Cricket News: ನಾಯಕನಾಗಿ ಫೇಲ್: ಬ್ಯಾಟಿಂಗ್ ನಲ್ಲೂ ಅಂತೂ ಅಟ್ಟರ್ ಫ್ಲಾಪ್: ರೋಹಿತ್ ರನ್ ಗಳಿಸದೆ ಇರಲು ಅದೇ ಕಾರಣನ??
Cricket News: ಕಿಂಗ್ ಕೋಹ್ಲಿ (Virat Kohli) ಅವರ ನಂತರ ರೋಹಿತ್ ಶರ್ಮಾ (Rohit Sharma) ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಾಯಕನಾಗಿದ್ದಾರೆ. ಆದರೆ ಪ್ರಸ್ತುತ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ನಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಏಕೆಂದರೆ, ರೋಹಿತ್ ಶರ್ಮಾ ಅವರು ಆಡುತ್ತಿರುವ ಪಂದ್ಯಗಳಲ್ಲಿ ರನ್ ಸರಾಸರಿ ತೀವ್ರವಾಗಿ ಕಡಿಮೆ ಆಗುತ್ತಲೇ ಇದೆ. ಟಿ20 ವಿಶ್ವಕಪ್ (T20 World Cup) ನಲ್ಲಿ ವೈಫಲ್ಯ ಅನುಭವಿಸಿದ ರೋಹಿತ್ ಶರ್ಮಾ ಅವರು, ಬಾಂಗ್ಲಾದೇಶ್ (India vs Bangladesh) ವಿರುದ್ಧದ ಸೀರೀಸ್ ನಲ್ಲಿ ಕೂಡ ಉತ್ತಮವಾಗಿ ರನ್ಸ್ ಗಳಿಸಲಿಲ್ಲ.
ರೋಹಿತ್ ಅವರು 31 ಎಸೆತಗಳಲ್ಲಿ 27 ರನ್ಸ್ ಗಳಿಸಿ ಔಟ್ ಆದರು. ಫಿಟ್ನೆಸ್ ಕಾರಣದಿಂದ ರೋಹಿತ್ ಶರ್ಮಾ ಅವರು ಈ ವರ್ಷ ಕೆಲವು ಪಂದ್ಯಗಳನ್ನು ಆಡಿಲ್ಲ, ಫಿಟ್ನೆಸ್ ಸಮಸ್ಯೆ ಇಂದ ಟಿ20 ಪಂದ್ಯಗಳಲ್ಲಿ ಹೆಚ್ಚು ರನ್ಸ್ ಗಳಿಸಲು ಸಾಧ್ಯ ಅಗುತ್ತಿಲ್ಲದೆ ಇರಬಹುದು ಎನ್ನುವ ಅಭಿಪ್ರಾಯಗಳು ಸಹ ವ್ಯಕ್ತವಾಗಿತ್ತು, ಅದರ ಓಡಿಐ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಸಹ ರೋಹಿತ್ ಶರ್ಮಾ ಅವರು ವೈಫಲ್ಯ ಅನುಭವಿಸುತ್ತಿದ್ದಾರೆ. ಈ ವರ್ಷ ಎರಡು ಟೆಸ್ಟ್ ಪಂದ್ಯಗಳನ್ನಾಡಿ 90 ರನ್ಸ್ ಗಳಿಸಿದ್ದಾರೆ, 7 ಓಡಿಐ ಪಂದ್ಯಗಳಲ್ಲಿ 198 ರನ್ಸ್ ಗಳಿಸಿದ್ದಾರೆ.. 29 ಟಿ20 ಪಂದ್ಯಗಳಲ್ಲಿ 656 ರನ್ಸ್ ಗಳಿಸಿದ್ದಾರೆ. ರೋಹಿತ್ ಅವರ ಕೆರಿಯರ್ ನಲ್ಲಿ ಎರಡನೇ ಸಾರಿ ಇಷ್ಟು ಕಡಿಮೆ ಸ್ಕೋರ್ ಮಾಡಿದ್ದಾರೆ. ಇದನ್ನು ಓದಿ.. Cricket News: ಆರಂಭಿಕ ಸ್ಥಾನ ಕೇಳಿದ್ದ ಪಂತ್, ದಿಡೀರ್ ಎಂದು ರೋಹಿತ್ ಮುಂದೆ ಇತ್ತ ಹೊಸ ಬೇಡಿಕೆ ಏನು ಗೊತ್ತೇ?? ದಂಗಾದ ರೋಹಿತ್ ಶರ್ಮ.
ರೋಹಿತ್ ಶರ್ಮಾ ಅವರು ಇಷ್ಟು ವೈಫಲ್ಯ ಅನುಭವಿಸಲು ಕಾರಣ ಕ್ಯಾಪ್ಟನ್ಸಿಯ ಹೊರೆ ಇರಬಹುದು ಎಂದು ಸಹ ಹೇಳಲಾಗುತ್ತಿದೆ. ಕ್ಯಾಪ್ಟನ್ ಆದ ಮೇಲೆ ರೋಹಿತ್ ಅವರ ಬ್ಯಾಟಿಂಗ್ ಕೆರಿಯರ್ ನಲ್ಲಿ ವೈಫಲ್ಯ ಶುರುವಾಗಿರುವ ಕಾರಣ, ಅವರಿಗೆ ಒತ್ತಡ ಕಡಿಮೆ ಮಾಡಲು ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಟಿ20 ತಂಡದ ಕ್ಯಾಪ್ಟನ್ ಆಗಿ ಮಾಡಬೇಕು ಎಂದು ಚರ್ಚೆ ನಡೆಯುತ್ತಿದೆ. ಈಗಾಗಲೇ ಕೆಲವು ಸೀರೀಸ್ ಗಳನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದರೆ. ಇನ್ನುಳಿದ ಎರಡು ಮಾದರಿಯ ಟೀಮ್ ಗೆ ರೋಹಿತ್ ಅವರೇ ಮುಂದುವರೆಯುತ್ತಾರಾ, ಫಿಟ್ನೆಸ್ ಸರಿದೂಗಿಸಿ, ಮತ್ತೆ ಫಾರ್ಮ್ ಗೆ ಬರುತ್ತಾರಾ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ.. Automobiles: ನೋಡುವುದಕ್ಕೆ ಬಹಳ SIMPLE ONE (ಸಿಂಪಲ್ ಒನ್) ಎನಿಸಿದರೂ, ಬೆಲೆ ಹಾಗೂ ಇದರ ಪವರ್ ನೋಡಿದರೆ ಇಂದೇ ಹೋಗಿ ಮನೆಗೆ ತಗೊಂಡ್ ಬರ್ತೀರಾ.
Comments are closed.