Cricket News: ಆಯ್ಕೆಯಾದರು ತಂಡದಲ್ಲಿ ಸಿಗುತ್ತಿಲ್ಲ ಚಾನ್ಸ್, ಮತ್ತೇನು ಮಾಡಬೇಕು ಎಂದು ತಿಳಿಯದೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಂಜು, ಏನು ಗೊತ್ತೇ?

Cricket News: ನ್ಯೂಜಿಲೆಂಡ್ (India vs New Zealand) ಪ್ರವಾಸದಲ್ಲಿ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ (Sanju Samson) ಅವರಿಗೆ ಅಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಲು ಅವಕಾಶವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರು ಅವರಿಗೆ ಅದಕ್ಕಿಂತ ಹೆಚ್ಚಿನ ಅವಕಾಶಗಳು ದೊರೆಯಲೇ ಇಲ್ಲ. ಆನಂತರ ನಡೆಯುತ್ತಿರುವ ಬಾಂಗ್ಲಾ ದೇಶದ ಏಕದಿನ ಪಂದ್ಯಗಳಿಗೂ ಅವರಿಗೆ ಸ್ಥಾನ ದೊರಕಲಿಲ್ಲ. ಇದರಿಂದ ಸಂಜು ಸಾಕಷ್ಟು ಬೇಸರ ಪಟ್ಟುಕೊಂಡರು. ಸಂಜು ಅವರಿಗೆ ಅವಕಾಶ ನೀಡದೇ ಇರುವುದಕ್ಕೆ ಹಿರಿಯ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಸಹ ಆಕ್ರೋಶ ಹೊರಹಾಕಿದ್ದರು. ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿರುವ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಭಾರತ ತಂಡದಲ್ಲಿ ಅವಕಾಶ ಸಿಗದ ಕಾರಣ ಸಂಜು ಸ್ಯಾಮ್ಸನ್ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಟೀಮ್ ಇಂಡಿಯಾ (Team India) ತಮ್ಮನ್ನು ನಿರ್ಲಕ್ಷ ಮಾಡಿದ್ದರ ಫಲವಾಗಿ ಅವರು ಒಂದು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ತಂಡದಲ್ಲಿ ಅವಕಾಶದಿಂದ ವಂಚಿತರಾದ ಸಂಜು ಇದೀಗ ರಣಜಿ ಟ್ರೋಫಿಯಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಇದಕ್ಕಾಗಿ ಅಭ್ಯಾಸವನ್ನು ಶುರು ಮಾಡಿದ್ದಾರೆ. ಎಷ್ಟೇ ಉತ್ತಮ ಪ್ರದರ್ಶನ ತೋರಿದರು ಸಂಜು ಅವರನ್ನು ನಿರ್ಲಕ್ಷ ಮಾಡುತ್ತಿರುವುದರಿಂದ ಅವರಿಗೆ ಬೇಸರವಾಗಿ ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ರಣಜಿ ಟ್ರೋಫಿಯಲ್ಲಿ (Ranji Trophy) ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮತ್ತೆ ಆಯ್ಕೆಯಾಗುವ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಅವರು ಗಮನ ಹರಿಸಿದ್ದಾರೆ. 2023 ಜನವರಿ ತಿಂಗಳಿನಲ್ಲಿ ಭಾರತ ತಂಡವು ಶ್ರೀಲಂಕಾ (India vs Srilanka) ವಿರುದ್ಧ ಏಕದಿನ ಮತ್ತು ಟಿ ಟ್ವೆಂಟಿ ಪಂದ್ಯಗಳನ್ನು ಆಡಲಿದೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿ ತಮ್ಮ ಆಟ ಮತ್ತು ಸಾಮರ್ಥ್ಯದಿಂದಾಗಿ ಅವರು ಮತ್ತೆ ತಂಡಕ್ಕೆ ಆಯ್ಕೆಯಾಗುವ ಅಧಿಕಾರವನ್ನು ಪಡೆದುಕೊಳ್ಳುವ ತಯಾರಿಯಲ್ಲಿದ್ದಾರೆ. ಇದನ್ನು ಓದಿ..IPL 2023: ಬಿಗ್ ಬ್ರೇಕಿಂಗ್, ಐಪಿಎಲ್ ಹರಾಜಿಗೂ ಮುನ್ನವೇ ಐಪಿಎಲ್ ನಿಂದ ಹೊರನಡೆದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ಸ್. ಯಾರ್ಯಾರು ಗೊತ್ತೇ??

