Cricket News: ಸೂರ್ಯಕುಮಾರ್ ಯಾದವ್ ರವರಿಗೆ ಆಸ್ಟ್ರೇಲಿಯಾ ಲೀಗ್ ನಲ್ಲಿ ಅವಕಾಶ ಸಿಗಲ್ಲ ಎಂದ ಮ್ಯಾಕ್ಸ್ ವೆಲ್. ಕಾರಣ ಏನು ಅಂತೇ ಗೊತ್ತೇ?

Cricket News: ಭಾರತ ತಂಡದ ಸೆನ್ಸೇಷನಲ್ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರು 360 ಡಿಗ್ರಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನ್ಯೂಜಿಲೆಂಡ್ ಸೀರೀಸ್ ನಲ್ಲಿ ಕೇವಲ 51 ಎಸೆತಗಳಲ್ಲಿ ಬರೋಬ್ಬರಿ 111 ರನ್ಸ್ ಚಚ್ಚಿ, ವಿಶ್ವದ ಎಲ್ಲಾ ಕ್ರಿಕೆಟಿಗರು ತಮ್ಮ ಕಡೆಗೆ ನೋಡುವ ಹಾಗೆ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಅಂತಾರಾಷ್ಟ್ರೀಯ ಅತ್ಯುತ್ತಮ ಆಟಗಾರರು ಸಹ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಸ್ಟ್ರೇಲಿಯಾ ಆಟಗಾರ, ನಮ್ಮ ಆರ್ಸಿಬಿ (RCB) ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ನ್ಯೂಜಿಲೆಂಡ್ ಇನ್ನಿಂಗ್ಸ್ ನೋಡಿ ಶಾಕ್ ಆಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರು ಹೇಳಿದ್ದು ಹೀಗೆ, “ಈ ಮ್ಯಾಚ್ ಯಾವಾಗ ನಡೆದದ್ದು ಎಂದು ನನಗೆ ಗೊತ್ತಿಲ್ಲ, ಮರುದಿನ ನಾನು ಸೂರ್ಯಕುಮಾರ್ ಯಾದವ್ ಅವರ ಆಟದ ಹೈಲೈಟ್ಸ್ ಪೂರ್ತಿಯಾಗಿ ನೋಡಿದೆ. ನನಗೆ ಬಹಳ ಆಶ್ಚರ್ಯ ಉಂಟಾಯಿತು. ಬೇರೆ ಆಟಗಾರರಿಗಿಂತ ಸೂರ್ಯಕುಮಾರ್ ಯಾದವ್ ಅವರು ಆಡುವ ಶೈಲಿ ಬಹಳ ವಿಭಿನ್ನವಾಗಿದೆ. ಇದನ್ನು ನೋಡುವುದು ಬಹಳ ಕಠಿಣವಾಗಿತ್ತು. ಇವರಿಗೆ ಸರಿಸಮವಾಗಿ ಆಡಲು ಬೇರೆ ಯಾವುದೇ ಆಟಗಾರನಿಂದಲೂ ಸಾಧ್ಯವಿಲ್ಲ..” ಎಂದು ಹೇಳಿದ್ದಾರೆ ಗ್ಲೆನ್ ಮ್ಯಾಕ್ಸ್ವೆಲ್.

cricket news maxwell about surya | Cricket News: ಸೂರ್ಯಕುಮಾರ್ ಯಾದವ್ ರವರಿಗೆ ಆಸ್ಟ್ರೇಲಿಯಾ ಲೀಗ್ ನಲ್ಲಿ ಅವಕಾಶ ಸಿಗಲ್ಲ ಎಂದ ಮ್ಯಾಕ್ಸ್ ವೆಲ್. ಕಾರಣ ಏನು ಅಂತೇ ಗೊತ್ತೇ?
Cricket News: ಸೂರ್ಯಕುಮಾರ್ ಯಾದವ್ ರವರಿಗೆ ಆಸ್ಟ್ರೇಲಿಯಾ ಲೀಗ್ ನಲ್ಲಿ ಅವಕಾಶ ಸಿಗಲ್ಲ ಎಂದ ಮ್ಯಾಕ್ಸ್ ವೆಲ್. ಕಾರಣ ಏನು ಅಂತೇ ಗೊತ್ತೇ? 2

ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಬಿಎಲ್ (BBL) ನಲ್ಲಿ ಸೂರ್ಯಕುಮಾರ್ ಅವರನ್ನು ಕರೆತರುತ್ತೀರಾ ಎಂದು ಕೇಳಿದ್ದಕ್ಕೆ, ತಮಾಷೆಯ ಉತ್ತರ ನೀಡಿದ್ದಾರೆ. “ಅವರಿಗೆ ಕೊಡುವಷ್ಟು ಹಣ ನಮ್ಮ ಹತ್ತಿರ ಇಲ್ಲ. ಸೂರ್ಯಕುಮಾರ್ ಯಾದವ್ ಅವರು ಬಿಬಿಎಲ್ ಆಡಲು ಚಾನ್ಸ್ ಇಲ್ಲವೇ ಇಲ್ಲ. ಅವರನ್ನು ಕರೆತಂದು ಅವಕಾಶ ಕೊಡಬೇಕೆಂದರೆ, ನಮ್ಮ ಆಸ್ಟ್ರೇಲಿಯಾದ (Australia) ಎಲ್ಲಾ ಆಟಗಾರರು ಮತ್ತು ಗುತ್ತಿಗೆ ಆಟಗಾರರಾದ ನಾವು ಮನೆಗೆ ಹೋಗಬೇಕಾಗುತ್ತದೆ..” ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್ವೆಲ್. ನಿಜಕ್ಕೂ ಭಾರತದ ಆಟಗಾರರಿಗೆ ಬೇರೆ ದೇಶಗಳ ಲೀಗ್ ಗಳಲ್ಲಿ ಆಡಲು ಅನುಮತಿ. ನಮ್ಮ ದೇಶದ ಕ್ರಿಕೆಟ್ ಗೆ ಮತ್ತು ಐಪಿಎಲ್ ಗೆ ವಿದಾಯ ಹೇಳಿದ ನಂತರ ಅವುಗಳನ್ನು ಆಡಬಹುದು.

Comments are closed.