Kannada News: ಇನ್ನೇನು ಎಲ್ಲವೂ ಸರಿ ಹೋಗಿದೆ ಎಂದು ಕೊಂಡಿದ್ದಾಗ, ದೇಶ ಭಕ್ತರನ್ನು ಕೆಣಕಿದ ರಚಿತಾ ರಾಮ್: ಪಾಕ್ ಗೆ ಹೋಗಿ ರಚಿತಾ ಎಂದ ನೆಟ್ಟಿಗರು. ಕ್ರಾಂತಿ ಕಥೆ ಮುಗಿಯಿತೇ??
Kannada News: ಚಿತ್ರರಂಗದಲ್ಲಿ ಇರುವ ಕಲಾವಿದರು ಏನೇ ಮಾಡಿದರೂ ಸುದ್ದಿಯಾಗುತ್ತಾರೆ, ಅವರ ಪ್ರತಿಯೊಂದು ಹೇಳಿಕೆ, ಚಲನ ವಲನ ಮತ್ತು ಪ್ರತಿಯೊಂದು ವಿಚಾರ ಕೂಡ ಎಲ್ಲರೂ ಗಮನಿಸುತ್ತಾ ಇರುತ್ತಾರೆ. ಕಲಾವಿದರು ಕೆಲವೊಮ್ಮೆ ಕೊಡುವ ಹೇಳಿಕೆಗಳು ಜನರ ಆಕ್ರೋಶಕ್ಕೆ ಕಾರಣ ಆಗುವುದು ಉಂಟು, ಮೊದಲೆಲ್ಲಾ ಈ ರೀತಿ ಹೆಚ್ಚಾಗಿ ಬಾಲಿವುಡ್ ನಲ್ಲಿ ನಡೆಯುತ್ತಿತ್ತು, ಆದರೆ ಈಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕೂಡ ಶುರುವಾಗಿದೆ. ತಮ್ಮ ಹೇಳಿಕೆ ಇಂದ ಈಗ ಸುದ್ದಿಯಾಗುವವರು ನಟಿ ರಚಿತಾ ರಾಮ್ (Rachita Ram). ಕ್ರಾಂತಿ (Kranthi) ಸಿನಿಮಾ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ರಚಿತಾ ರಾಮ್ ಅವರು ಕೊಟ್ಟಿರುವ ಹೇಳಿಕೆ ಈಗ ಭಾರಿ ವೈರಲ್ ಆಗುತ್ತಿದೆ..
ಕ್ರಾಂತಿ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ, ಶನಿವಾರ ನಡೆಯಿತು, ಅಭಿಮಾನಿಗಳು ಟ್ರೈಲರ್ ಅನ್ನಿ ಮೆಚ್ಚಿಕೊಂಡಿದ್ದಾರೆ, ಒಂದು ದಿನದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಆದರೆ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ರಚಿತಾ ರಾಮ್, ಕ್ರಾಂತಿ ಸಿನಿಮಾ ಪ್ರಚಾರ ಮಾಡುವ ಭರದಲ್ಲಿ ಗಣರಾಜ್ಯೋತ್ಸವವನ್ನು ಮರೆತು ಬಿಡಿ ಎಂದಿದ್ದಾರೆ. ಇಷ್ಟು ವರ್ಷ ಜನವರಿ 26ಎಂದರೆ ಗಣರಾಜ್ಯೋತ್ಸವ, ಈ ವರ್ಷ ಗಣರಾಜ್ಯೋತ್ಸವ ಮರೆತುಬಿಡಿ, ಬರಿ ಕ್ರಾಂತಿ ಉತ್ಸವ ನಡೀಬೇಕು.. ಎಂದಿದ್ದಾರೆ ರಚಿತಾ ರಾಮ್. ಇದನ್ನು ಓದಿ.. Kannada News: ಕ್ರಾಂತಿ ಗೆಲ್ಲಿಸಲು ಪಣ ತೊಟ್ಟ ಮಹಾನ್ ವ್ಯಕ್ತಿ: ದರ್ಶನ್ ಜೊತೆ ಇವರು ಸೇರಿದ್ರೆ, KGF ರೆಕಾರ್ಡ್ ಕೂಡ ಉಳಿಯಲ್ಲ. ಯಾರು ಗೊತ್ತೇ?? ಏನು ಮಾಡುತ್ತಾರೆ ಗೊತ್ತೇ??
ರಚಿತಾ ರಾಮ್ ಅವರು ಹೇಳಿರುವ ಈ ಮಾತು ನೆಟ್ಟಿಗರ ವಲಯದಲ್ಲಿ ಭಾರಿ ಟೀಕೆಗೆ ಒಳಗಾಗಿದೆ. ನಿಮ್ಮ ಸಿನಿಮಾ ದೇಶಕ್ಕಿಂತ ದೊಡ್ಡದಾ, ಗಣರಾಜ್ಯೋತ್ಸವ ಬಿಟ್ಟು ನಿಮ್ಮ ಸಿನಿಮಾ ನೋಡಬೇಕಾ ಎಂದು ಟೀಕೆ ಮಾಡಿದ್ದಾರೆ. ಇನ್ನು ಕೆಲವರು ಅಭಿಮಾನಿಗಳಿಗೆ ಏನೋ ಬುದ್ಧಿ ಇಲ್ಲ, ಆದರೆ ಸೆಲೆಬ್ರಿಟಿಗಳಾಗಿ ನಿಮಗೂ ಬುದ್ಧಿ ಇಲ್ವಾ ಈ ಥರ ಮಾತಾಡ್ತಾ ಇದ್ದೀರಾ ಎಂದು ಹೇಳಿದ್ದಾರೆ. ಇನ್ನು ಕೆಲವರು, ಗಣರಾಜ್ಯೋತ್ಸವ ಮರೆತುಬಿಡಿ ಅಂತೀರಾ ನೀವು ಭಾರತೀಯರ, ಇಲ್ಲಿರೋಕಿಂತ ಪಾಕಿಸ್ತಾನಕ್ಕೆ ಹೋಗಿ ಎಂದು ರಚಿತಾ ರಾಮ್ ಅವರ ಮೇಲೆ ಕೆಂಡ ಕಾರುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಕರ್ನಾಟಕದಂತೆ ತಮಿಳು ನಾಡಿನಲ್ಲಿ ಭರ್ಜರಿ ಹವಾ ಸೃಷ್ಟಿಸಿದ ದರ್ಶನ್: ಫ್ಯಾನ್ಸ್ ಹಾವಳಿಗೆ ತಮಿಳುನಾಡಿನಲ್ಲಿ ಏನಾಗಿದೆ ಗೊತ್ತೇ?
Comments are closed.