Kannada News: ಅಣ್ಣಾವ್ರು ಬಂದು, ವಿಷ್ಣುವರ್ಧನ್ ರವರನ್ನು ಹೊಸ ಸಿನಿಮಾ ಮುಹೂರ್ತಕ್ಕೆ ಕರೆದಾದ ವಿಷ್ಣು ಸರ್ ಮಾಡಿದ್ದೇನು ಗೊತ್ತೇ? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?
Kannada News: ವರನಟ ಡಾಕ್ಟರ್ ರಾಜಕುಮಾರ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರು. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಅಪೂರ್ವ ಕೊಡುಗೆ ನೀಡಿದ ಈ ಇಬ್ಬರು ಮಹನೀಯರು ಎಂದೆಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಉಳಿದಿರುತ್ತಾರೆ. ಅಲ್ಲದೆ ಡಾ. ರಾಜ್ ಮತ್ತು ವಿಷ್ಣು ಇಬ್ಬರಿಗೂ ಕೂಡ ಅಪಾರವಾದ ಪ್ರೀತಿ ಇತ್ತು, ಪರಸ್ಪರ ಗೌರವವಿತ್ತು. ಇಬ್ಬರ ನಡುವೆಯೂ ಉತ್ತಮ ಬಾಂಧವ್ಯ ಹಾಗೂ ಸ್ನೇಹವಿತ್ತು. ಇಷ್ಟು ಮಾತ್ರವಲ್ಲದೆ ಡಾ. ರಾಜಕುಮಾರ್ ತಮ್ಮ ಚಿತ್ರ ಒಂದರ ಮುಹೂರ್ತಕ್ಕೆ ವಿಷ್ಣು ಅವರೇ ಬರಬೇಕೆಂದು ಪಟ್ಟು ಹಿಡಿದಿದ್ದರಂತೆ. ತಮ್ಮ ಚಿತ್ರದ ಮಹೂರ್ತಕ್ಕೆ ವಿಷ್ಣುವರ್ಧನ್ ಆಗಮಿಸಬೇಕು ಎಂದು ಅವರು ನೇರವಾಗಿ ವಿಷ್ಣುವರ್ಧನ್ ಅವರ ಬಳಿ ಕೇಳಿಕೊಂಡಿದ್ದರಂತೆ.
1987ರಲ್ಲಿ ತೆರೆಕಂಡ ಶ್ರುತಿ ಸೇರಿದಾಗ ಚಿತ್ರವು ಆ ವರ್ಷ ಬಿಡುಗಡೆಗೊಂಡ ಜನಪ್ರಿಯ ಚಿತ್ರಗಳಲ್ಲೊಂದು. ನಾಯಕನಟನಾಗಿ ಡಾಕ್ಟರ್ ರಾಜ್ ಅಭಿನಯಿಸಿದ್ದರೆ ಮುಖ್ಯ ಭೂಮಿಕೆಯಲ್ಲಿ ಮಾಧವಿ, ಗೀತಾ, ಅಶ್ವಥ್, ಉಮೇಶ್ ಸೇರಿದಂತೆ ಬಹು ತಾರಾಗಣವಿದ್ದ ಈ ಚಿತ್ರ ಅತ್ಯಂತ ಜನಪ್ರಿಯವಾಗಿತ್ತು. ನಮ್ಮ ಜೀವನದ ಎಲ್ಲ ಸಂದರ್ಭಗಳಲ್ಲಿಯೂ ಜ್ಯೋತಿಷ್ಯವೇ ಅಂತಿಮವಲ್ಲ. ಅದು ಕೆಲವೊಮ್ಮೆ ಪ್ರಯೋಜನಕ್ಕೆ ಬರುತ್ತದೆ. ಆದರೆ ಜ್ಯೋತಿಷ್ಯವೆ ಎಲ್ಲವೂ ಅಲ್ಲ ಎನ್ನುವ ವಿಚಾರವನ್ನು ತಿಳಿಸಿಕೊಟ್ಟ ಚಿತ್ರವಿದು. ಚಿ. ಉದಯಶಂಕರ್ ಅವರ ಸಹೋದರ ಚಿ. ದತ್ತ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಈ ಚಿತ್ರದ ಮುಹೂರ್ತಕ್ಕೆ ಡಾಕ್ಟರ್ ರಾಜಕುಮಾರ್ ಅವರು ವಿಷ್ಣುವರ್ಧನ್ ಅವರೇ ಬರಬೇಕೆಂದು ಪಟ್ಟು ಹಿಡಿದಿದ್ದರಂತೆ. ಇದನ್ನು ಓದಿ..Kannada News: ಚಿಕ್ಕ ವಯಸ್ಸಿನಿಂದಲೂ ತೋಪೆರ್ ಆಗಿರುವ ಈ ಬಾಲಕಿ ಇಂದು ದೇಶವೇ ಬಾಯ್ಬಿಟ್ಟು ನೋಡುವ ನಟಿ. ಯಾರು ಗೊತ್ತೇ ಆ ಅಪ್ಸರೆ??
ಸ್ವತಃ ಡಾಕ್ಟರ್ ರಾಜ್ ವಿಷ್ಣುವರ್ಧನ್ ಅವರನ್ನು ಚಿತ್ರದ ಮಹೂರ್ತಕ್ಕೆ ಬರಬೇಕಾಗಿ ಆಹ್ವಾನಿಸಿದ್ದರಂತೆ. ಡಾ. ರಾಜ್ ಅವರ ಮೇಲೆ ಅಪಾರ ಅಭಿಮಾನ ಮತ್ತು ಗೌರವ ಇಟ್ಟುಕೊಂಡಿದ್ದ ವಿಷ್ಣುವರ್ಧನ್ ಅವರು ಕೇಳಿದ ತಕ್ಷಣವೇ ಒಪ್ಪಿಕೊಂಡರಂತೆ. ಚಿತ್ರದ ಮಹೂರ್ತದ ದಿನ ಆಗಮಿಸಿ ಚಿತ್ರತಂಡದ ಜೊತೆಗೆ ಸಾಕಷ್ಟು ಕಾಲ ಕಳೆದರಂತೆ. ಶ್ರುತಿ ಸೇರಿದಾಗ ಚಿತ್ರದ ಮುಹೂರ್ತದಲ್ಲಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು. ಈ ಮೂಲಕ ಶೃತಿ ಸೇರಿದಾಗ ಚಿತ್ರಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಚಾಲನೆ ನೀಡಿದ್ದರು. ಇಷ್ಟು ಮಾತ್ರವಲ್ಲದೆ ಡಾಕ್ಟರ್ ರಾಜ್ ಅವರ ಅನೇಕ ಚಿತ್ರಗಳ ಮುಹೂರ್ತಗಳಲ್ಲಿ ವಿಷ್ಣುವರ್ಧನ್ ಭಾಗಿಯಾಗಿದ್ದಾರೆ. ಅಲ್ಲದೆ ಸ್ವತಃ ಡಾಕ್ಟರ್ ರಾಜಕುಮಾರ್ ಅವರು ಸಹ ವಿಷ್ಣುವರ್ಧನ್ ಅವರ ಅನೇಕ ಚಿತ್ರಗಳ ಮುಹೂರ್ತ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಓದಿ..Kannada News: ಬಿಗ್ ಶಾಕ್: ಸ್ವರ ಭಾಸ್ಕರ್ ರವರಿಗೆ ಬಿಗ್ ಶಾಕ್: ಎರಡೇ ದಿನಕ್ಕೆ ಗಂಡ ಮಾಡಿದ್ದೇನು ಗೊತ್ತೇ??
Comments are closed.