Kannada News: ಕ್ರಾಂತಿ ಗೆಲ್ಲಿಸಲು ಪಣ ತೊಟ್ಟ ಮಹಾನ್ ವ್ಯಕ್ತಿ: ದರ್ಶನ್ ಜೊತೆ ಇವರು ಸೇರಿದ್ರೆ, KGF ರೆಕಾರ್ಡ್ ಕೂಡ ಉಳಿಯಲ್ಲ. ಯಾರು ಗೊತ್ತೇ?? ಏನು ಮಾಡುತ್ತಾರೆ ಗೊತ್ತೇ??
Kannada News: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಕ್ರಾಂತಿ ಚಿತ್ರ ದಿನೇ ದಿನೇ ನಿರೀಕ್ಷೆ ಹೆಚ್ಚಾಗಿಸುತ್ತಿದೆ. ವರ್ಷಗಳ ಬಳಿಕ ಡಿ ಬಾಸ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಾಯಕನಟನ ಚಿತ್ರ ನೋಡುವ ಅದೃಷ್ಟ ಒಲಿದು ಬಂದಿದೆ. ಈ ಚಿತ್ರ ಇದುವರೆಗೆ ಬೇರೆ ಬೇರೆ ಕಾರಣಗಳಿಗೆ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಯಾಗಿದೆ. ಇದೀಗ ಮತ್ತೆ ಕ್ರಾಂತಿ ಚಿತ್ರ ಪ್ರಚಾರದ ವಿಷಯವಾಗಿ ಸುದ್ದಿ ಮಾಡುತ್ತಿದೆ. ಅದೇನೆಂದರೆ ಕ್ರಾಂತಿ ಚಿತ್ರವನ್ನು ಗೆಲ್ಲಿಸಲೇಬೇಕೆಂದು ಒಬ್ಬ ಮಹಾನ್ ನಟ ಪಣತೊಟ್ಟಿದ್ದಾರೆ. ದರ್ಶನವರ ಜೊತೆಗೆ ಸೇರಿಕೊಂಡು ಪ್ರಚಾರ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಲಿರುವ ಈ ನಟ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು, ಕೆಜಿಫ್ ಚಿತ್ರ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದು ಕ್ರಾಂತಿ ಚಿತ್ರ ದೊಡ್ಡ ಮಟ್ಟದ ದಾಖಲೆ ನಿರ್ಮಿಸಲು ಈ ನಟ ದರ್ಶನ್ ಜೊತೆಗೂಡಲಿದ್ದಾರೆ ಎಂದು ಸುದ್ದಿಯಾಗಿದೆ.
ದರ್ಶನ್ ಅವರ ಮುಂದಿನ ಚಿತ್ರ ಯಾವಾಗ ತೆರೆ ಮೇಲೆ ಬರುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು. ಇನ್ನು ಕೆಲವೇ ದಿನಗಳಲ್ಲಿ ಆ ದಿನ ಬರಲಿದೆ. ಇದೇ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರವು ಭರ್ಜರಿಯಾಗಿ ತೆರೆ ಕಾಣಲಿದೆ. ಈ ಹಿಂದಿನ ಎಲ್ಲ ಚಿತ್ರಗಳಿಗಿಂತಲೂ ಈ ಚಿತ್ರ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಇಬ್ಬರಿಗೂ ಕೂಡ ತೀರ ವಿಶೇಷವಾದದ್ದು ಎಂದೇ ಹೇಳಬಹುದು. ಮೊದಲನೆಯದಾಗಿ ಕಳೆದ ವರ್ಷ ದರ್ಶನವರ ಯಾವುದೇ ಚಿತ್ರವು ತೆರೆಗೆ ಬರಲಿಲ್ಲ. ಜೊತೆಗೆ ದರ್ಶನ್ ಅವರನ್ನು ಮಾಧ್ಯಮದವರು ಬ್ಯಾನ್ ಮಾಡಿದರು. ಆನಂತರ ಅಭಿಮಾನಿಗಳೇ ಮಾಧ್ಯಮಕ್ಕಿಂತಲೂ ಮಿಗಿಲಾಗಿ ಚಿತ್ರವನ್ನು ಪ್ರಚಾರ ಮಾಡಿದರು. ಇದೀಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಒಂದು ಕಡೆ ಕೆಲವರು ಕುತಂತ್ರದಿಂದ ಈ ಚಿತ್ರವನ್ನು ಸೋಲಿಸುವ ತಯಾರಿಯಲ್ಲಿದ್ದಾರೆ ಎಂದೆ ಹೇಳಲಾಗುತ್ತಿದೆ. ಆದರೆ ಮತ್ತೊಂದು ಕಡೆ ಕನ್ನಡದ ಸೂಪರ್ ಸ್ಟಾರ್ ನಟರೊಬ್ಬರು ದರ್ಶನ್ ಜೊತೆಗೂಡಿ ಕ್ರಾಂತಿ ಚಿತ್ರವನ್ನು ಸೂಪರ್ ಬ್ಲಾಕ್ಬಸ್ಟರ್ ಹಿಟ್ ಮಾಡಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…
ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ನಂತರ ಅಭಿಮಾನಿಗಳೇ, ಚಿತ್ರದ ಪ್ರಚಾರ ಮಾಡುವ ಪಣತೊಟ್ಟರು. ಬರಿ ದರ್ಶನವರ ಮುಂದಿನ ಚಿತ್ರ ಕ್ರಾಂತಿ ಎಂದು ಗೊತ್ತಾದ ತಕ್ಷಣವೇ ಚಿತ್ರದ ಕಥೆ ಏನು ಎನ್ನುವ ವಿಷಯವು ಗೊತ್ತಿಲ್ಲದ ಸಮಯದಲ್ಲೇ ಈ ಚಿತ್ರದ ಬಗ್ಗೆ ಇಡೀ ರಾಜ್ಯದ್ಯಂತ ಅಭಿಮಾನಿಗಳು ಅಬ್ಬರದ ಪ್ರಚಾರ ಶುರು ಮಾಡಿದರು. ಬಹುಶಃ ಈ ರೀತಿಯಾದ ಪ್ರಚಾರ ಕನ್ನಡದ ಬೇರೆ ಯಾವುದೇ ಚಿತ್ರಗಳಿಗೆ ಸಿಕ್ಕಿಲ್ಲ ಎನ್ನುವುದು ಅಷ್ಟೇ ಸತ್ಯ. ಕ್ರಾಂತಿ ಚಿತ್ರ ಬಿಡುಗಡೆಯ ಹಂತದಲ್ಲಿದೆ, ಆದರೆ ಇಲ್ಲಿಯವರೆಗೆ ಈ ನಡುವೆ ಅನೇಕ ಸಮಸ್ಯೆಗಳನ್ನು ಅಪಮಾನಗಳನ್ನು ಇಡೀ ಚಿತ್ರದಂಡ ಎದುರಿಸಿದೆ. ಇದೀಗ ಈ ಚಿತ್ರವನ್ನು ಗೆಲ್ಲಿಸಲೇಬೇಕೆಂದು ಕನ್ನಡದ ಖ್ಯಾತ ನಟರು ಒಬ್ಬರು ಪಣತೊಟ್ಟಿದ್ದಾರೆ. ಕೆಜಿಎಫ್ ಸೇರಿದಂತೆ ಕನ್ನಡದ ಚಿತ್ರಗಳ ಹಲವಾರು ದಾಖಲೆಗಳನ್ನು ಪುಡಿಪುಡಿ ಮಾಡಿ ಕ್ರಾಂತಿ ಚಿತ್ರ ಹೊಸ ದಾಖಲೆ ನಿರ್ಮಿಸುವಂತೆ ಅವರು ಪ್ರಚಾರ ಕಾರ್ಯ ಶುರು ಮಾಡಲಿದ್ದಾರೆ.
ಅಂದ ಹಾಗೆ ದರ್ಶನ್ ಜೊತೆಗೆ ನಿಂತು ಕ್ರಾಂತಿ ಚಿತ್ರವನ್ನು ನಿಲ್ಲಿಸಲು ಪಣತೊಟ್ಟಿರುವುದು ಬೇರೆ ಯಾರೂ ಅಲ್ಲ. ಅವರೇ ಕನಸುಗಾರ ವಿ ರವಿಚಂದ್ರನ್ (V Ravichandran), ಕನ್ನಡ ಚಿತ್ರರಂಗದಲ್ಲಿ ಪ್ರೇಮ ಲೋಕವನ್ನು ಸೃಷ್ಟಿಸಿದ ಕ್ರೇಜಿಸ್ಟಾರ್ ಇದೀಗ ಕ್ರಾಂತಿ ಚಿತ್ರವನ್ನು ಭರ್ಜರಿ ಗೆಲುವು ದಾಖಲಿಸಲು ಶಪಥ ಮಾಡಿದ್ದಾರೆ. ದರ್ಶನ್ ಬೆನ್ನಿಗೆ ನಿಂತು ಈ ಚಿತ್ರದ ಪ್ರಚಾರದಲ್ಲಿ ಶ್ರಮಿಸಲು ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕ್ರಾಂತಿ ಚಿತ್ರದ ಆರಂಭದಿಂದ ಇಂದಿನವರೆಗೂ ಇಡೀ ಚಿತ್ರತಂಡ ಹಾಗೂ ದರ್ಶನ್ ಅವರು ಎದುರಿಸಿರುವ ಅಪಮಾನಗಳು, ಅಡೆತಡೆಗಳ ಬಗ್ಗೆ ರವಿಚಂದ್ರನ್ ಅವರಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಈ ಚಿತ್ರವನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟಿರುವ ರವಿಚಂದ್ರನ್ ಕ್ರಾಂತಿ ಪರ ನಿಂತು ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳದಿದ್ದಾರಂತೆ. ಇದನ್ನು ಓದಿ..Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?
