Kannada News: ರಿಷಬ್ ಶೆಟ್ಟಿ ಗೆ ಸ್ಪೂರ್ತಿಯಾದ ತಮಿಳು ನಟ ಯಾರು ಗೊತ್ತೇ? ರಜನಿಕಾಂತ್ ಅಲ್ಲ ಸ್ವಾಮಿ. ಮತ್ಯಾರು ಅಂತೇ ಗೊತ್ತೇ??

Kannada News: ನಟ ರಿಷಬ್ ಶೆಟ್ಟಿ (Rishab Shetty) ಸದ್ಯ ಕಾಂತಾರದ ಗೆಲುವಿನಿಂದ ಪ್ಯಾನ್ ಇಂಡಿಯಾ ಸ್ಟಾರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ವಿಭಿನ್ನ ಕಥಾ ಶೈಲಿ ಹೊಂದಿರುವ ಕಾಂತಾರ ಕನ್ನಡ ನೆಲದ ಕಥೆಯನ್ನು ಹೇಳುವ ಮೂಲಕ ಇಡೀ ಭಾರತದಾದ್ಯಂತ ಎಲ್ಲ ಭಾಷೆಯ ಜನರನ್ನು ಆಕರ್ಷಿಸಿದೆ. ಈಗಾಗಲೇ ಯಶಸ್ವಿಯಾಗಿ ನೂರು ದಿನಗಳನ್ನು ಮುಗಿಸಿರುವ ಕಾಂತಾರದ ಬಗ್ಗೆ ಜನಪ್ರಿಯತೆ ಇನ್ನೂ ಕೂಡ ಚೂರು ಕಡಿಮೆಯಾಗಿಲ್ಲ. ಈಗಲೂ ಎಷ್ಟೋ ಜನರು ಮತ್ತೆ ಮತ್ತೆ ಚಿತ್ರಮಂದಿರದಲ್ಲಿ ಕಾಂತಾರವನ್ನು (Kantara) ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಕಾಂತರಾ ಹೀಗಾಗಲೇ ಈ ಹಿಂದಿನ ಹಲವಾರು ಚಿತ್ರಗಳು ಮಾಡಿದ್ದ ಅದೆಷ್ಟು ದಾಖಲೆಗಳನ್ನು ಮುರಿದು ಹಾಕಿದ ಕೀರ್ತಿ ಪಡೆದುಕೊಂಡಿದೆ. ಕಾಂತಾರದ ಯಶಸ್ಸಿನ ಗುಂಗಿನಲ್ಲಿರುವ ರಿಷಬ್ ಶೆಟ್ಟಿ ಈಗಾಗಲೇ ನಿರಂತರವಾಗಿ ಹಲವಾರು ಸಂದರ್ಶನಗಳನ್ನು ನೀಡಿದ್ದಾರೆ. ಆದರೆ ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ತಮಗೆ ಸ್ಪೂರ್ತಿಯಾಗಿರುವ ತಮಿಳು ನಟ ಯಾರು ಎನ್ನುವುದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ (Kirik Party) ಮೂಲಕ ಗುರುತಿಸಿಕೊಂಡ ರಿಷಭ್ ಶೆಟ್ಟಿ ಅವರಿಗೆ ಕಾಂತಾರದ ನಿರ್ದೇಶನ ಮತ್ತು ನಟನೆ ಎರಡು ಸಹ ದೊಡ್ಡ ಬ್ರೇಕ್ ನೀಡಿದೆ. ಸದ್ಯ ಕನ್ನಡದ ಕಥೆಯಾಗಿ ತೆರೆ ಕಂಡ ಕಾಂತಾರಕ್ಕೆ ವಿವಿಧ ಭಾಷೆಗಳ ಜನರು ಕೂಡ ಮಾರು ಹೋಗುವಂತಾಗಿದೆ. ನೂರು ದಿನಗಳು ಕಳೆದರೂ ಕೂಡ ಜನರ ಕ್ರೇಜ್ ಇನ್ನೂ ಕೂಡ ಕಡಿಮೆಯಾಗಿಲ್ಲ. ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯಿಂದ ಮೂಡಿಬಂದ ಈ ಚಿತ್ರಕ್ಕೆ ಸ್ವತಹ ರಿಷಬ್ ಅವರೇ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ನಟಿಸಿದ ಒಂದೊಂದು ಸಣ್ಣ ಸಣ್ಣ ಪಾತ್ರಗಳಿಗೂ ಕೂಡ ಅಪಾರ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಚಿತ್ರ ತೆರೆಗೆ ಬಂದಮೇಲೆ, ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ಬರತೊಡಗಿದ ದಿನದಿಂದ ಇಂದಿನವರೆಗೂ ಶೆಟ್ಟಿ ನಿರಂತರವಾಗಿ ಬೇರೆ ಬೇರೆ ಭಾಷೆಗಳ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ಬಂದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಾವು ಫಾಲೋ ಮಾಡುವ ತಮ್ಮ ಮೆಚ್ಚಿನ ತಮಿಳು ನಟನ ಕುರಿತಾಗಿ ಹಂಚಿಕೊಂಡಿದ್ದಾರೆ. ಇದನ್ನು ಓದಿ.. Kannada News: ಇನ್ನೇನು ಎಲ್ಲವೂ ಸರಿ ಹೋಗಿದೆ ಎಂದು ಕೊಂಡಿದ್ದಾಗ, ದೇಶ ಭಕ್ತರನ್ನು ಕೆಣಕಿದ ರಚಿತಾ ರಾಮ್: ಪಾಕ್ ಗೆ ಹೋಗಿ ರಚಿತಾ ಎಂದ ನೆಟ್ಟಿಗರು. ಕ್ರಾಂತಿ ಕಥೆ ಮುಗಿಯಿತೇ??

