Cricket News: ಮದುವೆಯಾದ ಮೇಲೆ ಕುಲಾಯಿಸಿದ ರಾಹುಲ್ ಅದೃಷ್ಟ; ತಂಡದಲ್ಲಿ ಏನೋ ಪ್ರಾಯೋಜನಕ್ಕೆ ಬಾರದೆ ಇದ್ದರೂ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ?
Cricket News: ಕನ್ನಡಿಗ ಕ್ರಿಕೆಟರ್ ಕೆ ಎಲ್ ರಾಹುಲ್ (K L Rahul) ಅವರ ಆಟದ ಬಗ್ಗೆ ಇತ್ತೀಚಿಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ಕಳೆದ ಹಲವಾರು ಪಂದ್ಯಗಳಿಂದ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಕಳೆದ ಹಲವು ಪಂದ್ಯಗಳಿಂದಲೂ ಅವರು ಉತ್ತಮ ಬ್ಯಾಟಿಂಗ್ ಮಾಡಿ ಅತ್ಯುತ್ತಮ ರನ್ ಗಳ ಮೊತ್ತ ಸಂಗ್ರಹಿಸಲು ವಿಫಲರಾಗುತ್ತಿದ್ದಾರೆ. ಪದೇಪದೇ ತಂಡವು ಅವರ ಮೇಲೆ ಭರವಸೆ ಇಟ್ಟುಕೊಂಡು ಅವಕಾಶ ನೀಡಿದರು ಕೂಡ ಅವರು ಆ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ಮತ್ತೆ ಬ್ಯಾಟಿಂಗ್ನಲ್ಲಿ ಎಡವುತ್ತಿದ್ದಾರೆ. ಈ ಕುರಿತಾಗಿ ಹಲವಾರು ದಿನಗಳಿಂದ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು ಸೇರಿದಂತೆ ಸಾಕಷ್ಟು ಜನರು ಕೆಎಲ್ ರಾಹುಲ್ ಅವರ ಆಟದ ವೈಖರಿಯ ಬಗ್ಗೆ ಟೀಕಿಸುತ್ತಿದ್ದಾರೆ. ಇದೀಗ ಈ ಕುರಿತಾಗಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ (Border Gavaskar Trophy) ಮೊದಲ ಪಂದ್ಯದಲ್ಲಿ ಮತ್ತೆ ರಾಹುಲ್ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಕೇವಲ 20 ರನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (World Test Championship) ಫೈನಲ್ ಸ್ಥಾನ ಗಳಿಸಲು ಭಾರತ ತಂಡಕ್ಕೆ ಈ ಟೆಸ್ಟ್ ಸರಣಿ ಅತ್ಯಂತ ಮಹತ್ವದ್ದಾಗಿದೆ. ಅಂಕಪಟ್ಟಿ ಹಾಗೂ ಸ್ಥಾನದ ಮೇಲೆ ಈ ಟೆಸ್ಟ್ ಸರಣಿ ಪ್ರಭಾವ ಬೀರುತ್ತದೆ. ಕಳಪೆ ಫಾರ್ಮ್ ನಲ್ಲಿರುವ ಕೆ ಎಲ್ ರಾಹುಲ್ ಸ್ಥಾನಕ್ಕೆ ಅತ್ಯುತ್ತಮ ಲಯದಲ್ಲಿರುವ ಶುಭಮನ್ ಗಿಲ್ (Shubhman Gill) ಅವರಿಗೆ ಸ್ಥಾನ ನೀಡಬೇಕಿತ್ತು ಎನ್ನುವ ಆರೋಪಗಳು ಕೇಳಿ ಬಂದಿವೆ. ಇದೀಗ ಈ ಕುರಿತಾಗಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ (Vikram Rathour) ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ..Cricket News: ತಾನು ಯಶಸ್ಸು ಗೊಳ್ಳುತ್ತಿಲ್ಲ ಎಂದು ಅರಿತ ರಾಹುಲ್, ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಮದುವೆಯಾದ ಮೇಲೆ ಮೊದಲ ಗಟ್ಟಿ ನಿರ್ಧಾರ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕೆ ಎಲ್ ರಾಹುಲ್ ಅವರು ಕಳೆದ ಹಲವು ಪಂದ್ಯಗಳಿಂದ ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಅವರು ಶತಕ ಮತ್ತು ಅರ್ಧಶತಕದ ದಾಖಲೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಅವರು ಇಷ್ಟು ಬೇಗ ಟೆಸ್ಟ್ ಸರಣಿಯಿಂದ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ನನಗೆ ಅನಿಸುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದ್ದರು. ಆನಂತರ ಕಳೆದ ಹಲವಾರು ಪಂದ್ಯಗಳಲ್ಲಿ ಅತ್ಯಂತ ಕಡಿಮೆ ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಗುತ್ತಿದ್ದು, ಅವರು ಫಾರ್ಮ್ ಕಳೆದುಕೊಂಡಿದ್ದಾರೆ ಎನ್ನುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿವೆ. ಇದನ್ನು ಓದಿ..Cricket News: ಆಡಿದ್ದು ಕೆಲವೇ ಪಂದ್ಯ ಆದರೂ ವೆಂಕಟೇಶ್ ಪಟಾಯಿಸಿರುವ ನಟಿಯನ್ನು ನೋಡಿದರೆ, ದಿಡೀರ್ ಎಂದು ಪಲ್ಟಿ ಹೊಡೆಯುತ್ತೀರಿ. ಅಪ್ಸರೆ ನಟಿ ಯಾರು ಗೊತ್ತೇ?
Comments are closed.