ಕ್ರಾಂತಿ ಚಿತ್ರದ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿರುವ ರವಿಚಂದ್ರನ್ ಅವರು ಅದಕ್ಕಾಗಿ ಭರ್ಜರಿ ಸಿದ್ಧತೆಯನ್ನೇ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಟ ದರ್ಶನ್ ಮತ್ತು ಇಡೀ ಚಿತ್ರತಂಡ ಒಂದೆಡೆ ಪ್ರಚಾರ ಕಾರ್ಯವನ್ನು ಕೊನೆಯ ಹಂತದಲ್ಲಿ ಬಿರುಸಿನಿಂದ ಮಾಡುತ್ತಿದ್ದರೆ, ರವಿಚಂದ್ರನ್ ರವರು ಪ್ರತ್ಯೇಕವಾಗಿ ಕ್ರಾಂತಿ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಲಿದ್ದಾರಂತೆ. ಪ್ರತ್ಯೇಕ ಪ್ರಚಾರದ ಕಾರ್ಯಕ್ರಮಗಳನ್ನು ಆಯೋಜಿಸಲಿರುವ ವಿ ರವಿಚಂದ್ರನ್ ರವರು ಕೊನೆ ದಿನಗಳಲ್ಲಿ ಅದ್ದೂರಿ ಪ್ರಚಾರ ಮಾಡಲಿದ್ದು, ಚಿತ್ರವನ್ನು ಬ್ಲಾಕ್ಬಸ್ಟರ್ ಹಿಟ್ ಮಾಡಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.
ಇಷ್ಟು ಮಾತ್ರವಲ್ಲದೆ ಅವರು ಈ ಪ್ರಚಾರದ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ (Shivarajkumar) ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರನ್ನು ಕರೆದು ತರಲಿದ್ದಾರೆ. ಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ದೊಡ್ಡ ದೊಡ್ಡ ಸ್ಟಾರ್ ನಟರನ್ನೆಲ್ಲ ಕರೆದು ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ಜನರಿಗೆ ತಲುಪಿಸುವ ತಯಾರಿಯಲ್ಲಿ ರವಿಚಂದ್ರನ್ ಇದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ದರ್ಶನ್ ಜೊತೆಗೆ ರವಿಚಂದ್ರನ್ ಅವರು ಸೇರಿ ಬಿಟ್ಟರೆ ಎಲ್ಲವೂ ಅಂದುಕೊಂಡಂತೆ ಆದರೆ ಕ್ರಾಂತಿ ದೊಡ್ಡ ಮಟ್ಟದ ಯಶಸ್ಸು ಗಳಿಸಲಿದೆ. ಕೆಜಿಎಫ್ ಸೇರಿದಂತೆ ಕನ್ನಡದ ಅನೇಕ ಚಿತ್ರಗಳ ದಾಖಲೆಗಳನ್ನು ಪುಡಿಪುಡಿ ಮಾಡಿ ಹೊಸ ದಾಖಲೆ ಸೃಷ್ಟಿಸಲಿದೆ ಎಂದು ಸಾಕಷ್ಟು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಇದನ್ನು ಓದಿ.. Kannada News: ಅಂದು ಪುನೀತ್ ಗಾಗಿ ಓಡೋಡಿ ಬಂದಿದ್ದ ದರ್ಶನ್, ಡಿ ಬಾಸ್ ಗುಣ ಕಂಡು ದೊಡ್ಮನೆ ಏನು ಮಾಡಿತ್ತು ಗೊತ್ತೇ??
Comments are closed.