Cricket News: ಮತ್ತೊಮ್ಮೆ ಮಹಾ ಎಡವಟ್ಟು ಮಾಡಲು ಹೊರಟ ರೋಹಿತ್; ಎಂಟ್ರಿ ಕೊಡುತ್ತಿದ್ದಂತೆ ಟಾಪ್ ಆಟಗಾರ ಔಟ್. ಇವನು ಯಾವ ಸೀಮೆ ನಾಯಕ ಎಂದ ಫ್ಯಾನ್ಸ್.

Cricket News: ಬಾಂಗ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (Team India) ತಂಡವು ಅಲ್ಲಿ ಮೂರು ಏಕದಿನ ಪಂದ್ಯಗಳ ನಂತರ ಇದೀಗ ಟೆಸ್ಟ್ ಮ್ಯಾಚ್ ಗಳನ್ನು ಆಡುತ್ತಿದೆ. ಈಗಾಗಲೇ ಒಂದು ಟೆಸ್ಟ್ ಮ್ಯಾಚ್ ಮುಗಿದಿದ್ದು ಎರಡನೇ ಟೆಸ್ಟ್ ಮ್ಯಾಚ್ಗಾಗಿ ದಿನಗಣನೆ ಶುರು ಆಗಿದೆ. ಈ ಮಧ್ಯೆ ಹೆಬ್ಬೆರಳ ಗಾಯದಿಂದಾಗಿ ರೋಹಿತ್ ಶರ್ಮಾ (Rohit Sharma) ತಂಡದಿಂದ ಹೊರಗುಳಿದಿದ್ದರು. ಅವರು ಈ ಹಿಂದೆ ನಡೆದ ಮೊದಲ ಟೆಸ್ಟ್ ಮ್ಯಾಚ್ ನಲ್ಲಿ ಭಾಗಿಯಾಗಿರಲಿಲ್ಲ. ಚಿಕಿತ್ಸೆಗಾಗಿ ಅವರು ಮತ್ತೆ ಭಾರತಕ್ಕೆ ಮರಳಿದ್ದರು. ಇದೀಗ ಅವರು ಗುಣಮುಖರಾಗಿದ್ದು ಆಡಲು ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಮ್ಯಾಚ್ ಗೆ ಅವರು ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಒಬ್ಬ ಉತ್ತಮ ಆಟಗಾರನನ್ನು ರೋಹಿತ್ ಕಾರಣದಿಂದಾಗಿ ತಂಡದಿಂದ ಹೊರಗಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬೆಳವಣಿಗೆಗೆ ನೆಟ್ಟಿಗರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಹೆಬ್ಬೆರಳ ಇನ್ಜುರಿ ಯಿಂದಾಗಿ ಕೆಲವು ಪಂದ್ಯಗಳಿಂದ ತಂಡದ ನಾಯಕ ರೋಹಿತ್ ಶರ್ಮ ಹೊರಗುಳಿದಿದ್ದರು. ಆದರೆ ಇದೀಗ ತಾವು ಫಿಟ್ ಇರುವುದಾಗಿ, ಆಡಲು ಶಕ್ತದಿರುವುದಾಗಿ ಅವರು ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರು ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ರೋಹಿತ್ ತಂಡಕ್ಕೆ ವಾಪಸ್ ಆದರೆ ಒಬ್ಬ ಆಟಗಾರ ತಂಡದಿಂದ ಹೊರ ನಡೆಯಬೇಕಾಗುತ್ತದೆ. ಈ ಕುರಿತಾಗಿ ನಿಖರ ಮಾಹಿತಿಯನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ನೀಡಿದ್ದಾರೆ. ಸಂಜಯ್ ಮಂಜೇಕರ್ ಅವರು “ರೋಹಿತ್ ಫಿಟ್ ಆಗಿರುವ ಕಾರಣದಿಂದ ತಂಡಕ್ಕೆ ಮತ್ತೆ ಮರಳುತ್ತಿದ್ದಾರೆ. ಹೀಗಾಗಿ ತಂಡದಿಂದ ಒಬ್ಬ ಆಟಗಾರನನ್ನು ಕೈ ಬಿಡಲಾಗುತ್ತದೆ. ಕೆ ಎಲ್ ರಾಹುಲ್ (K L Rahul) ಅವರನ್ನು ಯಾವುದೇ ಕಾರಣಕ್ಕೂ ತಂಡದಿಂದ ಕೈ ಬಿಡಲಾಗುವುದಿಲ್ಲ. ರೋಹಿತ್ ಜೊತೆಗೆ ಆಡುವುದಕ್ಕೆ ರಾಹುಲ್ ಮೊದಲ ಆಯ್ಕೆಯಾಗಿದ್ದಾರೆ. ಹೀಗಾಗಿ ಶುಭಮನ್ ಗಿಲ್ (Shubman Gill) ಅವರನ್ನೇ ತಂಡದಿಂದ ಹೊರಗಿಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Cricket News: ಟಿ 20 ವಿಶ್ವಕಪ್ ಸೋಲಿನ ನಂತರ ಬುದ್ದಿ ಕಲಿಯಿತೇ ಭಾರತ? ಶ್ರೀಲಂಕಾ ಸರಣಿಗೆ ಆಯ್ಕೆಯಾದ ತಂಡ ಹೇಗಿದೆ ಗೊತ್ತೇ?

