Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ?

Kannada News: ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆಯ ಮೂಲಕ ಒಂದು ಕಾಲದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದ ಅವರು ಈಗಲೂ ಕೂಡ ಅದೇ ಜನಪ್ರಿಯತೆ ಮತ್ತು ಸೌಂದರ್ಯವನ್ನು ಅವರು ಉಳಿಸಿಕೊಂಡು ಬಂದಿದ್ದಾರೆ. ಒಂದು ಕಾಲದ ಟಾಪ್ ನಟಿಯಾಗಿದ್ದ ಅವರು ಕೆಲವು ವರ್ಷಗಳಿಂದ ಅಂತ ಜನಪ್ರಿಯ ಚಿತ್ರಗಳಿಗೆ ನಟಿಸಿಲ್ಲ. ಆದರೆ ಅವರು ಈ ಮೊದಲು ನಟಿಸಿರುವ ಅದೆಷ್ಟೋ ಚಿತ್ರಗಳು ಇಂದಿಗೂ ಕೂಡ ಪಾಪುಲರ್ ಆಗಿವೆ ಎಂದು ಹೇಳಬಹುದು. ಈಗಲೂ ಕೂಡ ನಟಿ ರಾಧಿಕಾ ಚಿತ್ರರಂಗದಲ್ಲಿ ಬಿಸಿಯಾಗಿದ್ದಾರೆ. ನಟನೆ ಮತ್ತು ನಿರ್ಮಾಣ ಎರಡು ಕಡೆಗೆ ಅವರು ಗಮನಹರಿಸಿದ್ದಾರೆ ಎಂದು ಹೇಳಬಹುದು. ಚಿತ್ರರಂಗದಲ್ಲಿ ದೊಡ್ಡ ಮೊತ್ತದ ಸಂಪಾದನೆಯನ್ನು ಮಾಡಿದ್ದಾರೆ. ಆದರೆ ಕಡುಬಡತನದಿಂದ ಬಂದ ನಟಿ ರಾಧಿಕಾ ಅವರ ಒಟ್ಟು ಸಂಪಾದನೆ ಎಷ್ಟು ಎನ್ನುವುದು ಗೊತ್ತಾ?

ನಟಿ ರಾಧಿಕಾ ಕುಮಾರಸ್ವಾಮಿ ಈಗ ಚಿತ್ರರಂಗಕ್ಕೆ ಬಂದ ನಂತರ ಎಷ್ಟೇ ಕೋಟಿ ಸಂಪಾದನೆ ಮಾಡಿರಬಹುದು. ಆದರೆ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ಕಡುಬಡತನದಲ್ಲಿ ಹುಟ್ಟಿ ಬೆಳೆದ ಅವರು ಪ್ರತಿಯೊಂದಕ್ಕೂ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಎಂದು ಹೇಳಬಹುದು. ರಾಧಿಕಾ ಅವರಿಗೆ 2000 ದಲ್ಲಿ ರತನ್ ಎನ್ನುವವರೊಂದಿಗೆ ಮದುವೆಯಾಗುತ್ತದೆ. ರತನ್ ಅವರ ತಾಯಿ ಅಂದರೆ ರಾಧಿಕಾ ಅವರ ಅತ್ತೆಯ ಕಾರಣದಿಂದಲೇ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಆದರೆ 2002 ರಲ್ಲಿ ರಾಧಿಕಾ ಅವರ ಪತಿ ಮರಣವನ್ನಪ್ಪುತ್ತಾರೆ. ಆಗಷ್ಟೇ ರಾಧಿಕಾ ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲಕ್ಕೆ ಬರುತ್ತಿರುತ್ತಾರೆ. ಇದಾದ ಮೇಲೂ ಕೂಡ ರಾಧಿಕಾ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಚಿತ್ರರಂಗದ ಹಿನ್ನೆಲೆ ಇಲ್ಲದೆ ಬಂದ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯುರಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಆನಂತರ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಮದುವೆಯಾಗುತ್ತಾರೆ. 2006ರಲ್ಲಿ ಇಬ್ಬರು ಮದುವೆ ಆಗಿರುತ್ತಾರೆ. ಆದರೆ ಇದು ಬಹಿರಂಗವಾಗಿ ಎಲ್ಲರಿಗೂ ಗೊತ್ತಾಗಿದ್ದು ಮಾತ್ರ 2010ರಲ್ಲಿ. ಇದನ್ನು ಓದಿ..Kannada news: ಬಾಯ್ತಪ್ಪಿ ಮಿಸ್ ಆಗಿ ತಾನೇ ಕುದ್ದು ಕ್ರಾಂತಿ ಸಿನೆಮಾದ ಬಜೆಟ್ ಎಷ್ಟು ಎಂಬುದನ್ನು ತೆರೆದಿಟ್ಟ ದರ್ಶನ್, ಅದೆಷ್ಟು ಕೋತಿ ಅಂತೇ ಗೊತ್ತೇ??

