Cricket News: ಇರಲಾರದೆ ಇರುವೆ ಬಿಟ್ಕೊಂಡ ರಾಹುಲ್: ಫಾರ್ಮ್ ಕಳೆದುಕೊಂಡಿದ್ದೀರಾ ಎಂದಿದ್ದಕ್ಕೆ ರಾಹುಲ್ ನೀಡಿದ ಬೇಜವಾಬ್ದಾರಿ ಉತ್ತರ ಏನು ಗೊತ್ತೇ??
Cricket News: ಇತ್ತೀಚಿಗಷ್ಟೇ ಬಾಂಗ್ಲಾ ಪ್ರವಾಸದಿಂದ ಟೀಮ್ ಇಂಡಿಯ (India vs Bangladesh) ತವರಿಗೆ ಮರಳಿದ್ದು, ಇದೀಗ ವಿಶ್ರಾಂತಿ ಪಡೆದುಕೊಳ್ಳುತ್ತಿದೆ. ಇತ್ತಕಡೆ ಬಿಸಿಸಿಐಗೆ (BCCI) ತಮ್ಮ ಆಟಗಾರರು ಫಾರ್ಮ್ ಕಳೆದುಕೊಳ್ಳುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡ ಆಟಗಾರರೇ ಪಂದ್ಯದ ವೇಳೆ ಕಳಪೆ ಪ್ರದರ್ಶನ ತೋರುತ್ತಿರುವುದು ಮಂಡಳಿಗೆ ಇಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಮುಂದಿನ ಪಂದ್ಯಗಳಲ್ಲಿ ಈ ಆಟಗಾರರು ಆಡುತ್ತಾರೋ ಇಲ್ಲವೋ ಎನ್ನುವ ಅನುಮಾನ ಬಿಸಿಸಿಐಗೆ ಶುರುವಾಗಿದೆ. ಇದಲ್ಲದೆ ಕನ್ನಡಿಗ ಕೆ ಎಲ್ ರಾಹುಲ್ (K L Rahul) ಕೂಡ ಕಳೆದ ಕೆಲವು ಪಂದ್ಯಗಳಿಂದ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಹಲವಾರು ಪಂದ್ಯಗಳಿಂದ ಅವರು ಅತ್ಯಂತ ನೀರಸ ಪ್ರದರ್ಶನ ತೋರುತ್ತಿದ್ದಾರೆ. ಈ ಕುರಿತಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಕೆ ಎಲ್ ರಾಹುಲ್ ನೀಡಿರುವ ಹೇಳಿಕೆ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಬಾಂಗ್ಲಾ ಪ್ರವಾಸದ ವೇಳೆ ರೋಹಿತ್ ಶರ್ಮ (Rohit Sharma) ಅವರು ಇಂಜುರಿಗೆ ಒಳಗಾದಾಗ ಅವರ ಬದಲಿಗೆ ಕೆ ಎಲ್ ರಾಹುಲ್ ರವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇಷ್ಟು ಉತ್ತಮ ಸ್ಥಾನವನ್ನು ನೀಡಿದರು ಕೂಡ ಕೆ ಎಲ್ ರಾಹುಲ್ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಅತ್ಯಂತ ಕೆಟ್ಟ ಪ್ರದರ್ಶನವನ್ನು ತೋರಿದರು. ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಬಾಂಗ್ಲಾ ವಿರುದ್ಧ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಆಡಿದ ರಾಹುಲ್ ಗಳಿಸಿದ್ದು ಕೇವಲ 57 ರನ್ ಮಾತ್ರ. ಅವರ ಬ್ಯಾಟಿಂಗ್ ಕೆಲಸ ಮಾಡಲಿಲ್ಲ. ಒಳ್ಳೆಯ ರನ್ ಕಲೆ ಹಾಕುವ ಮಾತು ಒಂದು ಕಡೆ ಇರಲಿ ಅವರು ಹೆಚ್ಚು ಹೊತ್ತು ಮೈದಾನದಲ್ಲಿ ಆಡಲು ಕೂಡ ಸಾಧ್ಯವಾಗದೆ ಔಟ್ ಆಗುತ್ತಿದ್ದರು. ಇನ್ನು ಬಾಂಗ್ಲಾ ಪ್ರವಾಸ ಮುಗಿಸಿ ಟೀಮ್ ಇಂಡಿಯಾ (Team India) ವಿಶ್ರಾಂತಿಯಲ್ಲಿದೆ. ಇದೀಗ ಕೆ ಎಲ್ ರಾಹುಲ್ ರವರನ್ನು ಮಾಧ್ಯಮದವರು ಸಂದರ್ಶಿಸಿದ್ದು, ರಾಹುಲ್ ಫಾರ್ಮ್ ಕಳೆದುಕೊಂಡಿರುವುದರ ಕುರಿತು ಪ್ರಶ್ನಿಸಿದ್ದಾರೆ. ಈ ಕುರಿತಾಗಿ ಉತ್ತರಿಸಿರುವ ರಾಹುಲ್ ಅವರ ಪ್ರತಿಕ್ರಿಯೆಗೆ ನೆಟ್ಟಿಗರು ಸಾಕಷ್ಟು ಕೋಪಗೊಂಡಿದ್ದಾರೆ. ಇದನ್ನು ಓದಿ.. IPL 2023: ಚಿಲ್ಲರೆ ಹಣ ಕೊಟ್ಟು ಟಾಪ್ ಆಟಗಾರರನ್ನು ಖರೀದಿ ಮಾಡಿದ ಐಪಿಎಲ್ ತಂಡಗಳು. ಈ ಬಾರಿಯ ಹರಾಜಿನಲ್ಲಿ ಇವರೇ ಬೆಸ್ಟ್ ಡೀಲ್. ಯಾರ್ಯಾರು ಗೊತ್ತೇ??
