Kannada News: ಕರ್ನಾಟಕದಂತೆ ತಮಿಳು ನಾಡಿನಲ್ಲಿ ಭರ್ಜರಿ ಹವಾ ಸೃಷ್ಟಿಸಿದ ದರ್ಶನ್: ಫ್ಯಾನ್ಸ್ ಹಾವಳಿಗೆ ತಮಿಳುನಾಡಿನಲ್ಲಿ ಏನಾಗಿದೆ ಗೊತ್ತೇ?
Kannada News: ದರ್ಶನ್ (Darshan) ಅಭಿನಯದ ಬಹುನಿರೀಕ್ಷಿತ ಕ್ರಾಂತಿ (Kranthi) ಚಿತ್ರ ಇನ್ನೂ ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. ಇದೇ ಜನವರಿ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ದರ್ಶನ್ ಅವರ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆಯಿಡಲಿದೆ. ಸಾಕಷ್ಟು ಸಮಯದ ಅಂತರದ ನಂತರ ದರ್ಶನ್ ಅವರ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಜನವರಿ 26 ಬರುವುದನ್ನು ಕಾಯುತ್ತಿದ್ದಾರೆ. ದರ್ಶನವರ ಈ ಮೊದಲ ಚಿತ್ರಗಿಂತಲೂ ಈ ಚಿತ್ರ ದೊಡ್ಡ ಹವಾ ಸೃಷ್ಟಿಸಿದೆ ಎಂದೇ ಹೇಳಬಹುದು. ಅಲ್ಲದೆ ಈ ಚಿತ್ರ ಸೆಟ್ಟೇರಿದಂದಿನಿಂದ ಇಂದಿನವರೆಗೂ ಕೂಡ ಈ ಚಿತ್ರಕ್ಕೆ ಅಭಿಮಾನಿಗಳ ಅಬ್ಬರದ ಪ್ರಚಾರ ಸಾಗುತ್ತಲೇ ಇದೆ. ಇದೀಗ ಡಿ ಬಾಸ್ ಅಭಿಮಾನಿಗಳ ಪ್ರಚಾರ ಎಷ್ಟರಮಟ್ಟಿಗೆ ಎಂದರೆ, ತಮಿಳು ನಾಡಿನ ರಸ್ತೆ ಬರೋಬ್ಬರಿ ಎರಡು ಕಿಲೋಮೀಟರ್ ನಷ್ಟು ರಸ್ತೆ ಟ್ರಾಫಿಕ್ ಜಾಮ್ ಆಗುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ.
ಮಾಧ್ಯಮದವರು ದರ್ಶನವರನ್ನು ಬ್ಯಾನ್ ಮಾಡಿದ ನಂತರ ಅಭಿಮಾನಿಗಳೇ ದರ್ಶನ್ ಅವರ ಕ್ರಾಂತಿ ಚಿತ್ರವನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಲು ಶುರು ಮಾಡಿದರು. ದರ್ಶನ್ ಅವರ ಯಾವುದೇ ಸುದ್ದಿ ಇರಲಿ ಅದು ಪಾಸಿಟಿವ್ ನೆಗೆಟಿವ್ ಇದ್ದರೂ ಪ್ರಸಾರ ಮಾಡಬಾರದಾಗಿ ಎಲ್ಲ ಮಾಧ್ಯಮಗಳು ನಿರ್ಧರಿಸಿದ್ದವು. ಇದರಿಂದ ರೊಚ್ಚಿಗೆದ್ದ ಡಿಬಾಸ್ ಅಭಿಮಾನಿಗಳು ಅವರ ಚಿತ್ರವನ್ನು ನಾವು ಪ್ರಚಾರ ಮಾಡುತ್ತೇವೆ, ನಮಗೆ ಯಾವುದೇ ಸುದ್ದಿ ವಾಹಿನಿ ಬೇಕಾಗಿಲ್ಲ ಎಂದು ಕಳೆದ ವರ್ಷದಿಂದಲೂ ಕೂಡ ಚಿತ್ರವನ್ನು ತಮ್ಮ ಚಿತ್ರ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಕ್ರಾಂತಿ ಚಿತ್ರ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಇನ್ನು ಚಿತ್ರ ಬಿಡುಗಡೆಯಾಗಲು ಕೆಲವೇ ದಿನಗಳು ಉಳಿದಿರುವಾಗ ಚಿತ್ರದ ಪ್ರಚಾರ ಇನ್ನಷ್ಟು ರಂಗೇರಿದೆ ಎಂದೇ ಹೇಳಬಹುದು. ಇದನ್ನು ಓದಿ..Kannada News: ಸೋತು ಸೋತು ಸುಣ್ಣವಾದರೂ, ರಶ್ಮಿಕಾ ಚಾಳಿ ಬಿಟ್ಟಿಲ್ಲ: ರಿಷಬ್ ಶೆಟ್ಟಿ ಗೆ ಟಾಂಗ್ ಕೊಟ್ಟು ಹೇಳಿದ್ದೇನು ಗೊತ್ತೇ? ರಿಷಬ್ ಗೆ ಶಾಕ್.