cricket news rohit shubhman gill | Cricket News: ಮತ್ತೊಮ್ಮೆ ಮಹಾ ಎಡವಟ್ಟು ಮಾಡಲು ಹೊರಟ ರೋಹಿತ್; ಎಂಟ್ರಿ ಕೊಡುತ್ತಿದ್ದಂತೆ ಟಾಪ್ ಆಟಗಾರ ಔಟ್. ಇವನು ಯಾವ ಸೀಮೆ ನಾಯಕ ಎಂದ ಫ್ಯಾನ್ಸ್.
Cricket News: ಮತ್ತೊಮ್ಮೆ ಮಹಾ ಎಡವಟ್ಟು ಮಾಡಲು ಹೊರಟ ರೋಹಿತ್; ಎಂಟ್ರಿ ಕೊಡುತ್ತಿದ್ದಂತೆ ಟಾಪ್ ಆಟಗಾರ ಔಟ್. ಇವನು ಯಾವ ಸೀಮೆ ನಾಯಕ ಎಂದ ಫ್ಯಾನ್ಸ್. 2

ಶುಭಮನ್ ಅತ್ಯುತ್ತಮ ಆಟಗಾರ ಎನ್ನುವುದನ್ನು ಕಳೆದ ಪಂದ್ಯಗಳಲ್ಲಿ ತೋರಿಸಿದ್ದಾರೆ. ಆದರೂ ಕೂಡ ಅವರನ್ನೇ ತಂಡದಿಂದ ಹೊರಗಿಡಲಾಗುತ್ತದೆ. ಆದರೆ ಇತ್ತೀಚಿಗೆ ಕಳೆಪೆ ಪ್ರದರ್ಶನ ತೋರುತ್ತಿರುವ ಕೆಎಲ್ ರಾಹುಲ್ ಅವರನ್ನು ಮಾತ್ರ ತಂಡದಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ ಎಂದು ಸಂಜಯ್ ಟೀಕಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್ ಅದ್ಭುತವಾಗಿ ಇನ್ನಿಂಗ್ಸ್ ಆರಂಭಿಸಿ ತಮ್ಮ ರೋಚಕ ಬ್ಯಾಟಿಂಗ್ ಪ್ರದರ್ಶನ ಏನು ಎನ್ನುವುದನ್ನು ಸಾಬೀತು ಮಾಡಿದರು. ಎರಡನೇ ಇವಿನಿಂಗ್ಸ್ ನಲ್ಲಿ ಅವರು ರೋಚಕ 110 ರನ್ಗಳನ್ನು ನೀಡಿದರು. ಗಿಲ್ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಮೊದಲ ಟೆಸ್ಟ್ ಪಂದ್ಯದ ಶತಕವನ್ನು ದಾಖಲಿಸಿದ್ದಾರೆ. ಗಿಲ್ ಇದುವರೆಗೆ ಭಾರತದ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟಾರೆ 579 ರನ್ಗಳನ್ನು ಸಿಡಿಸಿದ್ದಾರೆ.

ಇತ್ತ ಕೆಎಲ್ ರಾಹುಲ್ ಕೆಲವು ಪಂದ್ಯಗಳಿಂದ ಕಳೆಪೆ ಪ್ರದರ್ಶನ ತೋರುತ್ತಿದ್ದಾರೆ. ಅಲ್ಲದೆ ಅವರು ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಕೂಡ ಕೆ ಎಲ್ ರಾಹುಲ್ ಅವರನ್ನೇ ಉಳಿಸಿಕೊಂಡು ಅತ್ಯುತ್ತಮವಾಗಿ ಆಡುತ್ತಿರುವ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡಲಾಗುತ್ತಿರುವುದರ ಕುರಿತಾಗಿ ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಖಂಡಿಸುತ್ತಿದ್ದಾರೆ. ರೋಹಿತ್ ಅವರನ್ನು “ಇವರೆಂಥ ನಾಯಕ? ಯಾರನ್ನು ಉಳಿಸಿಕೊಳ್ಳಬೇಕು, ಕಳಿಸಬೇಕು ಎನ್ನುವುದನ್ನೇ ನಿರ್ಧರಿಸಲು ಇವರಿಗೆ ಸಾಧ್ಯವಿಲ್ಲ” ಎಂದು ಟೀಕಿಸುತ್ತಿದ್ದಾರೆ. ಈ ಒಂದು ನಿರ್ಧಾರದ ಕುರಿತಾಗಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಇದನ್ನು ಓದಿ.. Cricket News: ತನ್ನ ದೇಶದಲ್ಲಿ ಆಡಿ ಎಂದ ಐರ್ಲೆಂಡ್ ದೇಶಕ್ಕೆ, ಗಟ್ಟಿ ನಿರ್ಧಾರ ಮಾಡಿ ಉತ್ತರಕೊಟ್ಟ ಸಂಜು ಸ್ಯಾಮ್ಸನ್. ಉತ್ತಮ ನಿರ್ಧಾರ, ಕ್ರಿಕೆಟಿಗೆ ನ್ಯಾಯ ಎಂದ ಫ್ಯಾನ್ಸ್.

Comments are closed.