Cricket News: ವಿಶ್ವಕಪ್ ನಲ್ಲಿ ಸಂಪೂರ್ಣ ವಿಫಲರಾಗಿದ್ದ ದಿನೇಶ್ ಕಾರ್ತಿಕ್ ಭವಿಷ್ಯದ ಬಗ್ಗೆ ಮಾಹಿತಿ ಕೊಟ್ಟ ಆಯ್ಕೆ ಸಮಿತಿ ಸದಸ್ಯ. ಹೇಳಿದ್ದೇನು ಗೊತ್ತೆ?? ಮತ್ತೆ ಬರುತ್ತಾರೆಯೇ?

Cricket News: ಟಿ ಟ್ವೆಂಟಿ ವಿಶ್ವಕಪ್ (T20 World Cup) ಪಂದ್ಯದ ಬಳಿಕವು ಸಾಕಷ್ಟು ಸರಣಿಗಳು, ಸೀರೀಸ್ ಸ್ಪರ್ಧೆಗಳು ನಡೆಯುತ್ತಿವೆ. ಆದರೆ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರದ ದಿನೇಶ್ ಕಾರ್ತಿಕ್ (Dinesh Karthik) ಅವರನ್ನು ಪಂದ್ಯದಿಂದ ಹೊರಗೆ ಇಡಲಾಗಿದೆ. ಅವರನ್ನು ವಿಶ್ರಾಂತಿಯ ನೆಪ ಹೇಳಿ ಪರೋಕ್ಷವಾಗಿ ತಂಡದಿಂದ ಹೊರಗೆ ಹಾಕಲಾಗಿದೆ. ಇನ್ನೇನು ಬಹುತೇಕ ಅವರ ಕೆರಿಯರ್ ಮುಗಿದು ಹೋಯಿತು. ಇನ್ನೆಂದು ಅವರು ಆಡುವುದಿಲ್ಲವೇ ಎನ್ನುವ ಪ್ರಶ್ನೆಗಳು ಎಲ್ಲೆಡೆ ಕೇಳಿ ಬರುತ್ತಿವೆ. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ (Chetan Sharma) ಇದರ ಬಗ್ಗೆ ವಿವರಿಸಿದ್ದಾರೆ. ದಿನೇಶ್ ಕಾರ್ತಿಕ್ ರವರನ್ನು ವಿಶ್ರಾಂತಿಯ ಹೆಸರು ಹೇಳಿ ತಂಡದಿಂದ ಹೊರಗಿಟ್ಟಿರುವುದರ ಹಿಂದಿನ ಕಾರಣವನ್ನು ಮಾಧ್ಯಮದವರು ಕೇಳಿದ್ದು ಅದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

ವಿಶ್ವಕಪ್ 2022 ನಡೆಯುವುದಕ್ಕೂ ಮೊದಲು ದಿನೇಶ್ ಕಾರ್ತಿಕ್ ಅವರನ್ನು ಟೀಮ್ ಇಂಡಿಯಾದ ಫಿನಿಷರ್ ಎಂದೇ ಹೇಳಲಾಗುತ್ತಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಚುಟುಕು ವಿಶ್ವ ಸಮರದಲ್ಲಿ ಸಿಕ್ಕ ಕಡಿಮೆ ಅವಕಾಶದಲ್ಲಿ ಅವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕಳಪೆ ಪ್ರದರ್ಶನದಿಂದಾಗಿ ನಿರಾಸೆ ಮೂಡಿಸಿದರು. ಇದರಿಂದಾಗಿ ಅವರು ಮುಂದಿನ ಪಂದ್ಯಗಳಿಗೆ ಅವಕಾಶ ಪಡೆದುಕೊಳ್ಳುವುದು ಪೂರ್ತಿ ಅನುಮಾನವೇ ಎಂದು ಎಲ್ಲರೂ ಭಾವಿಸಿ ತೊಡಗಿದ್ದರು. ಐಪಿಎಲ್ ಸೀಸನ್ 2022 (IPL 2022) ರಲ್ಲಿ ಭರ್ಜರಿ ಪ್ರದರ್ಶನ ತೋರಿದ ಅವರು ಟಿ20 ವಿಶ್ವಕಪ್ ಗೆ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ದಿನೇಶ್ ಕಾರ್ತಿಕ್ ವಿಶ್ವಕಪ್ ನಲ್ಲಿ ಮಿಂಚಲು ವಿಫಲರಾದರು. ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡದ ಗೆಲುವಿಗೆ ಯಾವುದೇ ಕೊಡುಗೆಯನ್ನು ನೀಡಲು ಸಾಧ್ಯವಾಗಲಿಲ್ಲ. ಇದನ್ನು ಓದಿ.. Cricket News: ಆಸ್ಟ್ರೇಲಿಯಾ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಆತ್ಮಚರಿತ್ರೆಯಲ್ಲಿ ಕರಾಳ ಸತ್ಯ ಬಯಲಿಗೆ. ಏನಂತೆ ಗೊತ್ತೇ??

