Kannada News: ಡಿ ಬಾಸ್ ಗೆ ಚಪ್ಪಲ್ಲಿ ಎಸೆದಿದ್ದ ಆರೋಪಿಗಳ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಇವರಿಗೆ ಆದದ್ದು ನೋಡಿದರೆ ನಡುಗಿ ಹೋಗ್ತೀರಾ.

Kannada News: ಕೆಲವು ದಿನಗಳ ಹಿಂದೆ ದರ್ಶನ್ (Darshan) ರವರು ಹೊಸಪೇಟೆಯಲ್ಲಿ ಕ್ರಾಂತಿ (Kranthi) ಚಿತ್ರದ ಹಾಡನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅವರ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಪ್ರಕರಣ ನಡೆದು ವಾರದ ಮೇಲಾದರೂ ಕೂಡ ಈ ದುಷ್ಕೃತ್ಯ ನಡೆಸಿದವನು ಯಾರು ಎನ್ನುವುದು ತಿಳಿದುಬಂದಿರಲಿಲ್ಲ. ಆತನ ಹುಡುಕಾಟಕ್ಕಾಗಿ ಶೋಧ ಕಾರ್ಯ ನಡೆದಿತ್ತು. ಆದರೆ ಇದೀಗ ಈ ಪ್ರಕರಣದ ಅಡಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಈ ಮೂವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಇಷ್ಟು ಮಾತ್ರವಲ್ಲದೆ ಈ ರೀತಿ ದುಷ್ಕೃತ್ಯ ನಡೆಸಿದಕ್ಕಾಗಿ ಈ ಮೂವರು ಆರೋಪಿಗಳ ಪರಿಸ್ಥಿತಿ ಏನಾಗಿದೆ ಗೊತ್ತಾ?

ಹೊಸಪೇಟೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತಿದ್ದ ದರ್ಶನ್ ಅವರಿಗೆ ಚಪ್ಪಲಿ ಎಸೆದ ಪ್ರಕರಣ ನಡೆದಿತ್ತು. ಇದಾದ ಮೇಲೂ ದರ್ಶನ್ ರವರು ಪರವಾಗಿಲ್ಲ ಬಿಡು ಚಿನ್ನ, ನಾನು ಇಂಥದ್ದನ್ನೆಲ್ಲ ನೋಡಿದ್ದೇನೆ ಎಂದು ಸಮಾಧಾನವಾಗಿಯೇ ಪ್ರತಿಕ್ರಿಸಿದರು. ಆದರೆ ದರ್ಶನ್ ಬಿಟ್ಟರು ಅವರ ಅಭಿಮಾನಿಗಳು ಬಿಡಬೇಕಲ್ಲ. ದರ್ಶನ್ ರವರಿಗೆ ಅಪಮಾನ ಮಾಡಿದ್ದಕ್ಕಾಗಿ ರೊಚ್ಚಿಗೆದ್ದಿದ್ದರು. ಒಂದು ಕಡೆ ಬೇಸರ ಮತ್ತೊಂದು ಕಡೆ ಕೋಪ ಎರಡು. ಈ ಪ್ರಕರಣಕ್ಕೆ ಸಂಬಂಧಿಸಿ ಚಪ್ಪಲಿ ಎಸೆದವನಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದರು. ಇದಲ್ಲದೆ ಹೊಸಪೇಟೆಯಲ್ಲಿ ಈ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರು ಈ ಪ್ರಕರಣದ ಕುರಿತಾಗಿ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಶೋಧ ಶುರು ಮಾಡಿದ್ದರು. ಇದನ್ನು ಓದಿ..Kannada News: ಹೊಸದಾಗಿ ಬರುತ್ತಿರುವ ತ್ರಿಪುರ ಸುಂದರಿ ಧಾರಾವಾಹಿಯ ಕತೆ ಏನು ಗೊತ್ತೇ?? ದಿವ್ಯ ಸುರೇಶ್ ಪಾತ್ರ ಕೇಳಿದರೆ ತಲೆ ತಿರುಗುತ್ತದೆ. ಭೇಷ್ ಅಂತೀರಾ.

kannada news darshan 5 | Kannada News: ಡಿ ಬಾಸ್ ಗೆ ಚಪ್ಪಲ್ಲಿ ಎಸೆದಿದ್ದ ಆರೋಪಿಗಳ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಇವರಿಗೆ ಆದದ್ದು ನೋಡಿದರೆ ನಡುಗಿ ಹೋಗ್ತೀರಾ.
Kannada News: ಡಿ ಬಾಸ್ ಗೆ ಚಪ್ಪಲ್ಲಿ ಎಸೆದಿದ್ದ ಆರೋಪಿಗಳ ಪರಿಸ್ಥಿತಿ ಈಗ ಏನಾಗಿದೆ ಗೊತ್ತೇ?? ಇವರಿಗೆ ಆದದ್ದು ನೋಡಿದರೆ ನಡುಗಿ ಹೋಗ್ತೀರಾ. 2

ತನಿಖೆಯನ್ನು ಚುರುಕುಗೊಳಿಸಿದ ಹೊಸಪೇಟೆ ನಗರ ಪೊಲೀಸ್ ಠಾಣೆಯ ತಂಡ ಇದೀಗ ಈ ಪ್ರಕರಣದ ಅಡಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತಾಗಿ ಪೊಲೀಸ್ ಠಾಣೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಇನ್ನು ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಅವರ ಪರಿಸ್ಥಿತಿ ನಿಜಕ್ಕೂ ಮಾಡಿದ ತಪ್ಪಿಗೆ ದಂಡ ತೆರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇಂತಹದೊಂದು ಕೃತ್ಯ ನಡೆಸಿದ್ದಕ್ಕಾಗಿ ಅವರಿಗೆ ಪೊಲೀಸರು ಚೆನ್ನಾಗಿ ಲಾಟಿಯ ರುಚಿ ತೋರಿಸುತ್ತಿದ್ದಾರೆ. ಇದು ಮಾತ್ರವಲ್ಲ ಇವರಿಗೆ ಜಾಮೀನು ಸಿಗುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ. ಅಲ್ಲದೆ ಇವರ ಪರವಾಗಿ ಕೋರ್ಟ್ ನಲ್ಲಿ ವಾದಿಸಲು ಸಹ ಯಾವ ವಕೀಲರೂ ಕೂಡ ಮುಂದೆ ಬರುವ ಮನಸ್ಸು ಮಾಡಿಲ್ಲ. ಮಾಡಿದ ತಪ್ಪಿಗೆ ಇದೀಗ ಆರೋಪಿಗಳು ತಕ್ಕ ಶಿಕ್ಷೆಯನ್ನೇ ಅನುಭವಿಸುತ್ತಿದ್ದಾರೆ. ಇದನ್ನು ಓದಿ..Kannada News: ಹೋಗುತ್ತಿದ್ದ ಕಾರ್ ಅನ್ನು ದಿಡೀರ್ ಎಂದು ನಿಲ್ಲಿಸಿ, ಹೆಣ್ಣುಮಕ್ಕಳಿಗೆ ಕೈ ಮುಗಿದು ದರ್ಶನ್ ಹೇಳಿದ್ದೇನು ಗೊತ್ತೇ??

Comments are closed.