Cricket News: ಕೊನೆಗೂ ಗಟ್ಟಿ ನಿರ್ಧಾರ ಮಾಡಿದ ಬಿಸಿಸಿಐ: ರಾಹುಲ್ ಗೆ ಶಾಕ್ ಮೇಲೆ ಶಾಕ್. ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ ರಾಹುಲ್ ಪರಿಸ್ಥಿತಿ ಏನಾಗಿದೆ ಗೊತ್ತೇ?
Cricket News: ಸತತ ವೈಫಲ್ಯ ಕಾಣುತ್ತಿರುವ ಕೆಎಲ್ ರಾಹುಲ್ ಕುರಿತಾಗಿ ನಿರಂತರವಾಗಿ ಟೀಕೆಗಳು ಕೇಳಿ ಬರುತ್ತಲೇ ಇದೆ. ಪದೇ ಪದೇ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲುತ್ತಿರುವ ರಾಹುಲ್ ಸೋಲಿನ ಹೊರತಾಗಿ ಟೀಮ್ ಇಂಡಿಯಾಗೆ ಮತ್ತೇನು ಬಳುವಳಿ ನೀಡುತ್ತಿಲ್ಲ. ತಂಡ ಹಾಗೂ ಆಯ್ಕೆ ಸಮಿತಿ ನಿರಂತರವಾಗಿ ರಾಹುಲ್ ಅವರನ್ನು ಉತ್ತೇಜಿಸುತ್ತದೆ. ಅತ್ಯಂತ ಕಳಪೆ ಪ್ರದರ್ಶನ ನೀಡಿದರು ಕೂಡ ಮುಂದಿನ ಪಂದ್ಯಗಳಿಗೆ ಉತ್ತಮ ಸ್ಥಾನ ನೀಡಿ ಅವರಿಗೆ ಪದೇ ಪದೇ ಅವಕಾಶ ನೀಡಲಾಗುತ್ತಿದೆ. ಆದರೂ ರಾಹುಲ್ ಮಾತ್ರ ಗೆಲುವಿನ ನಗೆ ಬೀರುತ್ತಿಲ್ಲ. ಮತ್ತೆ ಮತ್ತೆ ಅವಕಾಶ ನೀಡಿ ನಿರಾಶರಾಗಿರುವ ಬಿಸಿಸಿಐ ಇದೀಗ ಕೆ ಎಲ್ ರಾಹುಲ್ ಗೆ ತಕ್ಕ ಪಾಠ ಕಲಿಸುವ ನಿರ್ಧಾರವನ್ನು ತೆಗೆದುಕೊಂಡಂತೆ ಕಾಣುತ್ತಿದೆ.
ಸತತ ವೈಫಲ್ಯ ಎದುರಿಸುತ್ತಿರುವ ರಾಹುಲ್ ಗೆ ಪದೇಪದೇ ಅವಕಾಶ ನೀಡಲಾಗುತ್ತಿದ್ದು, ಈ ಕುರಿತಾಗಿ ಕ್ರಿಕೆಟ್ ಅಭಿಮಾನಿಗಳು ನಿರಂತರವಾಗಿ ಟೀಕಿಸುತ್ತ ಬಿಸಿಸಿಐ ನಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಹೀಗಿದ್ದು ಕೂಡ ಬಿಸಿಸಿಐ ರಾಹುಲ್ ಅವರಿಗೆ ಉಪನಾಯಕನ ಸ್ಥಾನ ನೀಡಿತ್ತು. ಜೊತೆಗೆ ತಂಡದ ಇತರ ಆಟಗಾರರು ಸಹ ರಾಹುಲ್ ಅವರನ್ನು ಬೆಂಬಲಿಸುತ್ತ ಬಂದಿದ್ದರು. ಆದರೆ ನಿರಂತರವಾಗಿ ಅವಕಾಶಗಳನ್ನು ನೀಡುತ್ತಾ ಬಂದರು ರಾಹುಲ್ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ಇದೀಗ ಬಿಸಿಸಿಐಗೆ ಅರ್ಥವಾದಂತಿದೆ. ಇದೇ ಕಾರಣಕ್ಕಾಗಿ ರಾಹುಲ್ ಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ. ಇನ್ನು ಮುಂದೆಯಾದರೂ ರಾಹುಲ್ ತಿದ್ದುಕೊಂಡು ಅತ್ಯುತ್ತಮ ಪ್ರದರ್ಶನ ತೋರಲಿ ಎನ್ನುವುದು ಮಂಡಳಿಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Cricket News: ವಿವಾದಾತ್ಮಕ ಔಟ್ ನಲ್ಲಿ ವಿರಾಟ್ ಕೊಹ್ಲಿ ಗೆ ನಿಜಕ್ಕೂ ಮೋಸವಾಯ್ತಾ? ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತೇ? ಗೊತ್ತಿಲ್ಲದೇ ಮಾತನಾಡಬೇಡಿ.