cricket news chetan sharma about dinesh karthik | Cricket News: ವಿಶ್ವಕಪ್ ನಲ್ಲಿ ಸಂಪೂರ್ಣ ವಿಫಲರಾಗಿದ್ದ ದಿನೇಶ್ ಕಾರ್ತಿಕ್ ಭವಿಷ್ಯದ ಬಗ್ಗೆ ಮಾಹಿತಿ ಕೊಟ್ಟ ಆಯ್ಕೆ ಸಮಿತಿ ಸದಸ್ಯ. ಹೇಳಿದ್ದೇನು ಗೊತ್ತೆ?? ಮತ್ತೆ ಬರುತ್ತಾರೆಯೇ?

ಇದೀಗ ಅವರು ಮುಂದಿನ ಪಂದ್ಯಗಳಿಗೆ ಅವಕಾಶ ಪಡೆಯುವುದಿಲ್ಲವೇನು ಎಂಬ ಆತಂಕ ಸೃಷ್ಟಿಯಾಗಿರುವಾಗ, ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಈ ಗೊಂದಲವನ್ನು ಪರಿಹರಿಸಿದ್ದಾರೆ. ಮಾಧ್ಯಮದವರ ಜೊತೆಗೆ ಮಾತನಾಡಿರುವ ಅವರು “ದಿನೇಶ್ ಕಾರ್ತಿಕ್ ಅದ್ಭುತ ಆಟಗಾರರಾಗಿದ್ದಾರೆ. ಅವರು ಮತ್ತೆ ಫಾರ್ಮ್ ಗೆ ಬಂದರೆ ತಂಡದ ಗೆಲುವಿಗೆ ಅವರು ತಮ್ಮದೇ ಆದ ಕೊಡುಗೆ ನೀಡಬಲ್ಲರು. ಅವರು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಅವರ ಆಟದ ಮೇಲೆ ನಮಗೆ ಅನುಮಾನವಿಲ್ಲ. ಸದ್ಯಕ್ಕೆ ಅವರು ವಿಶ್ರಾಂತಿಯಲ್ಲಿದ್ದಾರೆ. ಮುಂದಿನ ಪಂದ್ಯಗಳಿಗೆ ಅವರು ಖಂಡಿತ ಕಂಬ್ಯಾಕ್ ಮಾಡುತ್ತಾರೆ. ಅವರನ್ನು ತಂಡದಿಂದ ಹೊರಗೆ ಹಾಕುವ ಯಾವುದೇ ಯೋಚನೆ ಇಲ್ಲ” ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಟೀಮ್ ಇಂಡಿಯಾ (Team India) ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಅವರು ತೆರೆ ಎಳೆದಿದ್ದಾರೆ. ಇದನ್ನು ಓದಿ.. Kannada Astrology: ನೀವು ಶ್ರೀಮಂತರಾಗಬೇಕು ಎಂದರೆ, ಪೊರಕೆ ಬಳಸಿಕೊಂಡು ಇದೊಂದು ತಂತ್ರ ಮಾಡಿ ಸಾಕು. ರಾಜರು ಕೂಡ ಮಾಡುತ್ತಿದ್ದ ತಂತ್ರ ಇದು. ಏನು ಗೊತ್ತೇ??

Comments are closed.