cricket news sanju 1 | Cricket News: ಆಯ್ಕೆಯಾದರು ತಂಡದಲ್ಲಿ ಸಿಗುತ್ತಿಲ್ಲ ಚಾನ್ಸ್, ಮತ್ತೇನು ಮಾಡಬೇಕು ಎಂದು ತಿಳಿಯದೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಂಜು, ಏನು ಗೊತ್ತೇ?
Cricket News: ಆಯ್ಕೆಯಾದರು ತಂಡದಲ್ಲಿ ಸಿಗುತ್ತಿಲ್ಲ ಚಾನ್ಸ್, ಮತ್ತೇನು ಮಾಡಬೇಕು ಎಂದು ತಿಳಿಯದೆ ಮಹತ್ವದ ನಿರ್ಧಾರ ತೆಗೆದುಕೊಂಡ ಸಂಜು, ಏನು ಗೊತ್ತೇ? 2

ಕೆ ಎಲ್ ರಾಹುಲ್ (K L Rahul) ಅವರು ಭಾರತ ತಂಡದ ಕೀಪರ್ ಆಗಿ ಸ್ಥಾನ ಪಡೆದ ನಂತರ ಸಂಜು ಅವರಿಗೆ ಇನ್ನಷ್ಟು ಅವಕಾಶಗಳು ಸಿಗುವ ಸಾಧ್ಯತೆ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ರಾಹುಲ್ ಬಂದ ನಂತರ ಸಂಜು ಅವರು ಅವಕಾಶವನ್ನು ವಂಚಿತರಾಗುತ್ತಿದ್ದಾರೆ. ಇದೀಗ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಆಯ್ಕೆಗಾರರ ಗಮನ ಸೆಳೆಯುವ ತಂತ್ರವನ್ನು ಅವರು ರೂಪಿಸಿಕೊಂಡಿದ್ದಾರೆ. ದೇಶಿಯ ಟೂರ್ನಿಗಳಲ್ಲಿ ಸಂಜು ಕೇರಳ ಪರವಾಗಿ ಆಡುತ್ತಾರೆ. ಹೀಗಾಗಿ ಕೇರಳ ತಂಡಕ್ಕೂ (Team Kerala) ತಾವು ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. ಇನ್ನೂ ಕೇರಳದ ಕೊಚ್ಚಿಯಲ್ಲಿ (Kochi) ಅವರು ತಮ್ಮ ಪಂದ್ಯಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ವಿಕೆಟ್ ಕೀಪರ್ ಮತ್ತು ಬ್ಯಾಟರಾದ ಸಂಜು ಸ್ಯಾಮ್ಸನ್ ಪರಿಶ್ರಮವಹಿಸಿ ಸಿದ್ಧತೆ ನಡೆಸುತ್ತಿದ್ದು, ಮುಂದಿನ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡದಲ್ಲಿ ಅವಕಾಶ ಪಡೆಯುವ ಸಿದ್ಧತೆಯಲ್ಲಿದ್ದಾರೆ. ಇದನ್ನು ಓದಿ.. Cricket News: ನಾಯಕನಾಗಿ ಫೇಲ್: ಬ್ಯಾಟಿಂಗ್ ನಲ್ಲೂ ಅಂತೂ ಅಟ್ಟರ್ ಫ್ಲಾಪ್: ರೋಹಿತ್ ರನ್ ಗಳಿಸದೆ ಇರಲು ಅದೇ ಕಾರಣನ??

Comments are closed.