ಇತ್ತೀಚಿಗಷ್ಟೇ ಡಿ ಬಾಸ್ ಅಭಿಮಾನಿಗಳು ದರ್ಶನ್ ಅವರ ದೊಡ್ಡಮಟ್ಟದ ಪ್ರಚಾರ ನಡೆಸಿದರು. ಕ್ರಾಂತಿ ಚಿತ್ರದ ಪ್ರಮೋಷನ್ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರು. ಕಾರ್ಯಕ್ರಮವೆಂದರೆ ಅದೊಂದು ರೋಡ್ ಶೋ ಆಗಿತ್ತು. ಅತ್ತಿಬೆಲೆಯಲ್ಲಿರುವ ಡಿ ಬಾಸ್ ಅಭಿಮಾನಿಗಳ ಸಂಘದ ವತಿಯಿಂದಾಗಿ ಈ ಒಂದು ರ್ಯಾಲಿ ಆಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಸಾವಿರಾರು ಅಭಿಮಾನಿಗಳು ತಮ್ಮ ತಮ್ಮ ಬೈಕ್ ಏರಿ ರಸ್ತೆಗಿಳಿದಿದ್ದರು. ತಮಿಳುನಾಡಿಗೆ ಹೋಗುವ ರಸ್ತೆ ಇಡಿ ದರ್ಶನ್ ಅಭಿಮಾನಿಗಳ ಹವಾ ಜೋರಾಗಿತ್ತು. ಇದರಿಂದಾಗಿ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ತಮಿಳುನಾಡಿನ ಕಡೆಗೆ ಹೋಗುವ ರಸ್ತೆ ಫುಲ್ ಟ್ರಾಫಿಕ್ ಜಾಮ್ ಆಗಿದ್ದು, ಬರೋಬರಿ ಎರಡು ಕಿಲೋಮೀಟರ್ ನಷ್ಟು ಟ್ರಾಫಿಕ್ ಜನಸಂದಣಿ ಉಂಟಾಗಿದೆ. ಅಷ್ಟರಮಟ್ಟಿಗೆ ಡಿ ಬಾಸ್ ಅಭಿಮಾನಿಗಳು ಕ್ರಾಂತಿ ಚಿತ್ರದ ಪ್ರಚಾರ ಕಾರ್ಯದಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ಇದನ್ನು ಓದಿ.. Kannada News: ತೆಲುಗಿನಲ್ಲಿ ಅಬ್ಬರಿಸಿ ಬೊಬ್ಬೆರದ ಕನ್ನಡತಿ, ನೇರವಾಗಿ ಮಹೇಶ್ ಬಾಬು ಸಿನೆಮಾಗೆ ಸಮಯವಿಲ್ಲ ಎಂದ ಚೆಲುವೆ. ಯಾರು ಗೊತ್ತೇ? ಮಹೇಶ್ ಗೆ ಶಾಕ್.
Comments are closed.