ಕಳೆದ ಭಾನುವಾರ ದೆಹಲಿ ಟೆಸ್ಟ್ ಮ್ಯಾಚ್ ಗೆದ್ದ ಬಳಿಕ ಟೀಮ್ ಇಂಡಿಯಾ ಉಳಿದ ಎರಡು ಟೆಸ್ಟ್ ಮ್ಯಾಚ್ ಗಳಿಗೆ ತಯಾರಿ ನಡೆಸಿದೆ. ಈಗಾಗಲೇ ಈ ಎರಡು ಪಂದ್ಯಗಳಿಗೆ ಆಟಗಾರರನ್ನು ಅಂತಿಮಗೊಳಿಸಲಾಗಿದ್ದು, ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಸತತ ವೈಫಲ್ಯ ಕಾಣುತ್ತಾ ತಮ್ಮ ಫಾರ್ಮ್ ಕಳೆದುಕೊಂಡಿರುವ ಕೆ ಎಲ್ ರಾಹುಲ್ ಅವರನ್ನು ಎರಡು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಬಿಸಿಸಿಐ ನಿರ್ಧಾರದ ಕುರಿತಾಗಿ ಮತ್ತೆ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರಿಂದ ತೀವ್ರ ಖಂಡನೇ ವ್ಯಕ್ತವಾಗುತ್ತಿದೆ. ಕಳೆದ ಹಲವಾರು ಪಂದ್ಯಗಳಿಂದ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಆಡಿದ ಮೂರು ಇನಿಂಗ್ಸ್ ಗಳಲ್ಲಿ ಅವರು ಗಳಿಸಿದ್ದು ಕೇವಲ 38 ರನ್ ಮಾತ್ರ. ಹೀಗಿದ್ದು ಕೂಡ ಅವರನ್ನು ಮುಂದಿನ ಟೆಸ್ಟ್ ಸರಣಿಗಳಿಗೆ ಆಯ್ಕೆ ಮಾಡಲಾಗಿದೆ.
ಇದೀಗ ಬಿಸಿಸಿಐ ರಾಹುಲ್ ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಅದೇನೆಂದರೆ ಇಷ್ಟು ದಿನ ಅವರ ಹೆಸರಿನ ಮುಂದೆ ಅವರಿಗೆ ಉಪನಾಯಕನ ಸ್ಥಾನ ಕಲ್ಪಿಸಲಾಗಿತ್ತು. ಆದರೆ ಇದೀಗ ಮಂಡಳಿ ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಆಯ್ಕೆ ಪಟ್ಟಿಯಲ್ಲಿ ರಾಹುಲ್ ಅವರ ಹೆಸರಿನ ಮುಂದೆ ಉಪನಾಯಕನ ಸ್ಥಾನವನ್ನು ತೆಗೆದುಹಾಕಲಾಗಿದೆ. ಈ ಮೂಲಕ ರಾಹುಲ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದು, ಇನ್ನು ಮುಂದೆಯೂ ಇದೇ ರೀತಿಯ ಕಳಪೆ ಪ್ರದರ್ಶನ ಮುಂದುವರೆದರೆ ಅವರನ್ನು ತಂಡದಿಂದ ಹೊರಹಾಕಬಹುದಾದ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ಇದನ್ನು ಓದಿ..Cricket News: ಮದುವೆಯಾದ ಮೇಲೆ ಕುಲಾಯಿಸಿದ ರಾಹುಲ್ ಅದೃಷ್ಟ; ತಂಡದಲ್ಲಿ ಏನೋ ಪ್ರಾಯೋಜನಕ್ಕೆ ಬಾರದೆ ಇದ್ದರೂ ಮತ್ತೊಂದು ಸಿಹಿ ಸುದ್ದಿ. ಏನು ಗೊತ್ತೇ?
Comments are closed.