ಮಾಧ್ಯಮದವರು ಕೆ ಎಲ್ ರಾಹುಲ್ ರವರನ್ನು ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದೀರಾ? ಕಳೆದುಕೊಂಡಿದ್ದರೆ ಅಂತದ್ದೇನಾಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೇರವಾಗಿ ರಾಹುಲ್ ಹೌದು ಎಂದು ಉತ್ತರಿಸಿದ್ದಾರೆ. ಕಳೆದ ಕೆಲವು ಪಂದ್ಯಗಳಿಂದ ನಾನು ಚೆನ್ನಾಗಿ ಆಡುತ್ತಿಲ್ಲ ಎನ್ನುವುದು ನನಗೆ ಗೊತ್ತಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಎಷ್ಟೇ ಪ್ರಯತ್ನ ಪಟ್ಟರು ಕೂಡ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ನನಗೂ ಬೇಸರವಿದೆ ಎಂದು ಅವರು ಹೇಳಿದ್ದಾರೆ. ಆದರೆ ಮೊದಲಿನಂತೆ ಆಡಲು ಏನು ಮಾಡಬೇಕು ನಾನು ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಸದ್ಯಕ್ಕೆ ನಾನು ಫಾರ್ಮ್ ಕಳೆದುಕೊಂಡಿರುವುದು ಹೌದು. ಆದರೆ ಇದು ಹೀಗೆ ಇರುವುದಿಲ್ಲ, ನಾನು ಇನ್ನೂ ಚೆನ್ನಾಗಿ ಆಡಬೇಕೆಂದರೆ ಟೈಮ್ ತೆಗೆದುಕೊಳ್ಳುತ್ತದೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ರಾಹುಲ್ ರವರ ಈ ಮಾತುಗಳಿಗೆ ಕ್ರಿಕೆಟ್ ಅಭಿಮಾನಿಗಳು ಕೆಂಡಮಂಡಲರಾಗಿದ್ದಾರೆ. ಕೈಲಾಗಲ್ಲ ಎಂದರೆ ಯಾಕೆ ಆಡುತ್ತೀರಿ, ಇನ್ನು ಎಷ್ಟು ಸಮಯ ಕಾಲಾವಕಾಶ ನೀಡಬೇಕು. ಇದೇ ರೀತಿ ಹೇಳಿ ಸಾಕಷ್ಟು ಪಂದ್ಯಗಳನ್ನು ಹಾಳು ಮಾಡಿದ್ದೀರಿ ಎಂದೆಲ್ಲ ನೆಟ್ಟಿಗರು ರಾಹುಲ್ ರವರನ್ನ ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಇದನ್ನು ಓದಿ..Cricket News: ಕ್ರಿಕೆಟ್ ನಲ್ಲಿ ಉಪಯೋಗಕ್ಕೆ ಬಾರದೆ ಈಗ ಮದುವೆಯಾಗುತ್ತಿರುವ ರಾಹುಲ್ ರವರು, ಆಥಿಯಾ ಶೆಟ್ಟಿ ರವರಿಗಿಂತ ಎಷ್ಟು ದೊಡ್ಡವರು ಗೊತ್ತೇ? ವಯಸ್ಸಿನ ಅಂತರ ಎಷ್ಟು ಗೊತ್ತೆ??
Comments are closed.