Kannada News: ನಟಿ ರಾಕುಲ್ ರವರ ಕುರಿತು ಮತ್ತೊಂದು ದೇಶ ಅಲ್ಲಾಡುವಂತಹ ಸುದ್ದಿ; ಮೇಲಿಂದ ಕೆಳಗಿನವರೆಗೂ ಬಳಸಿ ಕೈ ಬಿಟ್ಟು ಮೋಸ. ಏನಾಗಿದೆ ಗೊತ್ತೇ??
Kannada News: ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು, ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಒಂದೆರಡು ಚಿತ್ರಗಳಲ್ಲಿ ಹೇಗೋ ಅವಕಾಶ ಗಿಟ್ಟಿಸಿಕೊಂಡು ನಟಿಸಿಬಿಡಬಹುದು. ಆದರೆ ಚಿತ್ರರಂಗದಲ್ಲೇ ನೆಲೆಯೂರುವುದು ಯಾರಿಗೂ ಕೂಡ ಅಷ್ಟು ಸಲೀಸಲ್ಲ. ಅದರಲ್ಲೂ ನಟಿಯರಿಗೆ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪೂ ಮೂಡಿಸಿ ಸುಧೀರ್ಘವಾಗಿ ಅವಕಾಶಗಳನ್ನು ಪಡೆದುಕೊಂಡು ಹೆಸರು ಮಾಡುವುದು ಅಷ್ಟೇನೂ ಸುಲಭದ ವಿಚಾರವಲ್ಲ. ಅವರು ನಟನಾ ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತೆರೆಯ ಮುಂದೆ ಹಾಗೂ ತೆರೆಯ ಹಿಂದೆ ಅನೇಕ ಏರುಪೇರು, ಸಂಕಷ್ಟಗಳು, ಸವಾಲುಗಳನ್ನು ಎದುರಿಸಿಕೊಂಡೆ ಮುನ್ನುಗಬೇಕಾಗುತ್ತದೆ.
ಮೂಲತಃ ದಕ್ಷಿಣ ಭಾರತದವರಾದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಸದ್ಯ ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹಲವಾರು ಚಿತ್ರಗಳಲ್ಲಿ ನಾಯಕನಟಿಯಾಗಿ ಗುರುತಿಸಿಕೊಂಡಿರುವ ಅವರು ಸದ್ಯ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ ತಮಿಳು, ತೆಲುಗು ಹಲವಾರು ಸೂಪರ್ ಸ್ಟಾರ್ ನಟರ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಯಾವುದೇ ಚಿತ್ರರಂಗದ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ಇದುವರೆಗೆ ಸಾಕಷ್ಟು ಸವಾಲುಗಳು ಅಪಮಾನವನ್ನು ಎದುರಿಸಿದ್ದಾರೆ. ಇತ್ತೀಚಿಗೆ ನಟಿ ರಾಕುಲ್ ಸಂದರ್ಶನ ಒಂದರಲ್ಲಿ ತಮ್ಮ ಚಿತ್ರರಂಗದ ಜರ್ನಿಯ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನು ಓದಿ..Shrirasthu Shubhamasthu: ದತ್ತಣ್ಣ ನಿಗೆ ಬಂದೆ ಬಿಡ್ತು ಪ್ರೇಮ ಪತ್ರ: ಈ ವಯಸಿನಲ್ಲಿ ಬರೆದಿರುವುದು ಯಾರು ಗೊತ್ತೇ?? ಹುಡುಕಲು ಹೊರಡುತ್ತಾರೆ ದತ್ತಣ್ಣ??
ಇದೆ ವೇಳೆ ಅವರು ತಾವು ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಆರಂಭದಲ್ಲಿ ಎದುರಿಸಿದ ಅಪಮಾನಗಳು ಹಾಗೂ ಕೆಲವು ನಿರ್ದೇಶಕ, ನಿರ್ಮಾಪಕರು ತಮ್ಮೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ಆಡಿಶನ್ ಕೊಡಲು ಹೋದಾಗ ಕಾರಿನಲ್ಲೇ ತಾವು ಬಟ್ಟೆ ಬದಲಿಸುತ್ತಿದ್ದರ ಕುರಿತಾಗಿ ಅವರು ತಿಳಿಸಿದ್ದಾರೆ. ಎಷ್ಟೋ ಸಲ ಆಡಿಷನ್ನಲ್ಲಿ ತಮ್ಮನ್ನು ಆಯ್ಕೆ ಮಾಡಿ ಆನಂತರ ಕೊನೆಗೆ ಮತ್ತೊಬ್ಬರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿತ್ತಂತೆ. ಈ ಮೂಲಕ ರಾಕುಲ್ ಅವರಿಂದ ಅವಕಾಶಗಳು ಕೈತಪ್ಪಿ ಹೋಗಿವೆ. ಅಲ್ಲದೆ ಈ ಮೊದಲು ಒಮ್ಮೆ ಅವರಿಗೆ ಟಾಲಿವುಡ್ನ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದಂತೆ, ಆದರೆ ಕೊನೆಯ ಕ್ಷಣದಲ್ಲಿ ರಾಕುಲ್ ಬದಲಿಗೆ ನಟಿ ಕಾಜಲ್ ಅಗರ್ವಾಲ್ ಅವರಿಗೆ ಆ ಪಾತ್ರವನ್ನು ನೀಡಲಾಯಿತು. ಈ ರೀತಿಯಾಗಿ ತಮ್ಮ ನಟನಾ ವೃತ್ತಿ ಜೀವನದ ಸಾಕಷ್ಟು ಅನುಭವಗಳನ್ನು ನಟಿ ರಾಕುಲ್ ಹಂಚಿಕೊಂಡಿದ್ದಾರೆ. ಇದನ್ನು ಓದಿ..Kannada News: ಮದುವೆಗೆ ದೊಡ್ಡವರು ಬಂದಿದ್ದಾರೆ ಎನ್ನುವುದನ್ನು ನೋಡದೆ, ಎಲ್ಲ ಬಿಟ್ಟು ಕಿಯರ ಹಾಗೂ ಸಿದ್ದಾರ್ಥ್ ಮಾಡಿದ್ದೇನು ಗೊತ್ತೇ?? ಲೀಕ್ ಆದ ವಿಡಿಯೋ ನೋಡಿ ಶಾಕ್ ಆದ ನೆಟ್ಟಿಗರು.
Comments are closed.