Cricket News: ಇದಪ್ಪ ಆಯ್ಕೆ ಅಂದ್ರೆ, ದ್ವಿಶತಕ ಗಳಿಸಿದ ಇಶಾನ್ ಕಿಶನ್ ಗೆ ಶಾಕ್ ಕೊಟ್ಟು, ತಂಡದಲ್ಲಿ ಅವಕಾಶ ಕೊಟ್ಟಿದ್ದು ಯಾರಿಗೆ ಗೊತ್ತೇ?? ರೋಹಿತ್ ಮಹಾ ಎಡವಟ್ಟು.
Cricket News: ಭಾರತ ಮತ್ತು ಶ್ರೀಲಂಕಾ (India vs Srilanka) ನಡುವಿನ ಏಕದಿನ ಪಂದ್ಯ ಇಂದಿನಿಂದ ಆರಂಭಗೊಳ್ಳಲಿದೆ. ಮೂರು ಪಂದ್ಯಗಳ ಸರಣಿಯಾದ ಈ ಪಂದ್ಯಗಳ ಪೈಕಿ ಮೊದಲ ಪಂದ್ಯವು ಇಂದು ಗೌಹಾಟಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಭರ್ಜರಿ ಪ್ರದರ್ಶನ ತೋರುತ್ತಿರುವ ಇಶಾನ್ ಕಿಶನ್ (Ishan Kishan) ಅವರನ್ನು ತಂಡದಿಂದ ಕೈ ಬಿಡಲಾಗುತ್ತಿದೆ. ಅವರ ಬದಲಿಗೆ ಮತ್ತೊಬ್ಬ ಆಟಗಾರರಿಗೆ ಮಣೆ ಹಾಕಲಾಗಿದೆ. ಇಂತಹದೊಂದು ಮಾಹಿತಿಯನ್ನು ಸ್ವತಹ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಸುದ್ದಿಗಾರರಿಗೆ ನೀಡಿದ್ದಾರೆ. ಹಾಗಿದ್ದರೆ ಇಶಾನ್ ಕಿಶನ್ ಬದಲಿಗೆ ಕಣಕ್ಕಿಳಿಯಲಿರುವ ಮತ್ತೊಬ್ಬ ಆಟಗಾರ ಯಾರು ಗೊತ್ತ?
ಇಶಾನ್ ಕಿಶನ್ ಅವರನ್ನು ತಂಡದಿಂದ ಕೈ ಬಿಟ್ಟು ಮತ್ತೊಬ್ಬ ಆಟಗಾರನನ್ನು ಆಡಿಸುತ್ತಿರುವುದರ ಕುರಿತಾಗಿ ಮಾಧ್ಯಮದವರ ಜೊತೆಗೆ ರೋಹಿತ್ ಶರ್ಮ ಮಾತನಾಡಿದ್ದಾರೆ. ಈ ವೇಳೆ ಅವರು “ದುರಾದೃಷ್ಟವಶಾತ್ ಮೊದಲ ಪಂದ್ಯದಲ್ಲಿ ನಮಗೆ ಇಶಾನ್ ಕಿಶನ್ ಅವರನ್ನು ಕೈ ಬಿಡಲೇಬೇಕಾದ ಪರಿಸ್ಥಿತಿ ಬಂದಿದೆ. ಆರಂಭಿಕರಾಗಿ ಶುಭಮನ್ ಗಿಲ್ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ. ದ್ವಿಶತಕ ಸಿಡಿಸಿರುವ ಆಟಗಾರನನ್ನು ತಂಡದಿಂದ ಕೈಬಿಡುವುದು ಉತ್ತಮವಲ್ಲ, ಆದರೆ ನಮ್ಮ ಬಳಿ ಇದಕ್ಕಿಂತಲೂ ಉತ್ತಮವಾದ ಆಯ್ಕೆಯು ಇಲ್ಲ. ಹೀಗಾಗಿ ಇಶಾನ್ ಅವರ ಬಳಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ಇನ್ನು ಅಂಕಿ ಅಂಶಗಳನ್ನು ಗಮನಿಸಿದರು ಸಹ ಇಶಾನ್ ಕಿಶನ್ ಅವರಿಗಿಂತಲೂ ಶುಭಮನ್ ಗಿಲ್ (Shubhman Gill) ಮುಂದಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ..Cricket News: ಭಾರತದ ಭವಿಷ್ಯದ ನಾಯಕನನ್ನು ಹೆಸರಿಸಿದ ಕುಮಾರ್ ಸಂಗಕ್ಕರ: ಈತನೇ ಉತ್ತಮ ನಾಯಕ ಎಂದದ್ದು ಯಾರಿಗೆ ಗೊತ್ತೇ??
2022 ರಲ್ಲಿ 12 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್ ಒಟ್ಟು 638 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಮತ್ತು 4 ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ. ಹೀಗಾಗಿ ಶುಭಮನ್ ಅವರಿಗೆ ಮಣೆ ಹಾಕಲಾಗಿದೆ. ಆದರೆ ಈ ಆಯ್ಕೆ ಏನೋ ಪರವಾಗಿಲ್ಲ ಆದರೆ ಕೆ ಎಲ್ ರಾಹುಲ್ ಅವರಿಗೂ ಕೂಡ ತಂಡ ಅವಕಾಶ ಕೊಟ್ಟಿರುವುದರ ಕುರಿತಾಗಿ ಟೀಕೆಗಳು ಕೇಳಿ ಬರುತ್ತಿವೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಹೊರ ನಡೆದಿರುವುದರಿಂದಾಗಿ ಅವರ ಜಾಗಕ್ಕೆ ಕೆ ಎಲ್ ರಾಹುಲ್ (K L Rahul) ಅವರು ಎಂಟ್ರಿ ಕೊಡುವುದು ಕನ್ಫರ್ಮ್ ಆಗಿದೆ. ಈ ಕುರಿತಾಗಿ ಕ್ರಿಕೆಟ್ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದಾರೆ. ಕೆಎಲ್ ರಾಹುಲ್ ಅವರು ಈಗಾಗಲೇ ಫಾರ್ಮ್ ಕಳೆದುಕೊಂಡಿದ್ದಾರೆ. ಮಾಧ್ಯಮದವರ ಜೊತೆಗೆ ಸ್ವತಃ ಅವರೇ ಇದನ್ನು ಒಪ್ಪಿಕೊಂಡಿದ್ದರು. ಕೆ ಎಲ್ ರಾಹುಲ್ ರವರಿಗೆ ಏಕೆ ಅವಕಾಶ ಕೊಡುತ್ತೀರಿ, ಆಟಗಾರರನ್ನು ಆಯ್ಕೆ ಮಾಡುವುದರಲ್ಲಿ ರೋಹಿತ್ ಶರ್ಮ ಯಡವಟ್ಟು ಮಾಡಿಕೊಂಡಿದ್ದಾರೆ ಎಂದೆಲ್ಲ ಅಭಿಮಾನಿಗಳು, ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದನ್ನು ಓದಿ.. Cricket News: ಚೆನ್ನಾಗಿ ಆಡಿದರೂ ಕೂಡ ರಾಜಕೀಯದಿಂದ ತಂಡದಿಂದ ಹೊರಹೋದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟ ಶಿಖರ್ ಹೇಳಿದ್ದೇನು ಗೊತ್ತೇ??
Comments are closed.