radhika 5 | Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ?
Kannada News: ಬಡತನದಲ್ಲಿ ಹುಟ್ಟಿ, ಕಷ್ಟ ಪಟ್ಟು ಬೆವರು ಸುರಿಸಿ, ನಟಿಯಾಗಿ ಬೆಳೆದು ರಾಧಿಕಾ ರವರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತೇ? 2

ನಟಿ ರಾಧಿಕಾ ಅವರಿಗೆ ಶಮಿಕ (Shamika) ಎಂಬ ಮಗಳು ಇದ್ದಾರೆ. ಇನ್ನು ಮಗಳ ಹೆಸರಿನಲ್ಲಿ ಅವರು ನಿರ್ಮಾಣ ಸಂಸ್ಥೆಯನ್ನು ಮಾಡಿದ್ದು ಸಾಕಷ್ಟು ಚಿತ್ರಗಳಿಗೆ ಬಂಡವಾಳ ಕೂಡ ಹೂಡುತ್ತಿರುತ್ತಾರೆ. ಎಷ್ಟೋ ಹಳ್ಳಿಯ ಜನರು ಅವರ ಅಣ್ಣ ತಂಗಿ, ತವರಿಗೆ ಬಾ ತಂಗಿ ಚಿತ್ರಗಳನ್ನು ಇಂದಿಗೂ ನೆನಪಿಸಿಕೊಳ್ಳುತ್ತಿರುತ್ತಾರೆ ಎಂದರೆ ಅವರ ನಟನೆ ಎಷ್ಟರಮಟ್ಟಿಗೆ ಇರಬೇಕು ನೀವೇ ಯೋಚಿಸಿ. ಕಡು ಬಡತನದಿಂದ ಬಂದು ಸಾಕಷ್ಟು ಕಷ್ಟಪಟ್ಟು ಈಗ ರಾಧಿಕಾ ಮೇಲೆ ಬಂದಿದ್ದಾರೆ. ಇದೀಗ ಅವರು ಸಾಕಷ್ಟು ದುಡ್ಡು ಆಸ್ತಿ ಸಂಪಾದಿಸಿದ್ದಾರಂತೆ. ರಾಧಿಕಾ ತಮ್ಮ ಸ್ವಂತ ಊರು, ಮಂಗಳೂರು, ಬೆಂಗಳೂರು ಹೀಗೆ ಹಲವಾರು ಕಡೆ ಸ್ವಂತ ಮನೆಯನ್ನು ಹೊಂದಿದ್ದಾರೆ. ಈ ಮನೆಗಳ ಬೆಲೆಯೇ ಸುಮಾರು ಈ ಎಲ್ಲಾ ಮನೆಗಳ ಒಟ್ಟು ಬೆಲೆ ಸುಮಾರು 7 – 8 ಕೋಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು ಸಾಕಷ್ಟು ಕಡೆ ಸೈಟ್ ಹೊಂದಿರುವ ಅವರು ಕೆಲವೊಂದೆಡೆ ಕಂಪನಿಗಳಲ್ಲಿ ಶೇರು ಹಾಕಿದ್ದಾರಂತೆ. ಈ ಹಿಂದೆ ಐಟಿ ಅಧಿಕಾರಿಗಳು ರಾಧಿಕಾ ಅವರ ಮನೆಯ ಮೇಲೆ ದಾಳಿ ನಡೆಸಿದರು. ಆದರೆ ಅವರು ಸೂಕ್ತ ದಾಖಲೆಗಳನ್ನು ಒದಗಿಸಿದ್ದರು ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ??

Comments are closed.