿತಾಗಿ ಮಾತನಾಡಿದರು. ಇನ್ನು ಕೆಲವೇ ದಿನಗಳಲ್ಲಿ ವರುಣ್ ತೇಜ್ ಗೆ ವಿವಾಹವಾಗಲಿದೆ ಎಂದು ಅವರು ಹೇಳಿದ್ದರು. ಆದರೆ ತಮ್ಮ ಮನೆಗೆ ಸೊಸೆಯಾಗಿ ಬರುತ್ತಿರುವುದು ಯಾರು ಎನ್ನುವ ಕುರಿತಾಗಿ ಅವರು ಬಹಿರಂಗಪಡಿಸಿರಲಿಲ್ಲ. ಇದನ್ನು ಓದಿ..Kannada News: ಬೆಣ್ಣೆಯಂತಹ ನಟಿ ಹನಿರೋಸ್ ನೋಡಿ ಫುಲ್ ಫಿದಾ ಆದ ನಿರ್ಮಾಪಕ: ದೊಡ್ಡ ಮೊತ್ತ ಕೊಡಲು ಷರತ್ತು ಏನು ಗೊತ್ತೇ?. ಈ ವಯಸ್ಸಿನಲ್ಲೂ ಆ ಕೆಲಸ ಮಾಡಿ ಬಿಡ್ತಾರಾ ಹನಿರೋಸ್?
ಇದರ ಬೆನ್ನಲ್ಲೇ ಇತ್ತೀಚಿಗೆ ನಟಿ ಲಾವಣ್ಯ ಸುಮಾಅಡ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ವರುಣ್ ತೇಜ್ ಕುರಿತಾಗಿ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇದೀಗ ಲಾವಣ್ಯ ಅವರ ಮಾತಿನಿಂದ ಈ ಜೋಡಿ ಪ್ರೀತಿ ಮಾಡುತ್ತಿದ್ದು, ಮದುವೆಯಾಗುವ ವಿಷಯಕ್ಕೆ ಇನ್ನಷ್ಟು ಪುಷ್ಟಿ ದೊರೆತಂತಾಗಿದೆ. ಸಂದರ್ಶನದಲ್ಲಿ ನಾನಿ ಮತ್ತು ವರುಣ್ ತೇಜ್ ಇಬ್ಬರಲ್ಲಿ ಯಾರು ಸುಂದರವಾಗಿದ್ದಾರೆ ಎಂದು ಸುಮ ಪ್ರಶ್ನೆಸಿದ್ದಾರೆ. ಈ ಪ್ರಶ್ನೆ ಕೇಳಿದ ಒಂದೇ ಕ್ಷಣದಲ್ಲಿ ಬಹಳ ಪ್ರೀತಿ ಮತ್ತು ಎಕ್ಸೈಟ್ಮೆಂಟ್ ಇಂದ ಲಾವಣ್ಯ ವರುಣ್ ತೇಜ್ ಈಸ್ ಮೋಸ್ಟ ಹ್ಯಾಂಡ್ಸಮ್ ಎಂದು ಉತ್ತರಿಸಿದ್ದಾರೆ. ಈ ಮೂಲಕ ಈ ಜೋಡಿಯ ಕುರಿತಾಗಿ ಹರಿದಾಡುತ್ತಿರುವ ಗಾಸಿಪ್ ಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ. ಬಹಿರಂಗವಾಗಿ ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳದಿದ್ದರು ಕೂಡ ಈ ಜೋಡಿ ಪ್ರೀತಿಯಲ್ಲಿ ಬಿದ್ದಿರುವುದು ಸತ್ಯ. ಅಲ್ಲದೆ ಎಲ್ಲವೂ ಅಂದುಕೊಂಡಂತೆ ಆದರೆ ಈ ಜೋಡಿ ಇನ್ನೂ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದೆ. ಇದನ್ನು ಓದಿ..Kannada News: ಮುಂದಿನ ಅಪ್ಪು ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಆಯ್ಕೆಯಾದ ಅಪ್ಸರೆ ಯಾರು ಗೊತ್ತೇ? ನೋಡಲು ಎರಡು ಕಣ್ಣು ಸಾಲದು.
Comments are closed.