Kannada News: ಕನ್ನಡ ಕಿರುತೆರೆಯಲ್ಲಿ ಎಲ್ಲರ ಮನಗೆದ್ದಿರುವ ತಾರಿಣಿ ಪಾತ್ರದಾರಿ ನಿಜಕ್ಕೂ ಯಾರು ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
Kannada News: ಕಳೆದ ಮುಂಗಾರಿನಲ್ಲಿ ಹೊಸದೊಂದು ಮಳೆಗಾಲದ ಪ್ರೇಮ ಕಥೆ ಎಂಬಂತಹ ಪ್ರೊಮೋ ಕಲರ್ಸ್ ಕನ್ನಡ (Colors Kannada) ಬಿಡುಗಡೆ ಮಾಡಿತ್ತು. ಒಲವಿನ ನಿಲ್ದಾಣ (Olavina Nildana) ಎನ್ನುವ ಹೊಸ ಧಾರವಾಹಿಯ ಪ್ರೋಮೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗಾಗಲೇ ತನ್ನ ಪ್ರಸಾರ ಆರಂಭಿಸಿರುವ ಈ ಧಾರವಾಹಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುವ ಈ ದಾರವಾಹಿ ತನ್ನ ನವಿರಾದ ಪ್ರೇಮ ಕಥೆ ಹಾಗೂ ಕೌಟುಂಬಿಕ ಬಾಂಧವ್ಯಗಳ ಸುತ್ತ ನಡೆಯುತ್ತದೆ. ಅಂದಹಾಗೆ ಈ ಧಾರವಾಹಿಯಲ್ಲಿ ತಾರಿಣಿ ಎನ್ನುವ ನಾಯಕಿಯ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಅವರ ಮುದ್ದು ಮುದ್ದಾದ ನಟನೆ, ಡೈಲಾಗ್ ಹೇಳುವ ರೀತಿ ಸೇರಿದಂತೆ ಎಲ್ಲವೂ ಜನರಿಗೆ ಅಚ್ಚುಮೆಚ್ಚಿನದಾಗಿದೆ. ಅಂದ ಹಾಗೆ ತಾರಿಣಿ ಪಾತ್ರವನ್ನು ಮಾಡುತ್ತಿರುವ ನಟಿಯ ಕುರಿತ ಮಾಹಿತಿಯನ್ನು ಇಲ್ಲಿ ಹೇಳಲಾಗಿದೆ.
ಒಲವಿನ ನಿಲ್ದಾಣ ಧಾರವಾಹಿಯಲ್ಲಿ ತಾರಿಣಿ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಅಮಿತಾ ಕುಲಾಲ್ (Amitha Kulal). ಇವರು ಮೂಲತಃ ಮಂಗಳೂರಿನವರು. ಕರಾವಳಿ ಬೆಡಗಿ ಅಮಿತಾ ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಈ ಕ್ಷೇತ್ರವು ಅವರಿಗೆ ಅತ್ಯಂತ ಇಷ್ಟದ ವೃತ್ತಿಯಾಗಿತ್ತು. ಆನಂತರ ಅವರು ಚಿತ್ರರಂಗಕ್ಕೂ ಕೂಡ ಎಂಟ್ರಿ ಕೊಟ್ಟರು. ನಟ, ನಿರೂಪಕ ಸೃಜನ್ ಲೋಕೇಶ್ ಅವರ ಜೊತೆಗೆ ಅವರು ಹ್ಯಾಪಿ ಜರ್ನಿ ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಅದಾದ ಬಳಿಕ ಅವರು ಗಿಫ್ಟ್ ಬಾಕ್ಸ್ ಚಿತ್ರದಲ್ಲಿಯೂ ಸಹ ಅಭಿನಯಿಸಿದ್ದಾರೆ. ನಟಿ ಅಮಿತಾ ಈಗಾಗಲೇ ತೆಲುಗಿನಲ್ಲಿ ರೌಡಿಗಾರಿ ಪೆಲ್ಲಾಮ್ ಎಂಬ ಧಾರವಾಹಿಯಲ್ಲಿಯೂ ಕೂಡ ನಟಿಸಿದ್ದರು. ಇದನ್ನು ಓದಿ..Kannada News: ಮುಂದಿನ ಅಪ್ಪು ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಆಯ್ಕೆಯಾದ ಅಪ್ಸರೆ ಯಾರು ಗೊತ್ತೇ? ನೋಡಲು ಎರಡು ಕಣ್ಣು ಸಾಲದು.
ಕಂಪ್ಯೂಟರ್ ಸೈನ್ಸ್ ನಲ್ಲಿ ಇವರು ಪದವಿ ಪಡೆದಿದ್ದಾರೆ. ಅಲ್ಲದೆ ಮುಂಬೈನ ಹಲವಾರು ಶೋಗಳಲ್ಲಿ ಇವರು ಮಾಡೆಲಿಂಗ್ ಮಾಡಿದ್ದಾರೆ. ಆನಂತರ ಅವರು ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಆರಂಭದಲ್ಲಿ ಅಮಿತಾ ಅವರಿಗೆ ಮಂಗಳೂರು ಕನ್ನಡ ಮಾತ್ರವೇ ಬರುತ್ತಿತ್ತು. ಹೀಗಾಗಿ ಅವರಿಗೆ ಕನ್ನಡ ಚಿತ್ರ ಮತ್ತು ಧಾರವಾಹಿಗಳಲ್ಲಿ ಅವಕಾಶಗಳು ಕೈ ತಪ್ಪಿ ಹೋಗುತ್ತಿತ್ತಂತೆ. ಹ್ಯಾಪಿ ಜರ್ನಿ ಚಿತ್ರದಲ್ಲಿ ಅಭಿನಯಿಸಿದ್ದ ವೇಳೆ ಅವರು ಅಷ್ಟು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿರಲಿಲ್ಲ. ಸಾಕಷ್ಟು ಕಷ್ಟಪಟ್ಟು ಕನ್ನಡ ಮಾತನಾಡುವ ಪ್ರಯತ್ನ ಪಡುತ್ತಿದ್ದರು. ಆದರೆ ಇದೀಗ ತಕ್ಕಮಟ್ಟಿಗೆ ಅವರು ಕನ್ನಡದಲ್ಲಿ ಮಾತನಾಡಬಲ್ಲರು. ಅವರ ಮುದ್ದು ಮುದ್ದಾದ ತೊದಲು ರೀತಿಯ ಕನ್ನಡ ಡೈಲಾಗ್ ಹೇಳುವ ಬಗೆಗೆ ಅಭಿಮಾನಿಗಳಾದವರಿದ್ದಾರೆ. ಇದನ್ನು ಓದಿ..Kannada News: ಮೆಗಾ ಸ್ಟಾರ್ ಚಿರು ಫ್ಯಾಮಿಲಿ ನಟ ವರುಣ್ ಮದುವೆಯಾಗುತ್ತಿರುವ ಬೆಣ್ಣೆಯಂತಹ ಹುಡುಗಿ ಯಾರು ಗೊತ್ತೇ?? ತಿಳಿದರೆ ಕುಂತಲ್ಲೇ ಎಗರಿ ಬೀಳ್ತಿರಾ.
Comments are closed.