kannada news rishab shetty about tamil actor | Kannada News: ರಿಷಬ್ ಶೆಟ್ಟಿ ಗೆ ಸ್ಪೂರ್ತಿಯಾದ ತಮಿಳು ನಟ ಯಾರು ಗೊತ್ತೇ? ರಜನಿಕಾಂತ್ ಅಲ್ಲ ಸ್ವಾಮಿ. ಮತ್ಯಾರು ಅಂತೇ ಗೊತ್ತೇ??
Kannada News: ರಿಷಬ್ ಶೆಟ್ಟಿ ಗೆ ಸ್ಪೂರ್ತಿಯಾದ ತಮಿಳು ನಟ ಯಾರು ಗೊತ್ತೇ? ರಜನಿಕಾಂತ್ ಅಲ್ಲ ಸ್ವಾಮಿ. ಮತ್ಯಾರು ಅಂತೇ ಗೊತ್ತೇ?? 2

ರಿಷಬ್ ಶೆಟ್ಟಿ ಮೊದಲ ಬಾರಿಗೆ ತಾವು ಫಾಲೋ ಮಾಡುವ ತಮಿಳು ನಟನ ಕುರಿತಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಅವರು ನಾನು ತಮಿಳು ನಟ ಸೂರ್ಯ ಅವರನ್ನು ಸಾಕಷ್ಟು ಫಾಲೋ ಮಾಡುತ್ತೇನೆ. ಕಾಲೇಜು ದಿನಗಳಲ್ಲಿ ನಾನು ಅವರನ್ನು ಕಾಪಿ ಮಾಡುತ್ತಿದ್ದೆ. ನನಗೆ ಆಗ ಚಿತ್ರಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅವರ ಎಲ್ಲ ಸಿನಿಮಾಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಿದ್ದೆ. ಕಾಲೇಜಿನ ದಿನಗಳಲ್ಲಿ ಅವರ ವಾಕಿಂಗ್ ಸ್ಟೈಲ್, ಹೇರ್ ಸ್ಟೈಲ್ ಎಲ್ಲವನ್ನು ಕಾಪಿ ಮಾಡುತ್ತಿದ್ದೆ. ಅವರೇ ನನ್ನ ಸ್ಪೂರ್ತಿ ಎಂದು ರಿಷಬ್ ಹೇಳಿಕೊಂಡಿದ್ದಾರೆ. ನಟ ಸೂರ್ಯ (Suriya) ಅವರು ತಮ್ಮ ಪ್ರತಿ ಚಿತ್ರಗಳಲ್ಲಿಯೂ ಡಿಫ್ರೆಂಟ್ ಮ್ಯಾನರಿಸಂ ಅಲ್ಲಿ ಕಾಣಿಸಿಕೊಳ್ಳುತ್ತಾರೆ. ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ನಲ್ಲಿ ಅವರು ನಟಿಸುತ್ತಾರೆ. ಹೀಗಾಗಿ ಅವರನ್ನು ನಾನು ಕಾಪಿ ಮಾಡುತ್ತೇನೆ, ಅನುಸರಿಸುತ್ತೇನೆ. ಅವರು ನನ್ನ ಇನ್ಸ್ಪಿರೇಷನ್ ಎಂದು ನಟ ರಿಷಬ್ ಹೇಳಿದ್ದಾರೆ. ಇದನ್ನು ಓದಿ..Kannada News: ಕ್ರಾಂತಿ ಗೆಲ್ಲಿಸಲು ಪಣ ತೊಟ್ಟ ಮಹಾನ್ ವ್ಯಕ್ತಿ: ದರ್ಶನ್ ಜೊತೆ ಇವರು ಸೇರಿದ್ರೆ, KGF ರೆಕಾರ್ಡ್ ಕೂಡ ಉಳಿಯಲ್ಲ. ಯಾರು ಗೊತ್ತೇ?? ಏನು ಮಾಡುತ್ತಾರೆ ಗೊತ್ತೇ??

Comments are closed.